ನವದೆಹಲಿ: ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಬಿಜೆಪಿಯು ಮಂಗಳವಾರ ತನ್ನ ಎನ್ಡಿಎ ಮೈತ್ರಿಕೂಟದ ಮಿತ್ರರಿಗೆ ಔತಣಕೂಟವನ್ನು ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, 2019ರ ಚುನಾವಣೆ ನನಗೆ ತೀರ್ಥಯಾತ್ರೆಯಾಗಿತ್ತು ಎಂದಿದ್ದಾರೆ. ಮಾತ್ರವಲ್ಲದೇ, ಬೆಂಬಲವಿತ್ತ ಮಿತ್ರಪಕ್ಷಗಳಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದ್ದಾರೆ.
ಎನ್ಡಿಎ ಔತನಕೂಟದ ಬಳಿಕ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, “ ಪ್ರಧಾನಿಯವರು ತಾನು ಹಲವಾರು ಚುನಾವಣೆಗಳನ್ನು ನೋಡಿದ್ದೇನೆ, ಆದರೆ ಈ ಬಾರಿಯದ್ದು ಚುನಾವಣಾ ಪ್ರಚಾರ ಎಂದು ನನಗನಿಸಲಿಲ್ಲ, ಇದು ನನಗೆ ತೀರ್ಥಯಾತ್ರೆಯಾಯಿತು ಎಂಬ ಮಾತನ್ನು ಹೇಳಿದರು” ಎಂದಿದ್ದಾರೆ.
“ಎನ್ಡಿಎ ಸರ್ಕಾರದ ಅವಧಿಯನ್ನು ಅತ್ಯಂತ ಯಶಸ್ವಿ ಪ್ರಯೋಗ ಎಂದು ಮೋದಿ ಬಣ್ಣಿಸಿದರು, ಮೈತ್ರಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಟ್ಟಿಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು” ಎಂದರು.
ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆದಿದ್ದು, ಎನ್ಡಿಎ ಸರ್ಕಾರದ ಎಲ್ಲಾ ಸಚಿವರುಗಳು ಭಾಗಿಯಾಗಿದ್ದರು. 5 ವರ್ಷಗಳ ಕಾಲ ಮಾಡಿದ ಸಾಧನೆಗಾಗಿ ಅವರು ಮೋದಿಯನ್ನು ಕೊಂಡಾಡಿದರು.
ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದ ಎನ್ಡಿಎ ನಾಯಕರು, ಸೋಲಿನ ಭೀತಿಯಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು. ಅಲ್ಲದೇ, 300ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಸರ್ಕಾರ ರಚನೆ ಮಾಡುವ ಅಚಲ ಭರವಸೆಯನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.