ನದಿಗಳು ಶತಮಾನಗಳಿಂದಲೂ ಭಾರತವನ್ನು ವ್ಯಾಖ್ಯಾನಿಸುತ್ತಾ ಬಂದಿವೆ. ಭಾರತ ಎಂಬ ಹೆಸರು ‘ಸಿಂಧು’ ನದಿಯನ್ನು ಆಧರಿಸಿಯೇ ಹುಟ್ಟಿದ್ದು. ದೇಶದ ಭೌಗೋಳಿಕ ಗಡಿಯನ್ನು ಬಹಳ ಹಿಂದೆಯೇ ‘ಸಪ್ತ-ಸಿಂಧು ಭೂಮಿ’ ಎಂದು ಕರೆಯಲಾಗಿತ್ತು. ಹರಪ್ಪನ್ ನಾಗರೀಕತೆಯು ಕ್ಷೀಣಿಸುತ್ತಿದ್ದಂತೆ, ನಾಗರೀಕತೆಯ ಕೇಂದ್ರಬಿಂದು ಗಂಗೆಯತ್ತ ಸ್ಥಳಾಂತರಗೊಂಡಿತು. ಗಂಗಾ ನದಿ ಹಿಂದೂ ಧರ್ಮದಲ್ಲಿ ನದಿಯಾಗಿಯೂ ಮತ್ತು ದೇವತೆಯಾಗಿಯೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇಂದು, ಭಾರತ-ಗಂಗಾ ಬಯಲು ಪ್ರದೇಶ ದೀರ್ಘಕಾಲಿಕ ನದಿಗಳು ಇರುವ ವಿಶ್ವದ ಅತ್ಯಂತ ಅಪರೂಪದ ಪ್ರದೇಶಗಳಲ್ಲಿ ಒಂದಾಗಿದೆ. ಆದಾಗ್ಯೂ, ದಶಕಗಳಿಂದ, ದೀರ್ಘಕಾಲಿಕ ನದಿಗಳನ್ನು ಬಳಸುವ ಆಯ್ಕೆಯನ್ನು ಸರಿಯಾಗಿ ಅನ್ವೇಷಿಸಲಾಗಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಳನಾಡಿನ ಜಲಮಾರ್ಗಗಳನ್ನು ಬಳಕೆ ಮಾಡಲು ಉತ್ತೇಜಿಸಿತು ಮತ್ತು ಕೋಲ್ಕತ್ತಾದಿಂದ ವಾರಣಾಸಿಗೆ ರಾಷ್ಟ್ರೀಯ ಜಲಮಾರ್ಗ -1 ಅನ್ನು ಅಭಿವೃದ್ಧಿಪಡಿಸಿತು.
ಕೆಲವು ದೇಶದಾಚೆಗಿನ ಮಾರ್ಗಗಳನ್ನು ಒಳಗೊಂಡಂತೆ ಇನ್ನೂ ಅನೇಕ ಜಲಮಾರ್ಗಗಳು ಪೈಪ್ಲೈನ್ನಲ್ಲಿವೆ. ಇಂಡೋ-ಬಾಂಗ್ಲಾ ಜಲಮಾರ್ಗ ಯೋಜನೆಯು ಬಾಂಗ್ಲಾದೇಶದ ಮೇಘನಾ ನದಿಯನ್ನು ತ್ರಿಪುರದ ಗೋಮತಿ ನದಿಯೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ. ಇದು ಭಾರತವನ್ನು ಬಾಂಗ್ಲಾದೇಶದ ಅಶುಗಂಜ್ ಬಂದರಿಗೆ ಪ್ರವೇಶ ಲಭ್ಯವನ್ನಾಗಿಸುತ್ತದೆ ಮತ್ತು ತ್ರಿಪುರಾ ರಾಜ್ಯವನ್ನು ನೀರಿನ ಮೂಲಕ ಸಂಪರ್ಕಿಸುವಂತೆ ಮಾಡುತ್ತದೆ.
ಪ್ರಸ್ತುತ ಹಡಗುಗಳ ಮಾರ್ಗವು ತ್ರಿಪುರದ ಸೆಪಾಹಿಜಲಾ ಜಿಲ್ಲೆಯಿಂದ 80 ಕಿ.ಮೀ ದೂರದಲ್ಲಿರುವ ಬಾಂಗ್ಲಾದೇಶದ ದಾವೋಡ್ಕಂಡಿಗೆ ಸೀಮಿತವಾಗಿದೆ. ತ್ರಿಪುರದ ನೂತನ ಸಿಎಂ ಬಿಪ್ಲಬ್ ಕುಮಾರ್ ದೇಬ್ ಅವರು ಭಾರತ-ಬಾಂಗ್ಲಾ ಜಲಮಾರ್ಗ ಯೋಜನೆಯನ್ನು ಅನುಷ್ಠಾನಗೊಳಿಸಲು ಬಹಳ ಉತ್ಸಾಹಭರಿತರಾಗಿದ್ದಾರೆ. ಯಾಕೆಂದರೆ ಈ ಯೋಜನೆಯಿಂದ ಅವರ ರಾಜ್ಯವು ಸಾರಿಗೆ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
15 ಕಿ.ಮೀ ಉದ್ದದ ಒಳನಾಡಿನ ಜಲಮಾರ್ಗ ಯೋಜನೆ ಕುರಿತು ಜಂಟಿ ತಾಂತ್ರಿಕ ಸಮಿತಿಗಳ ಅನ್ವೇಷಣೆಗಳ ಬಗ್ಗೆ ಸಿಎಂಗೆ ಅವರಿಗೆ ಈಗಾಗಲೇ ವಿವರಿಸಲಾಗಿದೆ. ” ಸಣ್ಣ-ಮಧ್ಯಮ ಗಾತ್ರದ ಹಡಗುಗಳ ಸಂಚಾರಕ್ಕೆ ಅನುಮತಿಸಲು 15 ಕಿಲೋಮೀಟರ್ಗಳ ಪೈಕಿ, ಸುಮಾರು 13 ಕಿಲೋಮೀಟರ್ಗಳನ್ನು ಬಾಂಗ್ಲಾದೇಶದ ಭಾಗದಲ್ಲಿ ಮತ್ತು ಉಳಿದವನ್ನು ಭಾರತೀಯ ಭಾಗದಲ್ಲಿ ಹೂಳು ತೆಗೆಯಬೇಕಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ-ಬಾಂಗ್ಲಾ ಜಲಮಾರ್ಗ ಯೋಜನೆಗೆ ಉತ್ತೇಜನ ನೀಡಲು ಮತ್ತು ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಒಳನಾಡು ಜಲಮಾರ್ಗ ಪ್ರಾಧಿಕಾರ (IWAI) ಯೊಂದಿಗೆ ಸಭೆ ನಡೆಸುವಂತೆ ಸಿಎಂ ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಸೂಚನೆಯನ್ನು ನೀಡಿದ್ದಾರೆ.
ರಾಜ್ಯವು ಸೀಮಿತ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿರುವುದರಿಂದ ಕೇಂದ್ರ ಸರ್ಕಾರವು ಈ ಯೋಜನೆಗೆ ಹಣಕಾಸು ಒದಗಿಸಬೇಕೆಂದು ಬಿಪ್ಲಬ್ ದೇಬ್ ಬಯಸುತ್ತಿದ್ದಾರೆ. “ರಾಜ್ಯವು ಸೀಮಿತ ಸಂಪನ್ಮೂಲಗಳನ್ನು ಹೊಂದಿರುವುದರಿಂದ, ಹೂಳೆತ್ತುವಿಕೆಯನ್ನು ಕೈಗೊಳ್ಳಲು ಕೇಂದ್ರವು ಮುಂದೆ ಬರಬೇಕು ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ” ಎಂದು ದೇಬ್ ಹೇಳಿದ್ದಾರೆ. ಇಂಡೋ-ಬಾಂಗ್ಲಾ ಯೋಜನೆಯ ಕಾರ್ಯಸಾಧ್ಯತೆಯನ್ನು ಅಳೆಯಲು ಶಿಪ್ಪಿಂಗ್ ಸಚಿವಾಲಯದ ತಂಡ ತ್ರಿಪುರದ ಸೆಪಾಹಿಜಲಾ ಜಿಲ್ಲೆಯ ಶ್ರೀಮಂತಪುರ ಪ್ರದೇಶಕ್ಕೆ ಈಗಾಗಲೇ ಭೇಟಿಯನ್ನು ನೀಡಿದೆ.
ಒಳನಾಡು ಜಲಮಾರ್ಗವು ತ್ರಿಪುರಕ್ಕೆ ಸಾಗಣೆಯನ್ನು ಅತ್ಯಂತ ಅಗ್ಗ ಮತ್ತು ಪರಿಣಾಮಕಾರಿಯಾಗಿ ಮಾಡುತ್ತದೆ. ಈಶಾನ್ಯ ರಾಜ್ಯಗಳಿಗೆ ಭೂ-ಆಧಾರಿತ ಸಾರಿಗೆ ಬಹಳ ಅನಾನುಕೂಲ ಮತ್ತು ದುಬಾರಿಯಾಗಿದೆ, ಆದ್ದರಿಂದ ಬಾಂಗ್ಲಾದೇಶದ ಮೂಲಕ ಜಲ ಸಾರಿಗೆಯು ತ್ರಿಪುರದ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕ್ರಾಂತಿಯುಂಟು ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ಹೆಚ್ಚುವರಿಯಾಗಿ, ಭಾರತವು ವಿಶ್ವದ ಅತಿ ಹೆಚ್ಚು ವಾಹನ ಇಂಧನಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಒಂದಾಗಿದೆ. ಆರ್ಥಿಕತೆಯ ಬೆಳವಣಿಗೆಯು ದೇಶದಲ್ಲಿ ಕಚ್ಚಾ ತೈಲ ಬಳಕೆಯನ್ನು ವೃದ್ಧಿಸಿದೆ ಮತ್ತು ಇದು ದೇಶದ ಆಮದು ದರಗಳನ್ನು ಹೆಚ್ಚಾಗುವಂತೆ ಮಾಡಿದೆ. ಜಲಮಾರ್ಗಗಳ ಮೂಲಕ ಸರಕು ಸಾಗಣೆಯು ಆಮದು ದರಗಳನ್ನು ಕಡಿಮೆಗೊಳಿಸಬಹುದು. ಯಾಕೆಂದರೆ ಅದು ಹೆಚ್ಚು ಇಂಧನ ದಕ್ಷತೆಯಿಂದ ಕೂಡಿದೆ. ಒಂದು ಲೀಟರ್ ಡೀಸೆಲ್ನಲ್ಲಿ, ಹಡಗುಗಳು 105 ಟನ್ ಲೋಡ್ ಅನ್ನು ಜಲಮಾರ್ಗಗಳ ಮೂಲಕ ಸಾಗಿಸಬಲ್ಲದು. ಅದೇ ರಸ್ತೆ ವಾಹನಗಳು ಕೇವಲ 24 ಟನ್ ಮಾತ್ರ ಸಾಗಿಸಬಲ್ಲವು ಮತ್ತು ರೈಲು ಇದೇ ಪ್ರಮಾಣದ ಡೀಸೆಲ್ನಲ್ಲಿ ಕೇವಲ 85 ಟನ್ ಮಾತ್ರ ಸಾಗಿಸಬಲ್ಲದು.
ಹಣಕಾಸಿನ ದಕ್ಷತೆಯ ದೃಷ್ಟಿಯಿಂದ, ರಸ್ತೆ ಅಥವಾ ರೈಲುಗಿಂತ ಜಲಮಾರ್ಗಗಳ ಮೂಲಕ ಸಾಗಣೆ ಹೆಚ್ಚು ಪರಿಣಾಮಕಾರಿಯಾಗಿದೆ. 1 ಟನ್ ಸರಕು ಸಾಗಣೆಯನ್ನು ಜಲಮಾರ್ಗಗಳ ಮೂಲಕ ಸಾಗಿಸಲು ಸರಾಸರಿ 1.19 ರೂಪಾಯಿ ಮತ್ತು ರಸ್ತೆ ಸಾರಿಗೆಗೆ 2.28 ರೂಪಾಯಿ ಮತ್ತು ರೈಲ್ವೆಗೆ 1.41 ರೂಪಾಯಿ ತಗಲುತ್ತದೆ. ಯುರೋಪ್ ಮತ್ತು ಉತ್ತರ ಅಮೆರಿಕಾ ದೇಶಗಳಲ್ಲಿ ದಶಕಗಳ ಹಿಂದಿನಿಂದಲೂ ಜಲಮಾರ್ಗ ಸಾರಿಗೆಗಾಗಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಾ ಬರಲಾಗುತ್ತಿದೆ. ನಮ್ಮ ಪೂರ್ವದ ನೆರೆಹೊರೆಯವರು ತೀರಾ ಕಡಿಮೆ ಅವಧಿಯಲ್ಲಿ ದಕ್ಷ ನೀರಿನ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ ಭಾರತವನ್ನು ಆಳಿರುವ ಹಿಂದಿನ ಸರ್ಕಾರಗಳು ಜಲ ಭೂ ಸಾರಿಗೆಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ನಿರ್ಲಕ್ಷ್ಯ ಮನೋಭಾವವನ್ನು ಹೊಂದಿದ್ದವು. ನರೇಂದ್ರ ಮೋದಿ ಸರ್ಕಾರದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಮಂತ್ರಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಮೋದಿ ಸರ್ಕಾರ ನೀಡಿದೆ. ಮುಂಬರುವ ವರ್ಷಗಳಲ್ಲಿ ಜಲಮಾರ್ಗ ಸಾರಿಗೆಯಲ್ಲಿ ಹೆಚ್ಚು ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜಲಮಾರ್ಗದ ಅಭಿವೃದ್ಧಿಯು ಭಾರತೀಯ ನಾಗರಿಕತೆಯಲ್ಲಿನ ನದಿಗಳ ಐತಿಹಾಸಿಕ ಮಹತ್ವಕ್ಕೆ ನ್ಯಾಯವನ್ನು ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.