ಶೋಪಿಯಾನ: ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಸೋಮವಾರ ಮುಸುಕಿನ ಜಾವ ಓರ್ವ ಉಗ್ರನನ್ನು ಹತ್ಯೆ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದೆ. ಮೊಲು-ಚಿತ್ರಗಮ್ ಪ್ರದೇಶದಲ್ಲಿ ನಡೆಸಲಾದ ಎನ್ಕೌಂಟರಿನಲ್ಲಿ ಉಗ್ರನನ್ನು ಸಂಹಾರ ಮಾಡಲಾಗಿದೆ. ಉಗ್ರರು ಮತ್ತು ಭದ್ರತಾ ಪಡೆಗಳ ನಡುವಣ ಗುಂಡಿನ ಚಕಮಕಿ ಈಗಲೂ ಮುಂದುವರೆದಿದೆ ಎಂದು ಹೇಳಲಾಗಿದೆ.
ಮೇ 31 ರಂದು ಶೋಪಿಯಾನ ಜಿಲ್ಲೆಯಲ್ಲಿ ನಡೆದ ಎನ್ಕೌಂಟರಿನಲ್ಲಿ ಕನಿಷ್ಠ ಇಬ್ಬರು ಉಗ್ರರು ಹತರಾಗಿ, ಓರ್ವ ಯೋಧ ಗಾಯಗೊಂಡಿದ್ದರು. ಉಗ್ರರ ಬಳಿಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಶೋಧ ಕಾರ್ಯಚರಣೆಯ ವೇಳೆಯೂ ಝೈನಾಪುರದ ದ್ರಗಾದ್ ಗ್ರಾಮದಲ್ಲಿ ಗುಂಡಿನ ಚಕಮಕಿ ಏರ್ಪಟ್ಟಿತ್ತು. ಈ ಘಟನೆಯ ಬಳಿಕ ಇಂದು ಒರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಮೇ 30 ರಂದು ನಡೆದ ಘಟನೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಸಪೋರದಲ್ಲಿನ ದಂಗಪೋರಾದಲ್ಲಿ ಹತ್ಯೆ ಮಾಡಲಾಗಿದೆ. ರಾಷ್ಟ್ರೀಯ ರೈಫಲ್ಸ್, ಸ್ಪೆಷಲ್ ಆಪರೇಶನ್ ಗ್ರೂಪ್ ಆಫ್ ಪೊಲೀಸ್, ಸಿಆರ್ಪಿಎಫ್ ಜಂಡಿಯಾಗಿ ಕಾರ್ಯಾಚರಣೆಯನ್ನು ನಡೆಸಿ ಈ ಉಗ್ರರನ್ನು ಸಂಹರಿಸಿತ್ತು.
ಕಳೆದ ಕೆಲವು ತಿಂಗಳುಗಳಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರ ಬೇಟಿಯನ್ನು ಭದ್ರತಾ ಪಡೆಗಳು ಚುರುಕುಗೊಳಿಸಿದ್ದು, ಹಲವಾರು ಉಗ್ರರನ್ನು ನೆಲಕ್ಕುರುಳಿಸಲಾಗಿದೆ. ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.