ನವದೆಹಲಿ: ಭಾರೀ ಕುತೂಹಲಗಳನ್ನು ಕೆರಳಿಸಿರುವ ಚಂದ್ರಯಾನ ಮತ್ತು ಗಗನಯಾನ ಯೋಜನೆಗಳನ್ನು ಹೊರತುಪಡಿಸಿಯೂ ಹಲವಾರು ಯೋಜನೆಗಳನ್ನು ಮುಂಬರುವ ವರ್ಷಗಳಲ್ಲಿ ಕಾರ್ಯರೂಪಕ್ಕೆ ತರಲು ಇಸ್ರೋ ಸನ್ನದ್ಧವಾಗುತ್ತಿದೆ. ಒಂದು ದಶಕದೊಳಗೆ 7 ಅಂತರ್ ಗ್ರಹ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಇಸ್ರೋ ಹೇಳಿಕೊಂಡಿದೆ.
ಶಾಲಾ ಮಕ್ಕಳಿಗಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುತ್ತಿದ್ದ ಯುವ ವಿಜ್ಞಾನಿ ಕಾರ್ಯಕ್ರಮ ‘ಯುವಿಕ’ದ ಸೈಡ್ಲೈನ್ನಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರು, “ಇಸ್ರೋ 7 ಅಂತರ್ ಗ್ರಹ ಕಾರ್ಯಾಚರಣೆಯನ್ನು ನಡೆಸಲು ಕಾರ್ಯೋನ್ಮುಖವಾಗಿದೆ. ಇದೆಲ್ಲವೂ ಒಂದು ದಶಕದೊಳಗೆ ಅನುಷ್ಠಾನಗೊಳ್ಳಲಿದೆ ಎಂದಿದ್ದಾರೆ.
ಮಂಗಳಯಾನ-2, ಚಂದ್ರಯಾನ-3, ಶುಕ್ರ ಗ್ರಹ ಮಿಶನ್, EXPO-SAT ಗ್ರಹಗಳ ಪರಿಶೋಧನೆ, ಮಿಶನ್ ಆದಿತ್ಯಾ ಎಲ್1 ಇತ್ಯಾದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಇಸ್ರೋ ಶ್ರಮಿಸುತ್ತಿದೆ.
“ಶುಕ್ರ ಗ್ರಹದ ಬಗ್ಗೆ ಹಲವಾರು ಕುತೂಹಲಗಳಿದ್ದು, ನಾವು ಭಾರತ ಮತ್ತು ಜಾಗತಿಕ ವಿಜ್ಞಾನ ಸಮುದಾಯಕ್ಕೆ ಹಲವಾರು ಘೋಷಣೆಗಳನ್ನು ಮಾಡಿದ್ದೇವೆ ಮತ್ತು ಸುಮಾರು 20 ಪೆಲೋಡ್ಗಳು ಆಗಮಿಸುತ್ತಿವೆ” ಎಂದು ಸಿವನ್ ಹೇಳಿದ್ದಾರೆ.
ಮಿಶನ್ ಆದಿತ್ಯ ಎಲ್ 1 ಸೂರ್ಯನ ಕೊರೊನಾವನ್ನು ಅಧ್ಯಯನ ಮಾಡುತ್ತದೆ ಮತ್ತು ಇದನ್ನು 2020ರ ಮಧ್ಯಭಾಗದಲ್ಲಿ ಉಡಾವಣೆ ಮಾಡುವ ನಿರೀಕ್ಷೆ ಇದೆ, ಹವಮಾನ ವೈಪರೀತ್ಯವನ್ನು ಅರ್ಥ ಮಾಡಿಕೊಳ್ಳಲು ಈ ಮಿಶನ್ ಸಹಕಾರಿಯಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.