ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಧರ್ಮವಿದ್ದಂತೆ. ಅದರಲ್ಲೂ ವಿಶ್ವಕಪ್ ಎಂಬುದು ಭಾರತೀಯರ ಪಾಲಿಗೆ ಹಬ್ಬ. ಪ್ರತಿಯೊಂದು ಪಂದ್ಯವನ್ನು ಭಾರತವೇ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಅದೆಷ್ಟೋ ಭಾರತೀಯರು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಇದು ಮುಂದುವರೆದಿದೆ. ನಿನ್ನೆ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಭಾರತೀಯ ಅಭಿಮಾನಿಗಳು ತಮ್ಮ ತಂಡವನ್ನು ಪ್ರೋತ್ಸಾಹಿಸುತ್ತಿದುದ್ದು ಸಾಮಾನ್ಯವಾಗಿತ್ತು, ಆದರೆ 87 ವರ್ಷದ ಮಹಿಳೆಯೊಬ್ಬರು ಪೀಪಿ ಊದುತ್ತಾ ಕುಣಿಯುತ್ತಾ ಭಾರತ ತಂಡವನ್ನು ಪ್ರೋತ್ಸಾಹಿಸುತ್ತಿದ್ದ ದೃಶ್ಯ ಮಾತ್ರ ನಿಜಕ್ಕೂ ಅತೀ ವಿರಳ ಮತ್ತು ಸ್ಪೂರ್ತಿದಾಯಕವಾಗಿತ್ತು.
ಭಾರತೀಯ ತಂಡದ ಬಲು ಅಪರೂಪದ ಈ ಅಭಿಮಾನಿಯ ಹೆಸರು ಚಾರುಲತಾ ಪಟೇಲ್. ಪೀಪಿ ಊದುತ್ತಾ ಕುಣಿಯುತ್ತಾ ಕೊಹ್ಲಿ ಬಾಯ್ಸ್ ಅನ್ನು ಇವರು ಉತ್ತೇಜಿಸುತ್ತಿದ್ದ ರೀತಿ ಕ್ಯಾಮೆರಾ ಕಣ್ಣಿಗೆ ಬಿದ್ದು ಒಂದೇ ದಿನದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೊದಲಾದವರು ಪಂದ್ಯ ಮುಗಿದ ಬಳಿಕ ಇವರ ಬಳಿಗೆ ಬಂದು ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ವಿಶ್ವಕಪ್ ಅನ್ನು ಭಾರತವೇ ಗೆಲ್ಲುತ್ತದೆ ಎಂದು ಚಾರುಲತಾ ಆಶೀರ್ವಾದ ಮಾಡಿದ್ದಾರೆ.
Also would like to thank all our fans for all the love & support & especially Charulata Patel ji. She’s 87 and probably one of the most passionate & dedicated fans I’ve ever seen. Age is just a number, passion takes you leaps & bounds. With her blessings, on to the next one. 🙏🏼😇 pic.twitter.com/XHII8zw1F2
— Virat Kohli (@imVkohli) July 2, 2019
ಉದ್ಯಮ ಕ್ಷೇತ್ರದ ದಿಗ್ಗಜ ಆನಂದ್ ಮಹೀಂದ್ರ ಅವರೂ ಈ ಕ್ರಿಕೆಟ್ ಅಭಿಮಾನಿಗೆ ಫಿದಾ ಆಗಿದ್ದಾರೆ. ಆಕೆಯನ್ನು ‘ಮ್ಯಾಚ್ ವಿನ್ನಿಂಗ್ ಲೇಡಿ’ ಎಂದು ಕರೆದಿದ್ದಾರೆ. ಎಂದೂ ಕ್ರಿಕೆಟ್ ನೋಡದ ನಾನು ಈ ಮಹಿಳೆಗಾಗಿ ನಿನ್ನೆಯ ಪಂದ್ಯ ವೀಕ್ಷಣೆ ಮಾಡಿದೆ ಎಂದಿದ್ದಾರೆ. ಅಲ್ಲದೇ, ಮುಂದಿನ ಪಂದ್ಯಗಳಲ್ಲಿ ಭಾಗವಹಿಸಲು ಇವರಿಗೆ ಉಚಿತ ಟಿಕೆಟ್ ವ್ಯವಸ್ಥೆ ಮಾಡಿಕೊಡುತ್ತೇನೆ ಎಂಬುದಾಗಿಯೂ ತಿಳಿಸಿದ್ದಾರೆ.
As per my tradition, I wasn’t watching the match 😊 But I’m going to switch it on now just to see this lady…She looks like a match winner…. https://t.co/cn9BLpwfyj
— anand mahindra (@anandmahindra) July 2, 2019
ಸಾಮಾಜಿಕ ಜಾಲತಾಣಗಳಲ್ಲೂ ಚಾರುಲತಾ ಅವರ ಕ್ರಿಕೆಟ್ ಅಭಿಮಾನವನ್ನು ನೆಟ್ಟಿಗರು ಕೊಂಡಾಡಿದ್ದಾರೆ. 87ರ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತಿರುವ ಅವರ ವ್ಯಕ್ತಿತ್ವಕ್ಕೆ ಭೇಷ್ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.