ಮುಂಬಯಿ: ಮುಂಬಯಿಯ ಸ್ಥಳಿಯ ರೈಲುಗಳ ಲೇಡಿಸ್ ಕೋಚ್ಗಳಲ್ಲಿ ಇನ್ನು ಮುಂದೆ ತಲೆಗೆ ಸೀರೆ ಸೆರಗು ಹಾಕಿಕೊಂಡ ಸಾಂಪ್ರದಾಯಿಕ ಮಹಿಳೆಯ ಬದಲು ಫಾರ್ಮಲ್ ಸೂಟ್ ಮತ್ತು ಶರ್ಟ್ ತೊಟ್ಟ ಮಹಿಳೆಯ ಲೋಗೋ ಕಾಣ ಸಿಗಲಿದೆ.
ಮಹಿಳೆಯ ಸಾಂಪ್ರದಾಯಿಕ ಸ್ಥಾನಮಾನವನ್ನು ಪ್ರತಿನಿಧಿಸುವ ಲೋಗೋದ ಬದಲು ಆಧುನಿಕ ಕಾಲಘಟ್ಟದ ಉದ್ಯೋಗಸ್ಥ ಮಹಿಳೆಯನ್ನು ಪ್ರತಿಬಿಂಬಿಸುವ ಲೋಗೋವನ್ನು ಮುಂಬಯಿ ರೈಲ್ವೇ ಹಾಕಲು ನಿರ್ಧರಿಸಿದೆ. ಕಾಲ ಬದಲಾದಂತೆ ಮಹಿಳೆಯ ಸ್ಥಾನಮಾನವೂ ಬದಲಾಗಿದೆ. ಹೀಗಾಗಿ ಆಧುನಿಕ, ಯಶಸ್ವಿ, ಸ್ಮಾರ್ಟ್ ಮಹಿಳೆಯ ಲೋಗೋವನ್ನು ಹಾಕಲಾಗಿದೆ.
ಲೋಗೋ ಮಾತ್ರವಲ್ಲ, ಮಹಿಳೆಯರ ಕೋಚಿನ ಒಳಾಂಗಣ ಸಂಪೂರ್ಣ ಬದಲಾವಣೆಯನ್ನು ಕಾಣಲಿದೆ. ಗಗನಯಾನಿ ಕಲ್ಪನಾ ಚಾವ್ಲಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕ್ರಿಕೆಟರ್ ಮಿಥಾಲಿ ರಾಜ್ ಮುಂತಾದವರ ಫೋಟೋ ಮತ್ತು ಅವರ ಸಾಧನೆಗಳ ವಿವರಗಳುಳ್ಳ ಪೋಸ್ಟರ್ಗಳು ಇಲ್ಲಿ ಇರಲಿವೆ. ಜನಸಾಮಾನ್ಯರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ದೊಡ್ಡ ಗಾತ್ರದಲ್ಲಿ ಲೋಗೋ ಹಾಕಲು ನಿರ್ಧರಿಸಲಾಗಿದೆ.
“ಮುಂಬಯಿ ನಗರದ ಇಂದಿನ ಯಶಸ್ವಿ ಮತ್ತು ಸ್ವತಂತ್ರ ಮಹಿಳೆಯರನ್ನು ಪ್ರತಿನಿಧಿಸುವ ಮತ್ತು ಅವರಿಗೆ ನ್ಯಾಯ ಒದಗಿಸುವಂತಹ ಲೋಗೋವನ್ನು ಆರಿಸಲಾಗಿದೆ” ಎಂದು ವೆಸ್ಟರ್ನ್ ರೈಲ್ವೇ ಮುಖ್ಯಸ್ಥ ರವೀಂದ್ರ ಭಕೇರ್ ಹೇಳಿದ್ದಾರೆ.
To keep up with the changing times, WR is modernising the logo used to mark women’s coaches. Apart from the change in the logo, posters of inspiring women with details of their achievements, will also be displayed in the ladies coaches. @drmbcthttps://t.co/9c7dqKsd4Y
— Western Railway (@WesternRly) May 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.