ನವದೆಹಲಿ: ಕಳೆದ ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರಕಾರವು ನೇರ ಲಾಭ ವರ್ಗಾವಣೆಯಿಂದ ಬರೋಬ್ಬರಿ 51,700 ಕೋಟಿ ರೂಪಾಯಿಗಳನ್ನು ಉಳಿಸಿದೆ. ಕಳೆದ ಐದು ವರ್ಷದಲ್ಲಿ ಮೋದಿ ಸರಕಾರವು 4.23 ಕೋಟಿ ನಕಲಿ ಎಲ್ಪಿಜಿ ಸಿಲಿಂಡರ್ಗಳ ಸಂಪರ್ಕವನ್ನು ರದ್ದುಗೊಳಿಸಿದೆ.
2014ರಿಂದ 2018ರವರೆಗೆ ನೇರ ಲಾಭ ವರ್ಗಾವಣೆಯಿಂದಾಗಿ 90,000 ಕೋಟಿ ರೂಪಾಯಿಗಳು ಉಳಿತಾಯವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಉಳಿತಾಯದ ಮೊತ್ತ ರೂ.51,664 .85 ಕೋಟಿಯಾಗಿದೆ.
ಕಳೆದ ಐದು ವರ್ಷದಲ್ಲಿ ಮೋದಿ ಸರಕಾರ ಬರೋಬ್ಬರಿ 4.33 ಕೋಟಿ ನಕಲಿ ಸಿಲಿಂಡರ್ ಸಂಪರ್ಕಗಳನ್ನು ರದ್ದುಗೊಳಿಸಿದೆ ಮಾತ್ರವಲ್ಲದೆ, 2.98 ಕೋಟಿ ನಕಲಿ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ.
ರಾಷ್ಟ್ರೀಯ ಸಾಮಾಜಿಕ ಸಲಹೆ ಕಾರ್ಯಕ್ರಮಗಳಡಿ ಮೋದಿ ಸರಕಾರ 4.77 ಲಕ್ಷ ನಕಲಿ ಫಲಾನುಭವಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೋರಿಕೆಯಾಗುತ್ತಿದ್ದ ಶೇ.10 ರಷ್ಟು ಹಣವನ್ನು ಉಳಿತಾಯ ಮಾಡಿದೆ. ಇದೀಗ ಕೇಂದ್ರ ಸರಕಾರವು ರಸಗೊಬ್ಬರಗಳ ಸಬ್ಸಿಡಿಯನ್ನು ನೇರವಾಗಿ ರೈತರಿಗೆ ವರ್ಗಾವಣೆ ಮಾಡಲು ಚಿಂತನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಳಿತಾಯ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.