ವಾಷಿಂಗ್ಟನ್: ಅಮೆರಿಕಾ ಪ್ರತಿಷ್ಠಿತ ಸ್ಪರ್ಧೆಯೊಂದರಲ್ಲಿ ಭಾರತೀಯ ಮೂಲದ ತರುಣರು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. 2019 ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ 7 ಮತ್ತು ಅಮೆರಿಕಾದ ಓರ್ವ ವಿದ್ಯಾರ್ಥಿ ವಿಜಯಶಾಲಿಯಾಗಿದ್ದಾರೆ. 550 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಅವರು ಈ ಸಾಧನೆಯನ್ನು ಮಾಡಿದ್ದಾರೆ. ವಿಜೇತರಿಗೆ $50,000 ನಗದು ಮತ್ತು ಪುರಸ್ಕಾರ ದೊರೆತಿದೆ.
ವಿಜೇತರಾದ ವಿದ್ಯಾರ್ಥಿಗಳೆಂದರೆ, 13 ವರ್ಷದ ಕ್ಯಾಲಿಫೋರ್ನಿಯಾ ನಿವಾಸಿ ರಿಷಿಕ್ ಗಂಧಶ್ರೀ, 13 ವರ್ಷದ ಮೇರಿಲ್ಯಾಂಡ್ ನಿವಾಸಿ ಸಂಕೇತ್ ಸುಂದರ್, 13 ವರ್ಷದ ನ್ಯೂ ಜೆರ್ಸಿ ನಿವಾಸಿ ಶೃತಿಕಾ ಪಧಿ, 13 ವರ್ಷದ ಟೆಕ್ಸಾಸ್ ನಿವಾಸಿ ಸೋಹಮ್ ಸುಖತಂಕರ್, 12 ವರ್ಷದ ಟೆಕ್ಸಾಸ್ ನಿವಾಸಿ ಅಭಿಜಯ್ ಕೊಡಲಿ, 13 ವರ್ಷದ ಟೆಕ್ಸಾಸ್ ನಿವಾಸಿ ರೋಹನ್ ರಾಜ , 13 ವರ್ಷದ ನ್ಯೂಜೆರ್ಸಿ ನಿವಾಸಿ ಕ್ರಿಸ್ಟೋಫರ್ ಸೆರ್ರಾವ್, 14 ವರ್ಷದ ಅಲಬಾಮಾ ನಿವಾಸಿ ಎರಿನ್ ಹೋವರ್ಡ್.
History at 2019 Scripps National #SpellingBee! 8 Co-Champions! SEVEN #IndianAmericans! Congratulations to winners Rishik Gandhasri, Erin Howard, Saketh Sundar, Shruthika Padhy, Sohum Sukhatankar, Abhijay Kodali, Christopher Serrao, Rohan Raja. #USIndia #ScrippsNationalSpellingBee pic.twitter.com/kzgoHyE5VO
— U.S. Embassy India (@USAndIndia) May 31, 2019
ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬಿ ಯು ವಿದ್ಯಾರ್ಥಿಗಳಿಗೆ ತಮ್ಮ ಕಾಗುಣಿತವನ್ನು ಸುಧಾರಿಸಲು, ಶಬ್ದಕೋಶಗಳನ್ನು ಹೆಚ್ಚಿಸಲು ಮತ್ತು ಸರಿಯಾದ ಇಂಗ್ಲಿಷ್ ಬಳಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಉದ್ದೇಶದಿಂದ ಆಯೋಜಿಸಲ್ಪಟ್ಟ ಅಮೆರಿಕಾದ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಸ್ಪರ್ಧೆಯಾಗಿದೆ. ಈ ವರ್ಷದ ಕಳೆದ ಮಂಗಳವಾರ ಈ ಸ್ಪರ್ಧೆ ಪ್ರಾರಂಭವಾಯಿತು. ಅಮೆರಿಕಾದ್ಯಂತದ ಮತ್ತು ಹೊರ ದೇಶಗಳ 7 ರಿಂದ 14 ವರ್ಷ ವಯಸ್ಸಿನ ಸುಮಾರು 565 ಸ್ಪರ್ಧಿಗಳು ಇದರಲ್ಲಿ ಭಾಗಿಯಾಗಿದ್ದರು. ಕಳೆದ ವರ್ಷ 14 ವರ್ಷ ವಯಸ್ಸಿನ ಭಾರತೀಯ ಸಂಜಾತ ಕಾರ್ತಿಕ್ ನೆಮ್ಮಾನಿ ಈ ಸ್ಪರ್ಧೆಯಲ್ಲಿ ಜಯ ಗಳಿಸಿದ್ದ ಮತ್ತು 2017 ರಲ್ಲಿ ಭಾರತೀಯ ಸಂಜಾತೆ ಅನನ್ಯ ವಿನಯ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.