ನವದೆಹಲಿ: ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗಾಗಿ ಜಪಾನ್ನಿಂದ 24 ಬುಲೆಟ್ ರೈಲು ಸೆಟ್ಗಳನ್ನು ಖರೀದಿಸಲು ಭಾರತೀಯ ರೈಲ್ವೆ ಯೋಜಿಸುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ ಎಂದು ಮೆಟ್ರೋ ರೈಲು ನ್ಯೂಸ್ ವರದಿ ಮಾಡಿದೆ.
“ರೋಲಿಂಗ್ ಸ್ಟಾಕ್ ವೆಚ್ಚ ಸೇರಿದಂತೆ ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಗೆ ತಗಲುವ ಅಂದಾಜು ಒಟ್ಟು ವೆಚ್ಚ 1,08,000 ಕೋಟಿ ರೂ., ಇದರಲ್ಲಿ ಶೇ.81ರಷ್ಟು ಹಣವನ್ನು ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿಯು ಸಾಲದ ಮೂಲಕ ನೀಡುತ್ತದೆ”ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸಚಿವರು ಹೇಳಿದ್ದಾರೆ.
ಜೆಐಸಿಎ ಮತ್ತು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಒಪ್ಪಂದದ ಪ್ರಕಾರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಉತ್ತೇಜನಕ್ಕಾಗಿ ಭಾರತದಲ್ಲಿ 24 ರೈಲುಗಳ ಪೈಕಿ ಆರು ರೈಲುಗಳನ್ನು ಜೋಡಣೆ ಮಾಡಲಾಗುತ್ತದೆ. ರೈಲುಗಳನ್ನು ಜೋಡಿಸಲು ಸ್ಥಳವನ್ನು ಜೆಐಸಿಎ ಇನ್ನೂ ನಿರ್ಧರಿಸಿಲ್ಲ.
ಮುಂಬಯಿ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯನ್ನು ಎನ್ಎಚ್ಎಸ್ಆರ್ಸಿಎಲ್ ಅನುಷ್ಠಾನಗೊಳಿಸುತ್ತಿದೆ. ಪ್ರಸ್ತುತ, ಭೂಸ್ವಾಧೀನ ಪ್ರಕ್ರಿತೆ ನಡೆಯುತ್ತಿದೆ, ಇದುವರೆಗೆ ಎರಡು ರಾಜ್ಯಗಳಲ್ಲಿ ಸುಮಾರು ಶೇ. 40 ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ ಮತ್ತು ಉಳಿದ ಭೂಮಿಯನ್ನು ಈ ವರ್ಷದ ಡಿಸೆಂಬರ್ ವೇಳೆಗೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು 2023 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.