ನವದೆಹಲಿ: 2019ರ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇಂದು ಒಂದರ ಹಿಂದೆ ಒಂದರಂತೆ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿವೆ. ಇದೇ ಭಾನುವಾರ (ಮೇ 19) ದೇಶದ 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಕ್ಷೇತ್ರಗಳು ಚುನಾವಣೆಯನ್ನು ಎದುರಿಸಲಿವೆ.
ಬಿಜೆಪಿ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದ ಪಲಿಗಂಜ್ನಲ್ಲಿ, ಝಾರ್ಖಾಂಡಿನ ದಿಯೋಘರ್ನಲ್ಲಿ, ಪಶ್ಚಿಮಬಂಗಾಳದ ಹಸ್ನಾಬಾದ್ ಮತ್ತು ಡೈಮಂಡ್ ಹಾರ್ಬರ್ನಲ್ಲಿನ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮಧ್ಯಪ್ರದೇಶದ ಧಾರ್ ಮತ್ತು ಅಲಿರಾಜಪುರ್ನಲ್ಲಿ ಸಮಾವೇಶ ಆಯೋಜನೆಗೊಳಿಸಲಿದ್ದಾರೆ. ಉತ್ತರಪ್ರದೇಶದ ವಿವಿಧೆಡೆ ಸುಷ್ಮಾ ಸ್ವರಾಜ್, ಯೋಗಿ ಆದಿತ್ಯನಾಥ, ಮನೋಜ್ ತಿವಾರಿ ಸಮಾವೇಶಗಳನ್ನು ಆಯೋಜನೆಗೊಳಿಸಲಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧೀ ಅವರು, ಪಂಜಾಬಿನ ಫರೀದಕೋಟ್ ಮತ್ತು ಲುಧಿಯಾನದಲ್ಲಿ ಸಮಾವೇಶ ನಡೆಸಲಿದ್ದಾರೆ. ಅವರ ಸಹೋದರಿ ಪ್ರಿಯಾಂಕ ವಾದ್ರಾ ಅವರು, ವಾರಣಾಸಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಸಮಾಜವಾದಿ, ಬಿಎಸ್ಪಿ, ಆರ್ಎಲ್ಡಿ ಮೈತ್ರಿಕೂಟಗಳು ಉತ್ತರಪ್ರದೇಶದ ಮೂವ ಮತ್ತು ದಿಯೋರಿಯಾದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಿವೆ.
ಕೊನೆಯ ಹಂತದಲ್ಲಿ, ಉತ್ತರಪ್ರದೇಶದ 12 ಕ್ಷೇತ್ರ, ಪಶ್ಚಿಮಬಂಗಾಳದ 9 ಕ್ಷೇತ್ರ, ಬಿಹಾರದ 8 ಕ್ಷೇತ್ರ, ಮಧ್ಯಪ್ರದೇಶದ 8 ಕ್ಷೇತ್ರ, ಹಿಮಾಚಲಪ್ರದೇಶದ 4 ಕ್ಷೇತ್ರ, ಝಾರ್ಖಾಂಡಿನ 3 ಕ್ಷೇತ್ರ, ಚಂಡೀಗಢದ 1 ಕ್ಷೇತ್ರ ಚುನಾವಣೆಯನ್ನು ಎದುರಿಸಲಿವೆ.
ಮೇ 23 ರಂದು ಎಲ್ಲಾ ಹಂತದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.