ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಜೊತೆಗೂಡಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ಕಾರ್ಯಕರ್ತನಾಗಿದ್ದ ಸಂದರ್ಭವನ್ನು ಅತ್ಯಂತ ವಿನಮ್ರವಾಗಿ ನೆನಪಿಸಿಕೊಂಡ ಮೋದಿ, ಪ್ರಜಾಪ್ರಭುತ್ವದ ಶಕ್ತಿಯನ್ನು ಶ್ಲಾಘಿಸಿದರು. ಚುನಾವಣೆ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದ ಅವರು NDA ಸರಕಾರ ಮತ್ತೆ ಅಧಿಕಾರಕ್ಕೇರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ತನ್ನ ಚುನಾವಣಾ ಪ್ರಚಾರವು ದೇಶದ ಜನರಿಗೆ ಧನ್ಯವಾದಗಳನ್ನು ಅರ್ಪಿಸಲು ನಡೆಸಿದ ಸಮಾವೇಶವಾಗಿತ್ತು ಎಂದಿದ್ದಾರೆ. ಈ ಅವಧಿಯಲ್ಲಿ ಒಂದೇ ಒಂದು ಚುನಾವಣಾ ಸಮಾವೇಶವು ರದ್ದುಗೊಂಡಿಲ್ಲ ಎಂಬ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ದೇಶದ ಜನರಿಗೆ ಧನ್ಯವಾದಗಳನ್ನು ತಿಳಿಸಿದರು.
ಸುದೀರ್ಘ ಮತ್ತು ಅತ್ಯಂತ ಫಲದಾಯಕ ಲೋಕಸಭಾ ಚುನಾವಣಾ ಪ್ರಚಾರದ ಬಗ್ಗೆ ಪ್ರಸ್ತಾಪಿಸಿದರು. ಮಹತ್ವಪೂರ್ಣ ಬೆಂಬಲವನ್ನು ನೀಡಿದ ದೇಶದ ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ ಅವರು, 2014ರ ವಿಜಯ ಮರುಕಳಿಸಲಿದೆ ಎಂದರು.
ಮೇ ಭಿ ಚೌಕಿದಾರ್ ಮುಂತಾದ ಪರಿಣಾಮಕಾರಿ ಚುನಾವಣಾ ಪ್ರಚಾರದ ಫಲವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾದೇಶ ದೊರೆಯಲಿದೆ ಎಂದ ಅವರು, ಹತ್ತಿರ ಹತ್ತಿರ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಪಡೆದುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
300 ಸ್ಥಾನ ಗೆಲ್ಲುವ ಭರವಸೆಯೊಂದಿಗೆ ಪ್ರಚಾರ ಕಾರ್ಯ ಸಮಾಪನಗೊಳಿಸಿದ ಮೋದಿ
300 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರುವ ಅಚಲ ಭರವಸೆಯನ್ನು ನೀಡುವ ಮೂಲಕ 2019ರ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಸಮಾಪನಗೊಳಿಸಿದ್ದಾರೆ. ಕೊನೆಯ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ಕೆ ಇಂದು ಸಂಜೆ ತೆರೆ ಬಿದ್ದಿದೆ.
ಮಧ್ಯಪ್ರದೇಶದ ಖಾರ್ಗೊನ್ ಪ್ರದೇಶದಲ್ಲಿ ಕೊನೆಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭ್ಕಿ ಬಾರ್ 300 ಪಾರ್, ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬ ಘೋಷವಾಕ್ಯವನ್ನು ಕೂಗಿದರು.
“ಇಡೀ ದೇಶವೇ ಇಂದು ಅಭ್ಕಿ ಬಾರ್ ಮೋದಿ ಸರ್ಕಾರ್ ಎಂದು ಹೇಳುತ್ತಿದೆ, ಅಭ್ಕಿ ಬಾರ್ 300 ಪಾರ್ ಎಂಬುದೂ ಖಚಿತವಾಗಿದೆ. ಎನ್ಡಿಎ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 300 ಸ್ಥಾನಗಳನ್ನು ಮೀರಿ ಸ್ಥಾನಗಳನ್ನು ಪಡೆಯಲಿದೆ ಎಂದಿದ್ದಾರೆ.
“ಈ ಭಾನುವಾರ ನೀವು ಮತ ಹಾಕಿದಾಗ ಇತಿಹಾಸ ನಿರ್ಮಾಣವಾಗಲಿದೆ. ದಶಕಗಳ ಬಳಿಕ ಎರಡನೇ ಬಾರಿಗೆ ನೀವು ಬಹುಮತದ ಸರ್ಕಾರವನ್ನು ಚುನಾಯಿಸಲಿದ್ದೀರಿ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.