ನವದೆಹಲಿ: ಈಶಾನ್ಯ ಭಾರತದಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಜಪಾನಿನ ಸಹಕಾರ ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ರೂ.13,000 ಕೋಟಿಗಳನ್ನು ಅದು ಹೂಡಿಕೆ ಮಾಡುತ್ತಿದೆ.
ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಡಾ.ಜಿತೇಂದ್ರ ಸಿಂಗ್ ತೋಮರ್ ಮತ್ತು ಜಪಾನ್ ರಾಯಭಾರಿ ಕೆಂಜಿ ಹಿರಮತ್ಸು ಅವರ ನೇತೃತ್ವದ ನಿಯೋಗದ ನಡುವೆ ಸಭೆ ನಡೆದ ಬಳಿಕ, ಜಪಾನ್ ಈಶಾನ್ಯ ಭಾರತದ ಅಭಿವೃದ್ಧಿಗೆ ರೂ.13,000 ಕೋಟಿಗಳನ್ನು ಹೂಡಿಕೆ ಮಾಡುವುದಾಗಿ ತಿಳಿಸಿದೆ.
ಪ್ರಸ್ತುತ ನಡೆಯುತ್ತಿರುವ ಮತ್ತು ಮುಂದೆ ನಡೆಯಲಿರುವ ಅಭಿವೃದ್ಧಿ ಯೋಜನೆಗಳಿಗೆ ಜಪಾನ್ ಹಣ ಹೂಡಲಿದೆ. ಗುಹಾವಟಿ ನೀರು ಸರಬರಾಜು ಯೋಜನೆ, ಅಸ್ಸಾಂ ಮತ್ತು ಮೇಘಾಲಯ ನಡುವಣ ಈಶಾನ್ಯ ರಸ್ತೆ ಸಂಪರ್ಕ ಸುಧಾರಣಾ ಯೋಜನೆ. ತ್ರಿಪುರಾದ ಸುಸ್ಥಿರ ಅರಣ್ಯ ನಿರ್ವಹಣಾ ಯೋಜನೆ, ಮಿಜೋರಾಂನ ಸುಸ್ಥಿರ ಕೃಷಿ ಮತ್ತು ನೀರಾವರಿಗಾಗಿನ ತಾಂತ್ರಿಕ ಸಹಕಾರ ಯೋಜನೆ ಇತ್ಯಾದಿಗಳಿಗೆ ಜಪಾನ್ ಹಣ ವ್ಯಯವಾಗಲಿದೆ.
ಭವಿಷ್ಯದಲ್ಲಿ ಉಭಯ ದೇಶಗಳು ಬಿದಿರಿನಂತಹ ಹೊಸ ವಲಯದಲ್ಲೂ ಸಹಕಾರವನ್ನು ಆರಂಭಿಸಲಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.