ನವದೆಹಲಿ: ಪಶ್ಚಿಮಬಂಗಾಳದಲ್ಲಿ ಚುನಾವಣೆಯ ಸಂದರ್ಭಗಳಲ್ಲಿ ಹಿಂಸಾಚಾರಗಳು ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಅಲ್ಲಿ ಸುಮಾರು 71,000 ಭದ್ರತಾ ಪಡೆಗಳನ್ನು ಮೇ 12ರ ಚುನಾವಣೆಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದು ಗೃಹಸಚಿವಾಲಯ ಮಾಹಿತಿಯನ್ನು ನೀಡಿದೆ.
ಭಾನುವಾರ ಪಶ್ಚಿಮಬಂಗಾಳದ ತಂಮ್ಲುಕ್, ಕಾಂತಿ, ಗತಲ್, ಜರ್ಗ್ರಾಮ್, ಮೆದಿನಿಪುರ್, ಪುರುಲಿಯಾ, ಬಂಕುರ, ಬಿಷ್ನಾಪುರ್ ಕ್ಷೇತ್ರಗಳಲ್ಲಿ ಇದೇ ಭಾನುವಾರ ಚುನಾವಣೆಗಳು ನಡೆಯಲಿವೆ.
ನಕ್ಸಲ್ ಪೀಡಿತ ಬಂಗಾಳ ಪ್ರದೇಶದ ಜಂಗಲ್ಮಹಲ್ನಲ್ಲಿ ಐಇಡಿಗಳು ಸ್ಪೋಟಗೊಳ್ಳುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಆ ಪ್ರದೇಶದಿಂದ ಯಾವುದೇ ವಾಹನಗಳು ಸಂಚರಿಸದಂತೆ ಭದ್ರತಾ ಪಡೆಗಳಿಗೆ ಸೂಚನೆಯನ್ನು ನೀಡಲಾಗಿದೆ.
ಮೇ 12ರ ಚುನಾವಣೆಗಾಗಿ ಪಶ್ಚಿಮಬಂಗಾಳದಲ್ಲಿ 713 ಕಂಪನಿಗಳನ್ನು ಅಥವಾ 71,300 ಭದ್ರತಾ ಪುರುಷ ಮತ್ತು ಮಹಿಳೆಯರನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಳಿಸಲಾಗುತ್ತದೆ.
ಮತಗಟ್ಟೆಗಳಲ್ಲಿ ಹಿಂಸಾಚಾರಗಳು ಭುಗಿಲೇಳುವ ಸಾಧ್ಯತೆಗಳು ಇರುವ ಹಿನ್ನಲೆಯಲ್ಲಿ ಮತ್ತು ನಕ್ಸಲರಿಂದ ಬೆದರಿಕೆಗಳು ಬರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಭದ್ರತಾಪಡೆಗಳನ್ನು ನಿಯೋಜನೆಗೊಳಿಸಲಾಗುತ್ತಿದೆ.
ಭಾನುವಾರ ದೇಶದಲ್ಲಿ 6ನೇ ಹಂತದ ಲೋಕಸಭಾ ಚುನಾವಣೆ ಜರುಗುತ್ತಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ಜರುಗುತ್ತಿದ್ದು, ಮೇ 23 ಕ್ಕೆ ಫಲಿತಾಂಶ ಹೊರಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.