ತಿರುವನಂತಪುರಂ: 2016 ರಲ್ಲಿ ದೇಶದ ಮೊದಲ ಸೌರ ದೋಣಿಯನ್ನು ಆರಂಭಿಸಿದ ಕೇರಳ, ಇದೀಗ ಸೌರಶಕ್ತಿ ಚಾಲಿತ ಕ್ರೂಸ್ ಹಡಗನ್ನು ಹೊಂದಲು ಸಜ್ಜಾಗಿದೆ. 2019ರ ಡಿಸೆಂಬರ್ ವೇಳೆಗೆ ಸೌರಶಕ್ತಿ ಚಾಲಿತ ಕ್ರೂಸ್ ಹಡಗು ಕೇರಳದ ಅಲಪ್ಪುಝದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಇದು ಕೇರಳ ಜಲ ಸಾರಿಗೆ ಇಲಾಖೆಯ (SWTD) ಯೋಜನೆಯ ಒಂದು ಭಾಗವಾಗಿದ್ದು, 2016 ರಲ್ಲಿ ಸೌರ ದೋಣಿ ಆದಿತ್ಯವನ್ನು ಪ್ರಾರಂಭಿಸಿದ್ದು ಕೂಡ ಇದೇ ಇಲಾಖೆ.
100 ಪ್ರಯಾಣಿಕರನ್ನು ಸಾಗಿಸಬಲ್ಲ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೂಸ್ ದೋಣಿ ಅರೂರಿನ ಬೋಟ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದೆ ಮತ್ತು ಆದಿತ್ಯ ದೋಣಿಯನ್ನು ನಿರ್ಮಾಣ ಮಾಡಿದ ಸಂಸ್ಥೆಯೇ ಇದನ್ನು ನಿರ್ಮಿಸುತ್ತಿದೆ. ಇದನ್ನು ಡಿಸೆಂಬರ್ನಲ್ಲಿ ಆಲಪ್ಪುಝದಲ್ಲಿ ಹೊರತರಲಾಗುತ್ತಿದೆ. ಈ ಹೈಬ್ರಿಡ್ ಹಡಗು ಸೌರ ಫಲಕಗಳು, ಬ್ಯಾಟರಿ ಮತ್ತು ಜನರೇಟರ್ನಿಂದ ಶಕ್ತಿಯನ್ನು ಪಡೆಯುವ ಮೋಟರ್ನಿಂದ ನಿಯಂತ್ರಿಸಲ್ಪಡುತ್ತದೆ. ಆದಿತ್ಯದಲ್ಲಿರುವ 50 ಕಿಲೋವ್ಯಾಟ್ ಬ್ಯಾಕಪ್ಗೆ ಹೋಲಿಸಿದರೆ ಇದರ ಬ್ಯಾಟರಿಯು 80 ಕಿಲೋವ್ಯಾಟ್ (ಕಿಲೋವ್ಯಾಟ್ ಗಂಟೆ) ವಿದ್ಯುತ್ ಬ್ಯಾಕಪ್ ಹೊಂದಿದೆ” ಎಂದು SWTD ನಿರ್ದೇಶಕ ಶಾಜಿ ವಿ ನಾಯರ್ ಹೇಳಿದ್ದಾರೆ.
ಡೀಸೆಲ್ ಬಳಸು ದೋಣಿಗಳಿಗೆ ತಗಲುವ ಸುಮಾರು 8,000 ರೂಗಳಿಗೆ ಹೋಲಿಸಿದರೆ ಆದಿತ್ಯ ದೋಣಿಗೆ ಪ್ರತಿದಿನ ಕೇವಲ 200 ರೂ. ಮಾತ್ರ ಇಂಧನ ವೆಚ್ಚವಾಗುತ್ತದೆ. ಸೌರಶಕ್ತಿ ಚಾಲಿತ ಕ್ರೂಸ್ ಹಡಗು ಕೂಡ ಕಾರ್ಯಾಚರಣೆಯ ವೆಚ್ಚವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಲಿದೆ.
ನಿರ್ಮಾಣ ಹಂತದಲ್ಲಿರುವ ಕ್ರೂಸ್ ಹಡಗಿನಲ್ಲಿ ಪುಷ್ಬ್ಯಾಕ್ ಆಸನದ ಜೊತೆಗೆ ಹವಾನಿಯಂತ್ರಿತ ಲೋವರ್ ಡೆಕ್ ಕೂಡ ಇರುತ್ತದೆ. ಇಂಡಿಯನ್ ರಿಜಿಸ್ಟ್ರಿ ಆಫ್ ಶಿಪ್ಪಿಂಗ್ (IRS) ಮಾನದಂಡಗಳಿಗೆ ಅನುಸಾರವಾಗಿ ಈ ಹಡಗು ನಿರ್ಮಿಸಲಾಗುತ್ತಿದೆ.
ಅಲಪ್ಪುಝದಲ್ಲಿನ ಮೊದಲ ಹಡಗಿಗೆ ಜನರು ಹೇಗೆ ಪ್ರತಿಕ್ರಿಯಿಸಿದರು ಎಂಬುದರ ಆಧಾರದ ಮೇಲೆ ಇಂತಹ ಮತ್ತೊಂದು ಸೌರಶಕ್ತಿ ಚಾಲಿತ ಕ್ರೂಸ್ ಹಡಗನ್ನು ಎರ್ನಾಕುಲಂನಲ್ಲಿಯೂ ಅನಾವರಣಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ನಾಯರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.