ನವದೆಹಲಿ: ಪ್ರಧಾನಮಂತ್ರಿ ಆವಾಸ್ – ನಗರ ಯೋಜನೆಯಡಿ ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ನಿಗದಿತ ಟಾರ್ಗೆಟ್ಗಿಂತ ಮುಂಚಿತವಾಗಿಯೇ ಅಂದರೆ 2020ರ ವೇಳೆಗೆ ತಲುಪುವ ಭರವಸೆ ಇದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಎಲ್ಲರಿಗೂ ವಸತಿ ಗುರಿಯನ್ನು 2022ಕ್ಕೆ ನಿಗದಿಪಡಿಸಲಾಗಿದೆ. ಆದರೆ 2020ರ ವೇಳೆಯೇ ಗುರಿ ತಲುಪುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಪ್ರಮುಖ ಕಾರ್ಯಕ್ರಮ ಮತ್ತು ಯೋಜನೆಗಳ ಫಲವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನಗರಾಭಿವೃದ್ಧಿಯೂ ಮಹತ್ವದ ಪ್ರಗತಿಯನ್ನು ಕಂಡಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ, ಪುನರುಜ್ಜೀವನ ಮತ್ತು ನಗರ ಪರಿವರ್ತನೆಗಾಗಿನ ಅಟಲ್ ಮಿಶನ್, ಸ್ಮಾರ್ಟ್ ಸಿಟಿ ಮಿಶನ್ ಮುಂತಾದವುಗಳು ನಗರ ಭೂದೃಶ್ಯವನ್ನು ಪರಿವರ್ತಿಸುತ್ತಿರುವುದು ಮಾತ್ರವಲ್ಲ, ನಾಗರಿಕರಿಗೆ ಸುಲಲಿತ ಜೀವನ ನಡೆಸಲೂ ಅನುವು ಮಾಡಿಕೊಡುತ್ತಿವೆ.
2004-14ರ ಸಾಲಿನಲ್ಲಿ ನಗರ ಪರಿವರ್ತನೆಗಾಗಿ ರೂ.1.57 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡಲಾಗಿತ್ತು, 2014 ಮತ್ತು 19ರ ಸಾಲಿನಲ್ಲಿ ರೂ.10.31 ಲಕ್ಷ ಕೋಟಿಗಳನ್ನು ಹೂಡಿಕೆ ಮಾಡಲಾಗಿದೆ. ಅಂದರೆ ಯುಪಿಎಗಿಂತ ಎನ್ಡಿಎ ಅವಧಿಯಲ್ಲಿ ಹೂಡಿಕೆಯು ಶೇ. 554 ರಷ್ಟು ಏರಿಕೆಯನ್ನು ಕಂಡಿದೆ.
PMAY(U), AMRUT ಮತ್ತು SCMನಲ್ಲಿ ಹೂಡಿಕೆಯು ಸುಮಾರು 8 ಲಕ್ಷ ಕೋಟಿ ರೂ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ನಿಗದಿತ ಗುರಿಗಿಂತಲೂ ತುಂಬಾ ಮುಂದಿವೆ.
June 25, 2019- 4 Years (2015-19) Of Urban Transformation Witnesses Giant Strides by Flagship Missions & Programmes of Ministry of Housing & Urban Affairs: Union Minister @HardeepSPuri #TransformingUrbanLandscape #AMRUT
Details here: https://t.co/LRBEHK867E pic.twitter.com/zsHTyHRDRZ
— PIB India (@PIB_India) June 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.