ಕೆಳಗಿನ ಈ ಚಿತ್ರವನ್ನು ನೋಡಿ
ದೇಶದ ನೀಲಿ ಭಾಗವು ಬಿಜೆಪಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ, ಕೆಂಪು ಭಾಗವು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದೆ.
ಒಂದೇ ಒಂದು ಚಿತ್ರದಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಪುನಃಶ್ಚೇತನವನ್ನು ನಾವು ಕಾಣಲು ಸಾಧ್ಯವಾದರೆ ಅದು ಇಲ್ಲಿ ಮಾತ್ರ.
ಹಾಗಾದರೆ, ಈ ಲೇಖನದ ಶೀರ್ಷಿಕೆಯೊಂದಿಗೆ ಈ ಮೇಲಿನ ಇಮೇಜ್ ಹೇಗೆ ಹೊಂದಿಕೊಳ್ಳುತ್ತದೆ? ಹೊಂದಿಕೊಳ್ಳುತ್ತದೆ ಯಾಕೆಂದರೆ, ಇದು 2018 ರ ಸೆ.1 ರಿಂದ 2018 ರ ಡಿ.1 ರ ವರೆಗೆ ಗೂಗಲ್ ಟ್ರೆಂಡಿನ ಸ್ನ್ಯಾಪ್ಶಾಟ್ ಆಗಿದೆ. ಈ ಮೂರು ತಿಂಗಳಲ್ಲಿ ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ದೊಡ್ಡ ವಿಧಾನಸಭಾ ಚುನಾವಣೆಗಳು ಜರುಗಿದ್ದವು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತಿಸ್ಘಡ ರಾಜ್ಯಗಳು ಈ ಭೂಪಟದಲ್ಲಿ ಕೆಂಪಾಗಿ ರಾರಾಜಿಸುತ್ತಿದೆ. ಕೆಳಗೆ ಉಳಿದ ಸ್ನ್ಯಾಪ್ ಶಾಟ್ಗಳನ್ನು ನೀಡಲಾಗಿದೆ.
ಹೌದು, ಜನರು ಹಿಂದಿ ಹೃದಯಭಾಗದ ರಾಜ್ಯಗಳ ಫಲಿತಾಂಶದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ ಮತ್ತು ಊಹೆಗಳನ್ನು ಮಾಡುತ್ತಿದ್ದಾರೆ ಎಂಬುದು ಗೂಗಲ್ಗೆ ತಿಳಿದಿದೆ. ತನ್ನ ಬುದ್ಧಿವಂತಿಕೆಯಿಂದಾಗಿ ಗೂಗಲಿಗೆ ಏನಾಗುತ್ತದೆ ಎಂಬುದು ತಿಳಿದಿತ್ತು. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು.
ದೇಶದ ಪ್ರತಿ ವ್ಯಕ್ತಿ ಏನನ್ನೂ ಯೋಚಿಸುತ್ತಿದ್ದಾನೆ ಎಂದು ತಿಳಿದರೆ, ನಿಮಗೆ ಚುನಾವಣೆಯನ್ನು ಯಾರು ಗೆಲ್ಲುತ್ತಾರೆ ಎಂಬುದೂ ತಿಳಿಯುತ್ತದೆ. ಮತ್ತು ಇಂದು, ಪ್ರತಿ ವ್ಯಕ್ತಿಯೂ ಸ್ಮಾರ್ಟ್ ಫೋನ್ ಹೊಂದಿದ್ದಾನೆ ಮತ್ತು ಇಂಟರ್ನೆಟ್ ಪಡೆದುಕೊಂಡಿದ್ದಾನೆ, ಹೀಗಾಗಿ ಗೂಗಲ್ಗೆ ಆತ ಯಾವುದರ ಬಗ್ಗೆ ಆಸಕ್ತಿ ಹೊಂದಿದ್ದಾನೆ ಎಂಬುದೂ ತಿಳಿಯುತ್ತದೆ.
ಕಳೆದ ಮೂರು ತಿಂಗಳುಗಳ ಬಗ್ಗೆ (ಬಿಜೆಪಿ ವರ್ಸಸ್ ಕಾಂಗ್ರೆಸ್) ಗೂಗಲ್ ಏನು ಹೇಳುತ್ತದೆ ನೋಡೋಣ.
ಎಂತಹ ಬದಲಾವಣೆ! ಕೆಲವು ಕಡೆ ದೊಡ್ಡದಾಗಿ ರಾರಾಜಿಸುತ್ತಿದ್ದ ಕೆಂಪನ್ನು ನೀಲಿ ಸಂಪೂರ್ಣ ಆವರಿಸಿಕೊಂಡಿದೆ. ಇಡೀ ಭಾರತ ನೀಲಿಯಾಗಿ ಕಂಗೊಳಿಸುತ್ತಿದೆ. ಭೂಪಟದ ಒಂದು ಮೂಲೆಯಲ್ಲಷ್ಟೇ ಕೆಂಪು ಸಣ್ಣದಾಗಿ ಗೋಚರಿಸುತ್ತಿದೆ. ಅದು ಈಶಾನ್ಯ ರಾಜ್ಯ.
ಗೂಗಲಿನ ಬುದ್ಧಿಮತ್ತೆ ಸ್ಪಷ್ಟವಾಗಿದೆ. ಬಿಜೆಪಿ ಜಯಿಸುವುದು ಖಚಿತವಾಗಿದೆ.
ಬಾಲಾಕೋಟ್ ಮೇಲೆ ವೈಮಾನಿಕ ದಾಳಿಯಾದ ಬಳಿಕ ಬಿಜೆಪಿಯ ಜನಪ್ರಿಯತೆ ಹೆಚ್ಚಾಗಿದೆ. ಫಲಿತಾಂಶ ಬರುವವರೆಗೆ ಅದು ಮುಂದುವರೆಯಬಹುದೇ?
ಕಳೆದ ಒಂದು ತಿಂಗಳ ದತ್ತಾಂಶ ಇಲ್ಲಿದೆ.
ಕಳೆದ 7 ದಿನಗಳ ದತ್ತಾಂಶ ಇಲ್ಲಿದೆ.
ಬಿಜೆಪಿ ಹೆಚ್ಚಿನ ಅಸ್ತಿತ್ವವನ್ನು ಹೊಂದಿರದ ಆಂಧ್ರಪ್ರದೇಶವನ್ನು ಹೊರತುಪಡಿಸಿ, ಬೇರೆ ಯಾವುದೇ ರಾಜ್ಯಗಳಲ್ಲಿ ಬದಲಾವಣೆಗಳಾಗಿಲ್ಲ. ಆಶ್ಚರ್ಯವೆಂದರೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಬಿಜೆಪಿಗೆ ಪ್ರಯೋಜನವಿದೆ ಎಂಬುದನ್ನು ತೋರಿಸುತ್ತದೆ. ಎರಡು “ಗ್ರೀನ್ಫೀಲ್ಡ್” ರಾಜ್ಯಗಳನ್ನು ವಶಪಡಿಸಿಕೊಳ್ಳಲು ಬಿಜೆಪಿ ಆಶಿಸುತ್ತಿದೆ.
ಪಶ್ಚಿಮ ಬಂಗಾಳವು ಬಿಜೆಪಿಯನ್ನು ಹೇಗೆ ಗ್ರಹಿಸಬಹುದೆಂಬುದು ಪ್ರಧಾನಿಯವರ ಪ್ರಚಾರ ಸಮಾವೇಶದಿಂದ ನಮಗೆ ಸ್ಪಷ್ಟವಾಗಿದೆ. ಮೋದಿ ಸಮಾವೇಶಗಳನ್ನು ಮಾಡಲು ಸಣ್ಣ ಸ್ಥಳಗಳಿಗೆ ಹೋಗುತ್ತಿದ್ದಾರೆ ಎಂದರೆ, ಅದರರ್ಥ ಅವರು ಬಂಗಾಳದಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಬಯಸುತ್ತಾರೆ. ಕೆಲ ದಿನಗಳ ಹಿಂದೆ ಬೃಹತ್ ಸಮಾವೇಶಕ್ಕಾಗಿ ಮೋದಿಯವರು ಪಶ್ಚಿಮ ಬಂಗಾಳದ ಬುನಿಯಾದ್ಪುರಕ್ಕೆ ತೆರಳಿದ್ದರು, ನಿಜವಾಗಿಯೂ ಬಹುತೇಕರು ಆ ಊರಿನ ಹೆಸರನ್ನೇ ಕೇಳಿರಲಿಕ್ಕಿಲ್ಲ. ಮೋದಿಯವರು ಖ್ಯಾತವಲ್ಲದ ಈ ಸ್ಥಳಗಳಿಗೆ ಹೋಗುತ್ತಿದ್ದಾರೆ ಎಂದರೆ ವಿಜಯದ ಊಹೆ ಮಾಡಿದ್ದಾರೆ ಎಂದರ್ಥ.
ಎಡಪಂಥೀಯರು ಪದೇ ಪದೇ ಬಿಜೆಪಿಯು ನಗರದ ಮೇಲ್ವರ್ಗದ ಶ್ರೀಮಂತರ ಪಕ್ಷ ಎಂದು ಹೇಳುತ್ತಲೇ ಇರುತ್ತಾರೆ. ಅದಕ್ಕಾಗಿಯೇ ಇಂಟರ್ನೆಟ್ಗಳಲ್ಲಿ ಬಿಜೆಪಿಯೇ ಹೆಚ್ಚಾಗಿ ರಾರಾಜಿಸುತ್ತದೆ ಎನ್ನುತ್ತಾರೆ. ಆದರೆ ಈ ಸಂಗತಿ ಔಟ್ ಡೇಟೆಡ್ ಎಂಬುದು ಅವರಿಗಿನ್ನೂ ತಿಳಿದಿಲ್ಲ. ಬಿಜೆಪಿಗೆ ಇಂಟರ್ನೆಟ್ನಿಂದಾಗುವ ಲಾಭದ ದಿನಗಳು ಕಳೆದು ಹೋಗಿದೆ. ಎಲ್ಲಾ ಪಕ್ಷಗಳೂ ಈಗ ಇಂಟರ್ನೆಟ್ ಬಳಸುತ್ತಿವೆ. ದೇಶದ ಬಹುತೇಕ ಜನರು ಇಂಟರ್ನೆಟ್ಗೆ ಸಂಪರ್ಕಿತಗೊಂಡಿದ್ದಾರೆ.
ಮೇಲಿನ ಗೂಗಲ್ ಟ್ರೆಂಡ್ ಮ್ಯಾಪ್ ಪ್ರಕಾರ, ಬಿಜೆಪಿಯ ಬಗ್ಗೆ ಹೆಚ್ಚಿನವರು ಯೋಚನೆ ಮಾಡುತ್ತಿದ್ದಾರೆ, ಮಾತನಾಡುತ್ತಿದ್ದಾರೆ ಮತ್ತು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಸಾಕಷ್ಟು ಮುಂದೆ ಇದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಇನ್ನು ವ್ಯಕ್ತಿಗಳ ವಿಷಯಕ್ಕೆ ಬಂದರೆ, ನರೇಂದ್ರ ಮೋದಿಯವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ ಸಾಕಷ್ಟು ಮುಂದೆ ಇದ್ದಾರೆ ಎಂಬುದು ಸ್ಪಷ್ಟವಾಗಿದೆ.
ಜನಪ್ರಿಯತೆಯಲ್ಲಿ, ಅದರಲ್ಲೂ ಉತ್ತರಪ್ರದೇಶದಂತಹ ಪ್ರಮುಖ ರಾಜ್ಯಗಳಲ್ಲಿ ಶೇ.92 ರಿಂದ 98 ರಷ್ಟು ಮುಂದಿದ್ದಾರೆ. ಗೂಗಲ್ ಪ್ರಕಾರ, ಮೋದಿ ಮೇಲಿನ ಜನರ ಆಸಕ್ತಿ ರಾಹುಲ್ ಅವರ ಆಸಕ್ತಿಗಿಂತ 12 ಪಟ್ಟು ಹೆಚ್ಚಾಗಿದೆ.
ತಮಿಳುನಾಡು, ಕೇರಳ, ನಾಗಾಲ್ಯಾಂಡ್ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲೂ ಮೋದಿ ಜನಪ್ರಿಯತೆ ಶೇ. 80 ಕ್ಕಿಂತ ಕಡಿಮೆ ಇಲ್ಲ. ಮಹಾರಾಷ್ಟ್ರದಲ್ಲಿ ಶೇ. 83ರಷ್ಟು, ಬಿಹಾರದಲ್ಲಿ ಶೇ.91 ರಷ್ಟು, ಬಾಂಗ್ಲಾದಲ್ಲಿ ಶೇ.88ರಷ್ಟು, ಒರಿಸ್ಸಾದಲ್ಲಿ ಶೇ.86ರಷ್ಟು, ರಾಜಸ್ಥಾನದಲ್ಲಿ ಶೇ.88ರಷ್ಟು, ಮಧ್ಯಪ್ರದೇಶದಲ್ಲಿ ಶೇ.85ರಷ್ಟು ಜನಪ್ರಿಯತೆಯನ್ನು ಮೋದಿ ಹೊಂದಿದ್ದಾರೆ. ನಿಜಕ್ಕೂ ಇದು ದೊಡ್ಡ ಮಟ್ಟದ ಜನಪ್ರಿಯತೆಯೇ ಆಗಿದೆ.
ಲುಟಿಯಾನ್ ಲಿಬರಲ್ಗಳು ಮೇಕ್ ಓವರ್ ಮಾಡಲು ನಡೆಸಿದ ಹಲವಾರು ಪ್ರಯತ್ನಗಳ ಬಳಿಕವೂ ರಾಹುಲ್ ಗಾಂಧೀ ಮೇಲೆ ಜನರು ಆಸಕ್ತಿಯನ್ನು ವಹಿಸುತ್ತಿಲ್ಲ.
ಗೂಗಲ್ ಟ್ರೆಂಡ್ ಅನ್ನು ಗಮನಿಸಿದರೆ ಚುನಾವಣಾ ಫಲಿತಾಂಶ ಸ್ಪಷ್ಟವಾಗಿದೆ. ಮೋದಿಯೇ ವಿನ್ನರ್ !
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.