ನವದೆಹಲಿ: ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಯುಜಿಸಿ) ಹ್ಯುಮಾನಿಟೀಸ್, ಸೈನ್ಸ್ ಮತ್ತು ಸೋಶಿಯಲ್ ಸೈನ್ಸ್ನಲ್ಲಿನ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF) ಮತ್ತು ಹಿರಿಯ ಸಂಶೋಧನಾ ಫೆಲೋಶಿಪ್ (SRF) ಮಾಡುತ್ತಿರುವವರಿಗೆ ನೀಡಲಾಗುವ ಫೆಲೋಶಿಪ್ ಮೊತ್ತವನ್ನು ಪರಿಷ್ಕರಿಸಿದೆ. 2019ರ ಜನವರಿ 1ಕ್ಕೆ ಅನ್ವಯವಾಗುವಂತೆ ಪರಿಷ್ಕೃರಣೆ ಜಾರಿಗೆ ಬರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪರಿಷ್ಕರಣೆಗೂ ಮುನ್ನ JRFಗಳು ಮಾಸಿಕ ವೇತನ 25,000 ರೂಪಾಯಿ ಪಡೆಯುತ್ತಿದ್ದರು, ಇದೀಗ ಅದನ್ನು 31,000 ರೂ.ಗೆ ಏರಿಕೆ ಮಾಡಲಾಗಿದೆ. SRFಗಳು ಇದುವರೆಗೆ ತಿಂಗಳಿಗೆ 28,000 ರೂ.ಪಡೆಯುತ್ತಿದ್ದರು, ಇದೀಗ ಅದನ್ನು 35,000 ರೂ.ಗೆ ಏರಿಸಲಾಗಿದೆ. ಪ್ರಸ್ತುತ ನಡೆಸಲಾದ ಫೆಲೋಶಿಪ್ ಪರಿಷ್ಕರಣೆ ಪಂಡಿತರು ಮತ್ತು ಶಿಕ್ಷಣತಜ್ಞರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ.
ಪರಿಷ್ಕರಣೆ ಒಳ್ಳೆಯ ಬೆಳವಣಿಗೆಯಾದರೂ, ಇದು ಎಲ್ಲಿಗೂ ಸಾಕಾಗುವುದಿಲ್ಲ ಎಂದು ಹಲವಾರು ಮಂದಿ ಸಂಶೋಧಕರು ಅಭಿಪ್ರಾಯಿಸಿದ್ದಾರೆ.
ಸಂಶೋಧಕರು ಕೆಲಸ ಮಾಡುತ್ತಿರುವ ನಗರವನ್ನು ಅವಲಂಬಿಸಿ UGC ಯು House Rent Allowance ಅನ್ನು ಶೇ.8, ಶೇ.16 ಮತ್ತು ಶೇ.24 ಎಂದು ಸರ್ಕಾರದ ನಿಯಮದ ಪ್ರಕಾರ ಪರಿಷ್ಕರಣೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.