ನವದೆಹಲಿ: ಭಾರತೀಯ ನೌಕಾಪಡೆಯಿಂದ ನಿವೃತ್ತಿಗೊಂಡಿರುವ ನೌಕೆ ಐಎನ್ಎಸ್ ವಿರಾಟ್ನ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗುವುದು ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಐಎನ್ಎಸ್ ವಿರಾಟ್ ಅನ್ನು ಯಾವುದೇ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಸುರಕ್ಷತೆ, ಭದ್ರತೆ ಇತ್ಯಾದಿಗಳ ದೃಷ್ಟಿಯಿಂದ, ಭಾರತೀಯ ನೌಕಾಪಡೆಯೊಂದಿಗೆ ಸಮಾಲೋಚನೆ ನಡೆಸಿ ಈ ನೌಕೆಯನ್ನು ಛಿದ್ರಗೊಳಿಸಲಾಗಿದೆ. ಛಿದ್ರ ಭಾಗಗಳನ್ನು ಮಾರಾಟ ಮಾಡಲಾಗುತ್ತದೆ” ಎಂದು ನಾಯಕ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರಿಪೇರಿ, ನೀರು ಮತ್ತು ವಿದ್ಯುತ್ ಸೇರಿದಂತೆ ಹಡಗಿಗೆ ದೊಡ್ಡ ಮಟ್ಟದಲ್ಲಿ ವ್ಯಯವನ್ನು ಮಾಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.
ಹಡಗನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಹಿಂದಿನ ಪ್ರಸ್ತಾಪಗಳು ಕೈಗೂಡಲಿಲ್ಲ ಎಂದು ಸಚಿವರು ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಈ ನೌಕೆಯನ್ನು ಕುಟುಂಬದ ರಜಾದಿನ ಕಳೆಯುವುದಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪದ ಮೇಲೆ ಐಎನ್ಎಸ್ ವಿರಾಟ್ ಇತ್ತೀಚಿಗೆ ಭಾರೀ ಸುದ್ದಿ ಮಾಡಿತ್ತು. 1987 ರಲ್ಲಿ ನವೀಕರಣದ ನಂತರ ಈ ನೌಕೆಯನ್ನು ಬ್ರಿಟಿಷ್ ನೌಕಾಪಡೆಯಿಂದ ಪಡೆಯಲಾಗಿತ್ತು. ಅಂದಿನಿಂದ ಸುಮಾರು 30 ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಇದು ಸೇವೆ ಸಲ್ಲಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.