ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟಿಲ್ ಅವರು ಮೆಕ್ಸಿಕೋದ ವಿದೇಶಿಯರಿಗೆ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ “ಆರ್ಡನ್ ಮೆಕ್ಸಿಕಾನ ಡೆಲ್ ಅಗ್ಯುಲ ಜ್ಟೇಕ” (Orden Mexicana del Aguila Azteca) ದಿಂದ ಪುರಸ್ಕೃತರಾಗಿದ್ದಾರೆ.
ಮೆಕ್ಸಿಕೋದ ಭಾರತ ರಾಯಭಾರಿಯಾಗಿರುವ ಮೆಲ್ಬಾ ಪ್ರಿಯ ಅವರು ಪಾಟಿಲ್ ಅವರಿಗೆ ಪುಣೆಯ MCCIA ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರತಿಭಾ ಪಾಟಿಲ್ ಅವರು 2007 ರಿಂದ 2012ರವರೆಗೆ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಇತಿಹಾಸವನ್ನು ನಿರ್ಮಾಣ ಮಾಡಿದ್ದರು.
85 ವರ್ಷದ ಪಾಟಿಲ್ ಈ ಪ್ರಶಸ್ತಿಯನ್ನು ಪಡೆದುಕೊಂಡು ದೇಶದ ಎರಡನೆಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಮಾಜಿ ರಾಷ್ಟ್ರಪತಿ ಎಸ್. ರಾಧಕೃಷ್ಣನ್ ಅವರಿಗೆ ಈ ಗೌರವ ಲಭಿಸಿತ್ತು.
ಮೆಕ್ಸಿಕೋಗೆ ಅನನ್ಯ ಸೇವೆ ಸಲ್ಲಿಸುವ ವಿದೇಶಿ ಪ್ರಜೆಗಳಿಗೆ, ಮಾನವೀಯತೆಗೆ ಸೇವೆ ಸಲ್ಲಿಸುವವರಿಗೆ, ಮೆಕ್ಸಿಕೋ ಮತ್ತು ಇತರ ದೇಶದ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸಲು ಕೊಡುಗೆ ನೀಡುವವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.