ನವದೆಹಲಿ: ಮೇ.30ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರು ಪ್ರಮಾಣವಚನವನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ BIMSTEC ( (Bay of Bengal Initiative for Multi-Sectoral Technical and Economic Cooperation) ರಾಷ್ಟ್ರಗಳನ್ನು ಆಹ್ವಾನಿಸಲು ಸರ್ಕಾರ ನಿರ್ಧರಿಸಿದೆ.
ಬಂಗಾಳ ಕೊಲ್ಲಿಯನ್ನು ಅವಲಂಬಿಸಿರುವ ಬಾಂಗ್ಲಾದೇಶ, ಭಾರತ, ಮಯನ್ಮಾರ್, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್, ಭೂತಾನ್ ಗಳು BIMSTEC ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳ ಮುಖಂಡರಿಗೆ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗುತ್ತಿದೆ.
2014ರಲ್ಲಿ ಮೋದಿ ಆಡಳಿತವು ಸಾರ್ಕ್ ನಾಯಕರನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನ ಮಾಡಿತ್ತು. ಪಾಕಿಸ್ಥಾನ ಪ್ರಧಾನಿಗಳೂ ಇದರಲ್ಲಿ ಭಾಗಿಯಾಗಿದ್ದರು. ಆದರೆ ಬಳಿಕ ಭಯೋತ್ಪಾದನಾ ಕೃತ್ಯ ಜರುಗಿದ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವಣ ಸಂಬಂಧ ಹಳಿಸಿತು. ಹೀಗಾಗಿ ಪಾಕಿಸ್ಥಾನದಲ್ಲಿ ನಡೆದ ಸಾರ್ಕ್ ಸಮಿತ್ ನಲ್ಲಿ ಭಾರತ ಭಾಗಿಯಾಗಿರಲಿಲ್ಲ.
ಈ ಬಾರಿ ಮೋದಿ ಆಡಳಿತವು BIMSTEC ರಾಷ್ಟ್ರಗಳನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸುತ್ತಿದೆ. ಈ ಮೂಲಕ ‘Neighbourhood First’ policy”ಯನ್ನು ಅನುಸರಿಸುತ್ತಿದೆ. ಸಾರ್ಕ್ ನಲ್ಲಿರುವ ಅಫ್ಘಾನಿಸ್ಥಾನ, ಪಾಕಿಸ್ಥಾನ, ಮಾಲ್ಡೀವ್ಸ್ ಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಷ್ಟ್ರಗಳು ಆಹ್ವಾನ ಪಡೆದುಕೊಂಡಿದೆ.
ಪ್ರಧಾನಿಯಾದ ಬಳಿಕ ಮೋದಿಯವರು ಮೊದಲು ಮಾಲ್ಡೀವ್ಸ್ ಗೆ ಭೇಟಿಯನ್ನು ನೀಡಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.