ನವದೆಹಲಿ: 2025ರ ವೇಳೆಗೆ ಭಾರತದ ರಕ್ಷಣಾ ರಫ್ತನ್ನು ರೂ.35 ಸಾವಿರ ಕೋಟಿಗಳಿಗೆ ಏರಿಸುವ ಗುರಿಯನ್ನು ಇಟ್ಟುಕೊಂಡಿರುವ ನರೇಂದ್ರ ಮೋದಿ ಸರ್ಕಾರ, ಭಾರತದಲ್ಲಿ ಉತ್ಪಾದನೆಯಾದ ಮಿಲಿಟರಿ ಸಾಮಾಗ್ರಿಗಳನ್ನು ಪ್ರಚುರಪಡಿಸಲು ಅವಕಾಶಗಳಿರುವ 85 ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ದೇಶೀಯವಾಗಿ ಉತ್ಪಾದನೆಗೊಂಡ ಮಿಲಿಟರಿ ಪರಿಕರಗಳನ್ನು ಪ್ರದರ್ಶಿಸುವ ಸಲುವಾಗಿ ಡಿಫೆನ್ಸ್ ಅಟ್ಯಾಚ್ಗಳನ್ನು ಅಂತಾರಾಷ್ಟ್ರೀಯವಾಗಿ ಅಧಿಕೃತಗೊಳಿಸಲಾಗಿದೆ. ರಕ್ಷಣಾ ರಫ್ತನ್ನು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ , ಸರ್ಕಾರವು ತನ್ನ ವಾರ್ಷಿಕ ಬಜೆಟಿನಲ್ಲಿ ಪ್ರತಿ ಡಿಫೆನ್ಸ್ ಅಟ್ಯಾಚ್ಗೂ $50,000 ನಿಗದಿಪಡಿಸಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಎಕ್ಸಿಬಿಷನ್ಗಳಲ್ಲಿ ಭಾಗಿಯಾಗಲು, ಸಮೀಕ್ಷೆಗಳನ್ನು ನಡೆಸಲು, ಸೆಮಿನಾರ್ಗಳನ್ನು ಆಯೋಜನೆಗೊಳಿಸಲು ಈ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
“ಭಾರತವು ರಕ್ಷಣಾ ಉತ್ಪಾದನೆಗಳ ಉದಯೋನ್ಮುಖ ಹಬ್ ಆಗಿ ಮಾರ್ಪಡುತ್ತಿದೆ ಮತ್ತು ಡಿಫೆನ್ಸ್ ಪ್ರೊಡಕ್ಷನ್ ಪಾಲಿಸಿ 2019, ರಪ್ತು ಗುರಿಯನ್ನು 2025ರ ವೇಳೆಗೆ ರೂ.35,000 ಕೋಟಿಗೆ ಇಟ್ಟಿದೆ. ರಕ್ಷಣಾ ಉತ್ಪಾದನೆಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುವ ಸಲುವಾಗಿ ಮತ್ತು ರಕ್ಷಣಾ ರಫ್ತನ್ನು ಪ್ರಚುರಪಡಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿ ಎಂದು ಡಿಫೆನ್ಸ್ ಅಟ್ಯಾಚ್ ಗಳನ್ನು ಜಗತ್ತಿನಾದ್ಯಂತ ನೇಮಕಗೊಳಿಸಲಾಗಿದೆ” ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ವಿಯೆಟ್ನಾಂ, ಬಹರೈನ್, ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಯುಎಇ, ಮಲೇಷ್ಯಾ ಮತ್ತು ಥಾಯ್ಲೆಂಡ್ ಗಳಲ್ಲಿ ಭಾರತದ ರಕ್ಷಣಾ ರಫ್ತಿಗೆ ಹೆಚ್ಚಿನ ಅವಕಾಶಗಳಿವೆ ಎಂಬುದನ್ನು ಭಾರತ ಮನಗಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.