ಜೈಪುರ: ಪೊಲೀಸ್ ಪಡೆ ಭಾರತದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ. ಪ್ರತಿಯೊಂದು ಸಣ್ಣ ಘಟನೆಯನ್ನೂ ಕೆಚ್ಚೆದೆಯಿಂದ ನಿರ್ವಹಿಸುತ್ತಾರೆ ಪೊಲೀಸರು. ಆದರೆ ದುರಾದೃಷ್ಟವಶಾತ್ ಹಲವು ದಶಕಗಳಿಂದ ಪೊಲೀಸ್ ಪಡೆಗಳು ನಿರ್ಲಕ್ಷ್ಯಕ್ಕೊಳಗಾಗಿದೆ. ಆದರೆ ಈಗ, ಪೊಲೀಸ್ ಪಡೆಗಳಿಗೆ ಮಹತ್ವದ ಯೋಜನೆಗಳನ್ನು ಭಾರತ ಸರ್ಕಾರವು ಪರಿಚಯಿಸುತ್ತಿದೆ.
ಈಗ, ಪೊಲೀಸ್ ಪಡೆಗಳೂ ಅದ್ಭುತ ಪ್ರದರ್ಶನ ನೀಡುತ್ತಿವೆ. ಗೃಹ ಸಚಿವಾಲಯದ ‘ಸ್ಮಾರ್ಟ್’ ಪೊಲೀಸ್ ಪರಿಕಲ್ಪನೆಯನ್ನು ಆಧರಿಸಿದ ಸಮೀಕ್ಷೆಯಲ್ಲಿ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಕಲು ಪೊಲೀಸ್ ಠಾಣೆ ದೇಶದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಅಪರಾಧ ತಡೆಗಟ್ಟುವಿಕೆ, ತನಿಖೆ ಮತ್ತು ಪ್ರಕರಣಗಳ ವಿಲೇವಾರಿ, ಅಪರಾಧ ಪತ್ತೆ, ಸಮುದಾಯ ಪೊಲೀಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಕಲು ಪೊಲೀಸ್ ಠಾಣೆಯು ದೇಶದ ಅತ್ಯುತ್ತಮ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕಲು ಠಾಣೆ ಪೊಲೀಸ್ ಸಿಬ್ಬಂದಿಗಳಿಗಾಗಿ ಮನರಂಜನಾ ಸೌಲಭ್ಯಗಳನ್ನು, ವೈ-ಫೈ ಸರ್ವರ್ಗಳನ್ನು ಹೊಂದಿರುವುದರ ಜೊತೆಗೆ ಮಹಿಳೆಯರಿಗೆ ಸಹಾಯವಾಣಿಯನ್ನು ಹೊಂದಿದೆ.
‘ಸ್ಮಾರ್ಟ್’ ಸಮೀಕ್ಷೆಯಡಿಯಲ್ಲಿ 14 ಪೊಲೀಸ್ ಠಾಣೆಗಳನ್ನು ಎ ++ ವಿಭಾಗದಲ್ಲಿ, 12 ಠಾಣೆಗಳನ್ನು ಎ + ನಲ್ಲಿ, ಮತ್ತು ಉಳಿದ 11 ಠಾಣೆಗಳನ್ನು ಸ್ಮಾರ್ಟ್ ಪೊಲೀಸ್ ಪರಿಕಲ್ಪನೆಯ ಮಾನದಂಡಗಳ ಪ್ರಕಾರ ವಿಭಾಗ ಮಾಡಲಾಗಿದೆ.
2014 ರಲ್ಲಿ ಗುವಾಹಟಿಯಲ್ಲಿ ನಡೆದ ಡೈರೆಕ್ಟರ್ಸ್-ಜನರಲ್ ಮತ್ತು ಇನ್ಸ್ಪೆಕ್ಟರ್-ಜನರಲ್ ಆಫ್ ಪೋಲಿಸ್ರ 49 ನೇ ವಾರ್ಷಿಕ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈ ‘ಸ್ಮಾರ್ಟ್’ ಪೊಲೀಸ್ ಪರಿಕಲ್ಪನೆಯನ್ನು ಪರಿಚಯಿಸಿದ್ದರು. ‘ಸ್ಮಾರ್ಟ್’ ಎಂದರೆ ಕಟ್ಟುನಿಟ್ಟಾದ ಮತ್ತು ಸೂಕ್ಷ್ಮ, ಆಧುನಿಕ ಮತ್ತು ಸಂಚಾರಿ, ಎಚ್ಚರಿಕೆ ಮತ್ತು ಜವಾಬ್ದಾರಿಯುತ, ವಿಶ್ವಾಸಾರ್ಹ ಮತ್ತು ಸ್ಪಂದಿಸುವ, ತಂತ್ರಜ್ಞಾನಿ-ಬುದ್ಧಿವಂತ ಮತ್ತು ತರಬೇತಿ ಪಡೆದವ ಎಂದು ಅರ್ಥ.
ದೇಶಾದ್ಯಂತದ ಠಾಣೆಗಳ ಅಪರಾಧವನ್ನು ನಿಯಂತ್ರಿಸುವಲ್ಲಿನ ಕಾರ್ಯಕ್ಷಮತೆ, ಪೊಲೀಸ್ ಕಟ್ಟಡದ ಮೂಲಸೌಕರ್ಯ, ವ್ಯವಸ್ಥೆ ಮತ್ತು ತಂತ್ರಜ್ಞಾನದ ಅತ್ಯುತ್ತಮ ಬಳಕೆ, ಮತ್ತು ನಾಗರಿಕರ ಪ್ರತಿಕ್ರಿಯೆಯಂತಹ ಹಲವಾರು ಮಾನದಂಡಗಳನ್ನು ಬಳಸಿ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.