ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿಯು 2019ರ ಚುನಾವಣೆಯಲ್ಲಿ ಸ್ಥಾನಗಳನ್ನು 303ಕ್ಕೆ ಏರಿಸಿಕೊಂಡಿತು. 2024ರ ಚುನಾವಣೆಯಲ್ಲಿ ನಮ್ಮ ಪಕ್ಷ 333 ಸ್ಥಾನಗಳನ್ನು ಪಡೆಯುವತ್ತ ಟಾರ್ಗೆಟ್ ರೂಪಿಸಿದೆ ಎಂದು ಆಂಧ್ರಪ್ರದೇಶ, ತ್ರಿಪುರಾದ ಬಿಜೆಪಿ ರಾಷ್ಟ್ರೀಯ ಉಸ್ತುವಾರಿಯಾಗಿರುವ ಸುನಿಲ್ ದಿಯೋಧರ್ ಹೇಳಿದ್ದಾರೆ.
“ದಕ್ಷಿಣದ ರಾಜ್ಯಗಳಿಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸುವ ಮೂಲಕ 2024ರಲ್ಲಿ ಸ್ಥಾನವನ್ನು ಹೆಚ್ಚಳ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಲಿದೆ. 333 ಗಡಿಯನ್ನು ತಲುಪಲು ಸಾಧ್ಯವಾದರೆ, ಬಳಿಕ ಕರಾವಳಿಯ ರಾಜ್ಯಗಳನ್ನು ಕೇಂದ್ರೀಕರಿಸಬಹುದಾಗಿದೆ” ಎಂದಿದ್ದಾರೆ.
ಹಿಂದೂಸ್ಥಾನ್ ಟೈಮ್ಸ್ಗೆ ಸಂದರ್ಶನ ನೀಡಿ ಮಾತನಾಡಿದ ಅವರು, “ಹಿಂದಿ ಮಾತನಾಡುವವರ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬಂದರೆ ಬಿಜೆಪಿಗೆ ಮಿಶನ್ 333 ಸಾಧ್ಯವಾಗಲಿದೆ. ದಕ್ಷಿಣ ಭಾರತದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಹೆಚ್ಚಿಸುವ ಸಲುವಾಗಿ ಬಿಜೆಪಿಯು ಸಂಪೂರ್ಣ ಭಾರತದ ಪಕ್ಷವಾಗಿ ತನ್ನನ್ನು ತಾನು ಬಿಂಬಿಸಬೇಕಾಗಿದೆ” ಎಂದಿದ್ದಾರೆ.
ದಕ್ಷಿಣ ಭಾರತದ 5 ರಾಜ್ಯಗಳ ಪೈಕಿ ಈ ಬಾರಿ ಬಿಜೆಪಿಗೆ ಮತ ಹಾಕದ 4 ರಾಜ್ಯಗಳಲ್ಲಿ ಬಿಜೆಪಿಯು ತನ್ನ ಸಂಘಟನಾ ರಚನೆಯನ್ನು ಬಲಿಷ್ಠಗೊಳಿಸಲು ಸಿದ್ಧತೆಯನ್ನು ಆರಂಭಿಸಿದೆ ಎಂದಿದ್ದಾರೆ.
ದಕ್ಷಿಣ ಭಾರತದ ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ ಬಿಜೆಪಿಯು 25 ಸ್ಥಾನಗಳನ್ನು ಪಡೆದುಕೊಳ್ಳಲು ಯಶಸ್ವಿಯಾಗಿದೆ, ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳ ಪೈಕಿ 4ರಲ್ಲಿ ಜಯ ಗಳಿಸಿದೆ. ಉಳಿದ ರಾಜ್ಯಗಳಾದ ಆಂಧ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಯಾವುದೇ ಸ್ಥಾನಗಳನ್ನು ಅದು ಪಡೆದುಕೊಂಡಿಲ್ಲ.
ಪಶ್ಚಿಮಬಂಗಾಳದಲ್ಲಿ 2 ಇದ್ದ ಸ್ಥಾನಗಳನ್ನು 18ಕ್ಕೆ ಏರಿಸಿಕೊಂಡ ಮಾದರಿಯಲ್ಲೇ ದಕ್ಷಿಣದ ರಾಜ್ಯಗಳಲ್ಲಿ 2024ರ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಏರಿಸಿಕೊಳ್ಳಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.