ನವದೆಹಲಿ: ಬಿಜೆಪಿಯ ಹಿರಿಯ ಮುಖಂಡ ಜೆಪಿ ನಡ್ಡಾ ಅವರನ್ನು ಸೋಮವಾರ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಪಕ್ಷದ ಸಂಸದೀಯ ಸಭೆಯಲ್ಲಿ ಅವರ ನೇಮಕವನ್ನು ಅಂತಿಮಗೊಳಿಸಲಾಗಿತ್ತು. ಸಭೆಯ ಬಳಿಕ ನಡ್ಡಾ ಅವರ ನೇಮಕ ವಿಷಯವನ್ನು ಕೇಂದ್ರ ರಕ್ಷಣಾ ಸಚಿವೆ ರಾಜನಾಥ್ ಸಿಂಗ್ ಅವರು ಘೋಷಣೆ ಮಾಡಿದರು.
ಕಾರ್ಯಾಧ್ಯಕ್ಷರಾಗಿ ನೇಮಕವಾದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ನಡ್ಡಾ ಅವರು, “ಪಕ್ಷದ ಕಾರ್ಯಕರ್ತನಂತೆ ಪಕ್ಷವನ್ನು ಬಲಪಡಿಸಲು ಕಾರ್ಯನಿರ್ವಹಿಸುತ್ತೇನೆ, ನನ್ನ ಮೇಲೆ ನಂಬಿಕೆ ಇಟ್ಟ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡುತ್ತೇನೆ” ಎಂದಿದ್ದಾರೆ.
ಸರಣಿ ಟ್ವಿಟ್ಗಳನ್ನು ಮಾಡಿರುವ ಅವರು, “ಪ್ರಧಾನಿ ಮೋದಿಯವರ ಮಾರ್ಗದರ್ಶನ ನನಗೆ ಸದಾ ಸ್ಪೂರ್ತಿದಾಯಕವಾಗಿದೆ ಮತ್ತು ಮೋದಿ ನಾಯಕತ್ವದಲ್ಲಿ ಬಿಜೆಪಿಗೆ ದೇಶದ ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ” ಎಂದಿದ್ದಾರೆ.
“ಕಾರ್ಯಕರ್ತನಂತೆ ಪಕ್ಷದ ಬಲವರ್ಧನೆಗೆ ದುಡಿಯುತ್ತೇನೆ. ಪಕ್ಷಕ್ಕಾಗಿ ದುಡಿಯುವುದೆಂದರೆ ನನಗೆ ಆರಾಧನೆಗೆ ಸಮ” ಎಂದಿದ್ದಾರೆ.
“ಅಮಿತ್ ಶಾ ಅವರ ನಾಯಕತ್ವದಲ್ಲಿ ಪಕ್ಷವು ಉನ್ನತ ಮಟ್ಟವನ್ನು ತಲುಪಿದ್ದು, ಒಂದು ಉದಾಹರಣೆಯಾಗಿ ಮಾರ್ಪಟ್ಟಿದೆ ಮತ್ತು ಅದೇ ಮಾದರಿಯಲ್ಲಿ ನಾನು ಕೂಡ ಪಕ್ಷಕ್ಕೆ ಶ್ರಮಿಸುತ್ತೇನೆ” ಎಂದಿದ್ದಾರೆ.
ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದುವರೆಯಲಿದ್ದಾರೆ.
आदरणीय प्रधानमंत्री श्री @narendramodi जी आपके आशीष और स्नेही शब्दों के लिए कोटि कोटि धन्यवाद।
आपका मार्गदर्शन बहुत लम्बे समय से मेरी प्रेरणा का स्त्रोत है, इसके लिए मैं हमेशा आपका आभारी हूँ। भारतीय जनता पार्टी की सेवा ही हमारी साधना है। https://t.co/0aGSbiFM4T— Jagat Prakash Nadda (@JPNadda) June 17, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.