ನವದೆಹಲಿ: ನವದೆಹಲಿ-ಕಾನ್ಪುರ ಮಾರ್ಗವಾಗಿ ಚಲಿಸುವ ಭಾರತೀಯ ರೈಲ್ವೇಯ ಮಹತ್ವಾಕಾಂಕ್ಷೆಯ ‘ವಂದೇ ಭಾರತ್ ಎಕ್ಸ್ಪ್ರೆಸ್’ ತನ್ನ ಸಮಯಪ್ರಜ್ಞೆಯ ದಾಖಲೆಯನ್ನು ಮುಂದುವರೆಸಿದೆ. ಈ ವಿಷಯದಲ್ಲಿ ಪ್ರಮುಖ ರೈಲುಗಳಾದ ರಾಜಧಾನಿ ಮತ್ತು ಶತಾಬ್ದಿ ಎಕ್ಸ್ಪ್ರೆಸ್ ಅನ್ನು ಇದು ಹಿಂದಿಕ್ಕಿದೆ.
ಫೆ.15ರಂದು ಕಾರ್ಯಾರಂಭ ಮಾಡಿರುವ ಈ ರೈಲು ನವದೆಹಲಿ-ಖಾನ್ಪುರ ಸ್ಟ್ರೆಚ್ನಲ್ಲಿ ಸಮಯಪ್ರಜ್ಞೆಯ ವಿಷಯದಲ್ಲಿ ಶೇ.94ರಷ್ಟು ಸಮಯಪ್ರಜ್ಞೆಯನ್ನು ಮೆರೆದಿದೆ. ಇನ್ನೊಂದು ಕಡೆ ಇದೇ ಸ್ಟ್ರೆಚ್ನಲ್ಲಿ ಸ್ವರ್ಣ ಶತಾಬ್ದಿ ಶೇ.91.18ರಷ್ಟು ಸಮಯದ ವಿಷಯದಲ್ಲಿ ಪ್ರಾಮಾಣಿಕತೆಯನ್ನು ಮೆರೆದಿದೆ.
ರಾಂಚಿ ರಾಜಧಾನಿಯು ಶೇ.84.62ರಷ್ಟು ಪ್ರಾಮಾಣಿಕ ಸಮಯದ ದಾಖಲೆಯನ್ನು ಹೊಂದಿದೆ, ಭುವನೇಶ್ವರ ರಾಜಧಾನಿ ಕೇವಲ ಶೇ.41.67ರಷ್ಟು ಪ್ರಾಮಾಣಿಕತೆ ದಾಖಲೆಯನ್ನು ಬರೆದಿದೆ.
ಎಪ್ರಿಲ್ ತಿಂಗಳಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಸಮಯದ ವಿಷಯದಲ್ಲಿ ಶೇ.100 ಪ್ರಾಮಾಣಿಕತೆ ಮೆರೆದಿದೆ ಎಂದು ವರದಿಯಾಗಿತ್ತು.
ಸುಮಾರು 100 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಟ್ರೈನ್-18 ಎಂದೂ ಕರೆಯಲಾಗುತ್ತದೆ, ಇದು ಕಳೆದ ಫೆ.15ರಿಂದ ದೆಹಲಿ – ವಾರಣಾಸಿ ನಡುವಿನ ಸಂಚಾರ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.