ನವದೆಹಲಿ: ವಿಶ್ವಸಂಸ್ಥೆಯ ವಿಪತ್ತು ಅಪಾಯ ಕಡಿತ (UNDRR) ಕ್ಕಾಗಿರುವ ಕಛೇರಿಯು ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಕುಮಾರ್ ಅವರಿಗೆ ವಿಪತ್ತು ಅಪಾಯ ಕಡಿತಕ್ಕಾಗಿ ಪ್ರತಿಷ್ಠಿತ ಸಸಕವ ಅವಾರ್ಡ್ 2019 ಅನ್ನು ಪ್ರದಾನ ಮಾಡಿದೆ. ಇದು ಭಾರತಕ್ಕೆ ಸಂದ ಅತೀ ದೊಡ್ಡ ಗೌರವವಾಗಿದೆ.
“ವಿಪತ್ತುಗಳಿಗೆ ಹೆಚ್ಚು ತೆರೆದಿರುವ ಸಮುದಾಯಗಳ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಮತ್ತು ಅಸಮಾನತೆ ಮತ್ತು ಬಡತನವನ್ನು ಕಡಿಮೆ ಮಾಡಲು ಸಾಮಾಜಿಕ ಸೇರ್ಪಡೆಗೆ ಸುದೀರ್ಘ ಸಮಯದಿಂದ ವೈಯಕ್ತಿಕ ಬದ್ಧತೆಯನ್ನು ತೋರಿಸಿದ್ದಕ್ಕಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರ ಸುರಕ್ಷತೆಯನ್ನು ಹೆಚ್ಚಿಸಿದ್ದಕ್ಕಾಗಿ ಮಿಶ್ರಾ ಅವರಿಗೆ ಈ ಗೌರವವನ್ನು ನೀಡಲಾಗಿದೆ” ಎಂದು ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.
ವಿಪತ್ತು ಅಪಾಯ ನಿರ್ವಹಣೆಯಲ್ಲಿ ಸಸಕವ ಪ್ರಶಸ್ತಿ ಅತ್ಯಂತ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಎಂದು ಪರಿಗಣಿತವಾಗಿದೆ, 30 ವರ್ಷಗಳ ಹಿಂದೆ ಇದು ಆರಂಭಗೊಂಡಿತು. UNDRR ಮತ್ತು ನಿಪ್ಪೋನ್ ಫೌಂಡೇಶನ್ ಇದನ್ನು ಜಂಟಿಯಾಗಿ ಆಯೋಜನೆಗೊಳಿಸುತ್ತದೆ, ವಿಜೇತರಿಗೆ $50,000 ನೀಡಲಾಗುತ್ತದೆ. ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಈ ವರ್ಷ “ಅಂತರ್ಗತ ನಿರ್ಮಾಣ ಮತ್ತು ಚೇತರಿಕಾ ಸಮಾಜ” ಎಂಬುದು ಪ್ರಶಸ್ತಿಯ ಥೀಮ್ ಆಗಿತ್ತು. ಇದಕ್ಕೆ 31 ದೇಶಗಳ 61 ನಾಮನಿರ್ದೇಶನಗಳನ್ನು ಪಡೆಯಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.