ನವದೆಹಲಿ: ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ದಡಿಯಲ್ಲಿ ಇದುವರೆಗೆ 9 ಕೋಟಿ 62 ಲಕ್ಷ ವೈಯಕ್ತಿಕ ಮನೆಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಜಲಶಕ್ತಿ ರಾಜ್ಯ ಖಾತೆ ಸಚಿವ ರತ್ತಲ್ ಲಾಲ್ ಕಟಾರಿಯ ಅವರು ಲೋಕಸಭೆಗೆ ತಿಳಿಸಿದ್ದಾರೆ. “ದೇಶದ ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯಾಪ್ತಿಯು ಶೇ. 99 ಕ್ಕಿಂತ ಹೆಚ್ಚಾಗಿದೆ, ಇದು 2014 ರ ಅಕ್ಟೋಬರ್ 2 ರಂದು ಶೇ. 38ರಷ್ಟಿತ್ತು” ಎಂದಿದ್ದಾರೆ.
632 ಜಿಲ್ಲೆಗಳು, 30 ರಾಜ್ಯಗಳು, 2.50 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ಮತ್ತು ಐದು ಲಕ್ಷದ 67 ಸಾವಿರದ 498 ಗ್ರಾಮಗಳನ್ನು ಮಲವಿಸರ್ಜನೆ ಮುಕ್ತವೆಂದು ಘೋಷಿಸಲಾಗಿದೆ ಎಂದರು.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅತಿಸಾರ ಮತ್ತು ಮಲೇರಿಯಾವನ್ನು ಕಡಿಮೆ ಮಾಡಲು, ಹೆರಿಗೆ ಸಾವು ಮತ್ತು ಕಡಿಮೆ ಜನನ ತೂಕ (ನವಜಾತ ಶಿಶು 2.5 ಕಿ.ಗ್ರಾಂ ಗಿಂತ ಕಡಿಮೆ ತೂಕ ಹೊಂದಿರುವುದು) ಕಡಿಮೆ ಮಾಡಲು ಸಹಾಯ ಮಾಡಿದೆ ಎಂದಿದ್ದಾರೆ.
2019 ಜೂನ್ 14ಕ್ಕೆ ಅನ್ವಯವಾಗುವಂತೆ, 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ. 100 ರಷ್ಟು ವೈಯಕ್ತಿಕ ಮನೆ ಶೌಚಾಲಯ ವ್ಯಾಪ್ತಿಗೆ ಬರುತ್ತವೆ. ಸ್ವಚ್ಛ ಭಾರತ ಅಭಿಯಾನ ಆರೋಗ್ಯದ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.