ನವದೆಹಲಿ: ಚಂಡಮಾರುತದಿಂದ ಸಂತ್ರಸ್ಥರಾಗಿರುವ ಒರಿಸ್ಸಾದ ಪುರಿ ಜಿಲ್ಲೆಯ ಮಕ್ಕಳಿಗೆ ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (NDDB), ಒರಿಸ್ಸಾ ಹಾಲು ಉತ್ಪಾದಕರ ಸಹಕಾರ ಸಂಘದ ಸಹಭಾಗಿತ್ವದಲ್ಲಿ 6.25 ಲಕ್ಷ ಟೆಟ್ರಾ ಮಿಲ್ಕ್ ಪ್ಯಾಕೆಟ್ ಅನ್ನು ಹಂಚಿಕೆ ಮಾಡಿದೆ.
ಚಂಡಮಾರುತ ಪೀಡಿತ ಜಿಲ್ಲೆಯಲ ಮಕ್ಕಳಿಗೆ 6.5 ಲಕ್ಷ ಟೆಟ್ರಾ ಮಿಲ್ಕ್ ಪ್ಯಾಕ್ ಅನ್ನು ಹಂಚಿಕೆ ಮಾಡಲಾಗಿದೆ. ಒಂದು ಮಗು 5 ಪ್ಯಾಕ್ ಹಾಲನ್ನು ಪಡೆಯಲಿದೆ ಎಂದು ಬೋರ್ಡ್ ಮುಖ್ಯಸ್ಥ ಅಭಿಜಿತ್ ಭಟ್ಟಾಚಾರ್ಯ ಹೇಳಿದ್ದಾರೆ.
ಮಾತ್ರವಲ್ಲದೇ, ಬೋರ್ಡ್ ವತಿಯಿಂದ ಜಾನುವಾರುಗಳಿಗೆ 300 ಟನ್ ಮೇವನ್ನೂ ಒದಗಿಸಲು ನಿರ್ಧರಿಸಲಾಗುತ್ತಿದೆ.
ಈಗಾಗಲೇ ಬೋರ್ಡ್ ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 8 ಲಕ್ಷ ರೂಪಾಯಿಗಳ ಕೊಡುಗೆಯನ್ನು ನೀಡುವ ಮೂಲಕ ಸಂತ್ರಸ್ಥರ ಪುನರ್ವಸತಿಗೆ ಕೈಜೋಡಿಸಿದೆ.
ಮೇ 3 ರಂದು ಸಂಭವಿಸಿದ ‘ಫನಿ’ ಚಂಡಮಾರುತಕ್ಕೆ ಒರಿಸ್ಸಾದ ಪುರಿ ಜಿಲ್ಲೆ ತತ್ತರಿಸಿ ಹೋಗಿತ್ತು. ಒರಿಸ್ಸಾದಾದ್ಯಂತ ಸುಮಾರು 64 ಮಂದಿ ಮೃತರಾಗಿದ್ದಾರೆ. ಇದರಲ್ಲಿ 39 ಮಂದಿ ಪುರಿಯವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.