ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಕಾರ ಗ್ರಾಮದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರು ಸೇರಿ ಸ್ವ ಪ್ರೇರಣೆಯಿಂದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ಶುದ್ಧಗೊಳಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ.
ರಾಮ ಮುಕ್ರಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಗ್ರಾಮದಲ್ಲಿ ಎಲ್ಲರಿಗೂ ನೀರು ಕೊಡುವ ಬಾವಿಯಲ್ಲಿ ತುಂಬಿದ್ದ ಹೂಳನ್ನು ಮೇಲೆತ್ತಿದ್ದಾರೆ. ಹೂಳು ತುಂಬಿದ ಬಾವಿಯಲ್ಲಿ ನೀರು ಮಲಿನವಾಗುತ್ತದೆ ಮತ್ತು ಬತ್ತುತ್ತದೆ. ಹೀಗಾಗಿ ಈ ಕುಟುಂಬ ಯಾರ ನೆರವನ್ನೂ ಪಡೆಯದೆ ಆಳವಾದ ಬಾವಿಯಲ್ಲಿ ಹೂಳನ್ನು ಮೇಲೆತ್ತಿ ಭೇಷ್ ಎನಿಸಿಕೊಂಡಿದೆ. ಕುಟುಂಬದ ಕಾರ್ಯದಿಂದಾಗಿ ಆ ಗ್ರಾಮದ ಎಲ್ಲರಿಗೂ ಶುದ್ಧ ಕುಡಿಯುವ ನೀರು ಸಿಗುವಂತಾಗಿದೆ.
ಈ ಕುಟುಂಬ ಸರ್ಕಾರಕ್ಕೆ ಕಾಯದೆ ಸ್ವ-ಇಚ್ಛೆಯಿಂದ ಸಾಮಾಜಿಕ ಕಾರ್ಯ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ ಮತ್ತು ಮಾದರಿಯಾಗಿದ್ದಾರೆ. ಅನೇಕರು ಕೇವಲ ಸರ್ಕಾರವನ್ನು ನಿಂದನೆ ಮಾಡುತ್ತಾ ಕಾಲ ಹರಣ ಮಾಡುತ್ತಿರುತ್ತಾರೆ. ಆದರೆ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಸಮಸ್ಯೆ ಬೇಗ ಬಗೆ ಹರಿಯುತ್ತದೆ. ಈ ರೀತಿ ಬೇರೆಯವರನ್ನು ಕಾಯದೆ ತಮ್ಮ ಊರಿಗೆ ಅನುಕೂಲವಾಗಲಿ ಎಂದು ಈ ಕುಟುಂಬ ಜನೋಪಯೋಗಿ ಕಾರ್ಯವನ್ನು ಮಾಡಿದೆ. ಈ ಕುಟುಂಬ ಸದಸ್ಯರೆಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಲೇಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.