ನವದೆಹಲಿ: ನಾನು ಶ್ರೀಸಾಮಾನ್ಯ, ಅಧಿಕಾರಕ್ಕೆ ಬಂದರೂ ಸಾಮಾನ್ಯನಾಗಿಯೇ ಬದುಕುತ್ತೇನೆ ಎಂದು ಹೇಳುತ್ತಾ ದೆಹಲಿ ಸಿಎಂ ಆದ ಅರವಿಂದ್ ಕೇಜ್ರಿವಾಲ್ ಇದೀಗ ಶ್ರೀಸಾಮಾನ್ಯನಾಗಿ ಉಳಿದಿಲ್ಲ. ಎಲ್ಲಾ ರಾಜಕಾರಣಿಗಳಂತೆ ಅವರೂ ದುಬಾರಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಬಂದಿರುವ ವಿದ್ಯುತ್ ಬಿಲ್ಲೇ ಇದಕ್ಕೆ ಸಾಕ್ಷಿ.
ಕೇವಲ ಎರಡು ತಿಂಗಳಲ್ಲಿ ಕೇಜ್ರಿವಾಲ್ ಅವರಿಗೆ ಒಂದು ಲಕ್ಷಕ್ಕೂ ಅಧಿಕ ವಿದ್ಯುತ್ ಬಿಲ್ ಬಂದಿದೆ. ಮೊದಲ ತಿಂಗಳಲ್ಲಿ ರೂ. 55,999 ಬಿಲ್ ಬಂದರೆ, ನಂತರದ ತಿಂಗಳಲ್ಲಿ 65,780 ರೂಪಾಯಿ ಬಿಲ್ ಬಂದಿದೆ.
ಆರ್ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ ಅರ್ಜಿಯಿಂದಾಗಿ ಈ ಮಾಹಿತಿ ಬಹಿರಂಗಗೊಂಡಿದೆ,
ಮನೆಯಲ್ಲಿ ನಾನು ಎಸಿ ಉಪಯೋಗಿಸುವುದಿಲ್ಲ ಎಂದು ಹೇಳಿದ್ದ ಕೇಜ್ರಿವಾಲ್ ಮನೆಯಲ್ಲೀಗ ಬರೋಬ್ಬರಿ 32 ಎಸಿಗಳಿವೆ ಎಂಬುದು ಕಹಿ ಸತ್ಯ.
ಒಂದು ಕಡೆ ದೆಹಲಿ ಜನತೆಗೆ ಸರಿಯಾಗಿ ವಿದ್ಯುತ್ ಸಿಗುತ್ತಿಲ್ಲ, ಆದರೆ ಆಮ್ ಆದ್ಮಿ ಎಂದು ಹೇಳಿ ಅಧಿಕಾರವೇರಿದ ಕೇಜ್ರಿವಾಲ್ ವಿದ್ಯುತ್ನ ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇನೆಯಿರಲಿ ಕೇಜ್ರಿವಾಲ್ ಅವರ ಬೋಧನೆಗಳು ಇತರ ರಾಜಕಾರಣಿಗಳಿಗೆಯೇ ಹೊರತು ಅವರಿಗೆ ಅದು ಅನ್ವಯಿಸುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.