ನವದೆಹಲಿ: ನರೇಂದ್ರ ಮೋದಿ ಸರ್ಕಾರವು ಮುಂಬರುವ ಸಂಸತ್ತು ಅಧಿವೇಶನದಲ್ಲಿ, ಹೂಡಿಕೆದಾರರಿಗೆ ಸಹಾಯಕವಾಗಲು ಮತ್ತು ಪ್ರಗತಿ ವೃದ್ಧಿಸಲು ಹೊಸ ಕಾರ್ಮಿಕ ಮಸೂದೆಯನ್ನು ಪರಿಚಯಿಸುವ ನಿರೀಕ್ಷೆ ಇದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ವೇತನಾ, ಸಾಮಾಜಿಕ ಭದ್ರತೆ, ಕೈಗಾರಿಕಾ ಸುರಕ್ಷತೆ ಮತ್ತು ಕಲ್ಯಾಣ ಮತ್ತು ಕೈಗಾರಿಕೆ ಸಂಬಂಧ-ಈ ನಾಲ್ಕು ವಿಭಾಗಳಡಿಯಲ್ಲಿ ಪ್ರಸ್ತುತ ಇರುವ 44 ಕಾರ್ಮಿಕ ಕಾನೂನುಗಳನ್ನು ಹೊಸ ಕಾರ್ಮಿಕ ಮಸೂದೆಯಲ್ಲಿ ವಿಲೀನಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಗೃಹಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಅಂತರ್ ಸಚಿವರ ಸಭೆಯಲ್ಲಿ ಈ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ವಾಣಿಜ್ಯ ಮತ್ತು ರೈಲ್ವೇ ಸಚಿವ ಪಿಯೂಶ್ ಗೋಯಲ್ ಮೊದಲಾದವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಹೊಸ ಕಾರ್ಮಿಕ ಮಸೂದೆಯನ್ನು ಪರಿಚಯಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರು ಮಂಗಳವಾರ ತಿಳಿಸಿದ್ದಾರೆ.
ವರದಿಯ ಪ್ರಕಾರ, ನೌಕರರ ಪ್ರಾವಿಡೆಂಟ್ ಫಂಡ್ ಮತ್ತು ಮಿಸಲೇನಿಯಸ್ ಪ್ರೊವಿಷನ್ಸ್ ಆಕ್ಟ್, ನೌಕರರ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಶನ್ ಆಕ್ಟ್, ಹೆರಿಗೆ ಲಾಭ ಕಾಯ್ದೆ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಕಾಯ್ದೆ ಮತ್ತು ನೌಕರರ ಪರಿಹಾರ ಕಾಯ್ದೆ ಅನ್ನು ವಿಲೀನಗೊಳಿಸುವುದರ ಮೂಲಕ ಒಂದೇ ಸಾಮಾಜಿಕ ಭದ್ರತಾ ಕಾನೂನನ್ನು ಈ ಮಸೂದೆಯ ಮೂಲಕ ರಚಿಸುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.