ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಹಳಿಯುವುದಕ್ಕಾಗಿ ‘ಮೋದಿಲೈ’ ಎಂಬ ಹೊಸ ಶಬ್ದವನ್ನು ಪ್ರಯೋಗಿಸಿದ್ದರು.
ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಅಭಿಯಾನದ ಭಾಗವಾಗಿ, ಮೋದಿ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ನಿರೂಪಿಸುವುದಕ್ಕಾಗಿ ಅವರು ಈ ಶಬ್ದವನ್ನು ಪ್ರಯೋಗ ಮಾಡಿದ್ದರು. ಸುಪ್ರೀಂಕೋರ್ಟ್ ಚಾಟಿ ಬೀಸಿದರೂ ರಾಹುಲ್ ಅವರು ತಮ್ಮ ಚಾಳಿಯನ್ನು ಬಿಡದೆ ಇಂತಹ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.
ತನ್ನ ಇತ್ತೀಚಿನ ಟ್ವಿಟ್ನಲ್ಲಿ ಅವರು, ಇಂಗ್ಲೀಷ್ ಡಿಕ್ಷನರಿಯಲ್ಲಿ ಹೊಸ ಶಬ್ದ ಸೇರ್ಪಡೆಯಾಗಿದೆ ಎಂದಿದ್ದಾರೆ. ಮಾತ್ರವಲ್ಲ ಅದರ ಎಂಟ್ರಿಯ ಸ್ನ್ಯಾಪ್ಶಾಟ್ ಅನ್ನು ಹಾಕಿದ್ದಾರೆ.
ರಾಹುಲ್ ಗಾಂಧಿಯವರು ಹಂಚಿಕೊಂಡಿರುವ ಸ್ಕ್ರೀನ್ಶಾಟ್ ಪ್ರಕಾರ ‘ಮೋದಿಲೈ’ ಶಬ್ದದ ಅರ್ಥ ಸತ್ಯವನ್ನು ತಿರುಚುವುದು ಎಂದಾಗಿದೆ.
There’s a new word in the English Dictionary. Attached is a snapshot of the entry 🙂 pic.twitter.com/xdBdEUL48r
— Rahul Gandhi (@RahulGandhi) May 15, 2019
ಅವರ ಈ ಟ್ವಿಟ್ ಅನ್ನು ಮೋದಿ ದ್ವೇಷಿಗಳು ಮೋದಿಯನ್ನು ಟಾರ್ಗೆಟ್ ಮಾಡಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ಆದರೀಗ ರಾಹುಲ್ ಅವರ ಮೋದಿ ಲೈ ಶಬ್ದ ಫೇಕ್ ಎಂಬುದಾಗಿ ತಿಳಿದುಬಂದಿದೆ.
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ನ ಅಧಿಕೃತ ಖಾತೆ ಆಕ್ಸ್ಫರ್ಡ್ ಡಿಕ್ಷನರಿಯು ‘ಸ್ಕ್ರೀನ್ ಶಾಟ್ನಲ್ಲಿನಲ್ಲಿ ತೋರಿಸುತ್ತಿರುವ ಮೋದಿಲೈ ಎಂಬ ಶಬ್ದದ ಎಂಟ್ರಿ ನಮ್ಮ ಡಿಕ್ಷನರಿಯಲ್ಲಿ ಆಗಿಲ್ಲ, ಈ ಸ್ಕ್ರೀನ್ ಶಾಟ್ ನಕಲಿ ಎಂಬುದನ್ನು ನಾವು ದೃಢಪಡಿಸುತ್ತವೆ’ ಎಂದು ಟ್ವೀಟ್ ಮಾಡಿದೆ.
We can confirm that the image showing the entry ‘Modilie’ is fake and does not exist in any of our Oxford Dictionaries.
— Oxford Dictionaries (@OxfordWords) May 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.