ಮಾಲೆ: ಭಾರತದೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿರುವ ಮಾಲ್ಡೀವ್ಸ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ರಾಷ್ಟ್ರದ ಅತ್ಯುನ್ನತ ಗೌರವ “ನಿಶಾನ್ ಇಝದ್ದೀನ್’ ಅನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಇಂದು ಮೋದಿಯವರು ಮಾಲ್ಡೀವ್ಸ್ಗೆ ದ್ವಿಪಕ್ಷೀಯ ಭೇಟಿ ನೀಡುತ್ತಿದ್ದಾರೆ. ಎರಡನೇಯ ಅವಧಿಗೆ ಪ್ರಧಾನಿಯಾದ ಬಳಿಕದ ಮೊದಲ ವಿದೇಶಿ ಪ್ರವಾಸ ಇದಾಗಿದೆ.
ವಿದೇಶಿ ಗಣ್ಯರಿಗೆ ನೀಡುವ ಅಲ್ಲಿನ ಅತ್ಯುನ್ನತ ಗೌರವ ಡಿಸ್ಟಿಂಗ್ಯುಷ್ಡ್ ರೂಲ್ ಆಫ್ ನಿಶಾನ್ ಇಜ್ಜುದ್ದೀನ್ಗೆ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಹೀದ್ ಟ್ವೀಟ್ ಮಾಡಿದ್ದಾರೆ.
Prime Minister of #India @narendramodi to be presented with the Order of the rule of Izzudeen https://t.co/UidmaUGw2H
— Presidency Maldives (@presidencymv) June 8, 2019
ಪ್ರಧಾನಿಯವರು ಮಾಲ್ಡೀವ್ಸ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಸೊಲಿಹ್ ಇಬ್ರಾಹಿಂ, ಉಪಾಧ್ಯಕ್ಷ ಫೈಝಲ್ ನಸೀಮ್, ಅಲ್ಲಿನ ಸಂಸತ್ತಿನ ಸ್ಪೀಕರ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಹಲವಾರು ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆ ಇದೆ.
ಅಲ್ಲದೇ, ಅಲ್ಲಿ ಕಡಲ ವಿಚಕ್ಷಣ ವ್ಯವಸ್ಥೆ ಮತ್ತು ಸೇನಾ ಪಡೆಗಳ ತರಬೇತಿ ಕೇಂದ್ರವನ್ನೂ ಮೋದಿ ಮತ್ತು ಸಲಿಹ್ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಭಾರತೀಯ ಅನುದಾನದೊಂದಿಗೆ ಇವರೆಡನ್ನು ಅಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಭಾರತವು ಅಲ್ಲಿ ಇನ್ನಷ್ಟು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ ಫ್ರೈಡೇ ಮಸೀದಿಯ ನವೀಕರಣ ಇತ್ಯಾದಿಗಳನ್ನು ಈ ಯೋಜನೆ ಒಳಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.