ನವದೆಹಲಿ: 17ನೇ ಲೋಕಸಭಾದ ಮೊದಲ ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಈ ಅಧಿವೇಶನದಲ್ಲೇ ನರೇಂದ್ರ ಮೋದಿ ಸರ್ಕಾರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡನೆಗೊಳಿಸಲಿದೆ. ತ್ರಿವಳಿ ತಲಾಖ್ನಂತಹ ಕೆಲವೊಂದು ಪ್ರಮುಖ ಮಸೂದೆಗಳು ಮಂಡನೆಗೊಳ್ಳುವ ನಿರೀಕ್ಷೆ ಇದೆ.
ಜೂನ್ 17ರಿಂದ ಜುಲೈ 26ರವರೆಗೆ ಬಜೆಟ್ ಅಧಿವೇಶನ ಜರುಗಲಿದೆ. ಜುಲೈ 5 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನು ಮಂಡನೆಗೊಳಿಸಲಿದ್ದಾರೆ. ಅಧಿವೇಶನದ ಮೊದಲ ಎರಡು ದಿನಗಳ ಕಾಲ ಹಂಗಾಮಿ ಸ್ಪೀಕರ್ ವಿರೇಂದ್ರ ಕುಮಾರ್ ಅವರು ನೂತನ ಲೋಕಸಭಾ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಲಿದ್ದಾರೆ. ಜೂನ್ 19ರಂದು ಲೋಕಸಭಾ ಸ್ಪೀಕರ್ ಆಯ್ಕೆ ಕಾರ್ಯ ನಡೆಯಲಿದೆ. ಜೂನ್ 20ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಅಧಿವೇಶನ ಆರಂಭಗೊಳ್ಳುವುದಕ್ಕೂ ಮುನ್ನ ದಿನವಾದ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷ ಸಭೆಯನ್ನು ಆಯೋಜನೆಗೊಳಿಸಿದ್ದರು. ಈ ವೇಳೆ ಅವರು ಜೂನ್ 19 ರಂದು ಎಲ್ಲಾ ಪಕ್ಷದ ಮುಖ್ಯಸ್ಥರನ್ನು ಮಹತ್ವದ ಸಭೆಗೆ ಆಹ್ವಾನಿಸಿದ್ದಾರೆ. ಮೂಲಗಳು ಪ್ರಕಾರ ಈ ಸಭೆಯಲ್ಲಿ ‘ಒಂದು ರಾಷ್ಟ್ರ, ಒಂದೇ ಬಾರಿ ಚುನಾವಣೆ” ನಿಯಮ ಜಾರಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
2022ರ ವೇಳೆಗೆ 75ನೇ ಸ್ವಾತಂತ್ರ್ಯೋತ್ಸವದ ಆಚರಣೆ ಮತ್ತು 150 ವರ್ಷಗಳ ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆಯ ಬಗ್ಗೆಯೂ ಸಭೆಯಲ್ಲಿ ಸರ್ಚೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶೀ ಹೇಳಿದ್ದಾರೆ.
ಅಲ್ಲದೇ ಪ್ರಧಾನಿಯವರು ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲಾ ಸಂಸದರನ್ನು ಜೂನ್ 20ರಂದು ಔತಣಕೂಟಕ್ಕೆ ಆಹ್ವಾನಿಸಿದ್ದು, ಇಲ್ಲಿ ಮುಕ್ತ ಮಾತುಕತೆಗಳು, ವಿಚಾಋ ವಿನಿಮಯಗಳು ಜರುಗಲಿವೆ.
ಜೂನ್ 17 ರಿಂದ ಜೂನ್ 26 ರ ವರೆಗೆ ಜರುಗಲಿರುವ ಅಧಿವೇಶನದಲ್ಲಿ ಲೋಕಸಭೆಯ 30 ಕಲಾಪಗಳು ಮತ್ತು ರಾಜ್ಯಸಭೆಯ 27 ಕಲಾಪಗಳು ಜರುಗಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.