ನವದೆಹಲಿ: ಮಳೆ ನೀರು ಕೊಯ್ಲು ಮತ್ತು ನೀರಿನ ಸಂರಕ್ಷಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶವ್ಯಾಪಿಯಾಗಿ ಇಂದು ಜಲ ಶಕ್ತಿ ಅಭಿಯಾನ ಆರಂಭಗೊಳ್ಳಲಿದೆ.
ಸಮುದಾಯ ಅಭಿಯಾನ ಮತ್ತು ಅಸೆಟ್ ಕ್ರಿಯೇಶನ್ ಮೂಲಕ ನೀರಿನ ಸಂರಕ್ಷಣೆ ಮತ್ತು ನೀರಾವರಿ ದಕ್ಷತೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ನೈಸರ್ಗಿಕ ಸಂಪನ್ಮೂಲವನ್ನು ಸಂರಕ್ಷಿಸುವ ಮಾರ್ಗಗಳ ಬಗ್ಗೆ ಯೋಜನೆ ರೂಪಿಸುವ ಸಲುವಾಗಿ ಹೆಚ್ಚುವರಿ ಮತ್ತು ಜಂಟಿ ಕಾರ್ಯದರ್ಶಿಗಳು ಸೇರಿದಂತೆ 250 ಕ್ಕೂ ಹೆಚ್ಚು ಅಧಿಕಾರಿಗಳನ್ನು ದೇಶದ ನೀರಿನ ಅಭಾವವಿರುವ ಜಿಲ್ಲೆಗಳ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ. ಜಲಶಕ್ತಿ ಅಭಿಯಾನವನ್ನು ಸಮನ್ವಯಗೊಳಿಸುವ ಸಲುವಾಗಿ ಅವರನ್ನು 255 ನೀರಿನ ಅಭಾವವಿರುವ ಜಿಲ್ಲೆಗಳ ಕೇಂದ್ರ ಪ್ರಭಾರಿ ಅಧಿಕಾರಿಗಳಾಗಿ ನೇಮಿಸಲಾಗಿದೆ.
ಗುರುತಿಸಲ್ಪಟ್ಟ ಬ್ಲಾಕ್ಗಳು ಮತ್ತು ಜಿಲ್ಲೆಗಳಿಗೆ ಇವರು ತಂಡಗಳ ಮೂಲಕ ಭೇಟಿ ನೀಡಲಿದ್ದು, ಮಳೆ ನೀರು ಕೊಯ್ಲು ಮತ್ತು ಸಂರಕ್ಷಣಾ ಕ್ರಮಗಳ ಅನುಷ್ಠಾನಕ್ಕೆ ಸಹಕರಿಸಲಿದ್ದಾರೆ.
ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀರಿನ ಸಂರಕ್ಷಣೆಗಾಗಿ ಬೃಹತ್ ಆಂದೋಲನವನ್ನು ಪ್ರಾರಂಭಿಸಬೇಕು ಎಂದಿದ್ದರು. ಅಲ್ಲದೇ, ದೇಶದ ಹಲವಾರು ಭಾಗಗಳಲ್ಲಿ ನೀರಿನ ಕೊರತೆಯ ಇದೆ, ಪ್ರತಿ ಹನಿ ನೀರನ್ನೂ ಉಳಿಸಲು ಮುಂದಾಗಬೇಕು ಎಂದು ಜನರಿಗೆ ಕರೆ ನೀಡಿದ್ದರು.
ಜಲ ಜಾಗೃತಿಗೆ ಸಂಬಂಧಿಸಿದ ಅಭಿಯಾನವನ್ನು ಪ್ರಾರಂಭಿಸಬೇಕು, ಈ ಅಭಿಯಾನದ ಮೂಲಕ ನೀರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಮಾತ್ರವಲ್ಲದೇ, ನೀರನ್ನು ಉಳಿಸುವ ಮಾರ್ಗಗಳನ್ನು ಪ್ರಚಾರ ಮಾಡಬೇಕು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.