ಮಾಲ್ಡಾ: ತನ್ನ ಮಗುವಿನ ತಲೆಯ ಭಾಗದ ಮಾಂಸವನ್ನೇ ತಾಯಿಯೊಬ್ಬಳು ಭಕ್ಷಣೆ ಮಾಡಿದ ಅಮಾನುಷ ಘಟನೆ ಪಶ್ಚಿಮಬಂಗಾಳದ ಮಾಲ್ಡಾ ಜಿಲ್ಲೆಯ ಗೋಪಾಲ್ಪು ಹಳ್ಳಿಯಲ್ಲಿ ನಡೆದಿದೆ.
42 ವರ್ಷದ ಪ್ರಮೀಳ ಮಂಡಲ್ ಎಂಬ ಮಹಿಳೆ ತನ್ನ ನಾಲ್ಕು ವರ್ಷದ ಮಗಳ ತಲೆಯ ಒಂದು ಭಾಗದ ಮಾಂಸವನ್ನು ಕಚ್ಚಿ ತಿನ್ನುತ್ತಿದ್ದ ವೇಳೆ ಪತಿಯ ತಮ್ಮನ ಕೈಗೆ ಸಿಕ್ಕಿ ಬಿದ್ದಿದ್ದಾಳೆ, ತಕ್ಷಣವೇ ಆತ ಮಗುವನ್ನು ರಕ್ಷಣೆ ಮಾಡಿ ಇತರರಿಗೆ ಮಾಹಿತಿ ತಿಳಿಸಿದ್ದಾರೆ.
ಸುದ್ದಿ ತಿಳಿದು ಜಮಾಯಿಸಿದ ಗ್ರಾಮಸ್ಥರು ಪ್ರಮೀಳಳನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಈ ವೇಳೆ ಆಕೆ ಮಗುವಿನ ಮಾಂಸ ತಿಂದಿದ್ದು ನಿಜ ಎಂದು ಒಪ್ಪಿಕೊಂಡಿದ್ದಾಳೆ, ಆದರೆ ಯಾಕೆ ಹಾಗೆ ಮಾಡಿದೆ ಎಂಬುದಕ್ಕೆ ಆಕೆಯ ಬಳಿಯೂ ಉತ್ತರವಿಲ್ಲ.
ಐದು ಮಕ್ಕಳ ತಾಯಿಯಾಗಿರುವ ಪ್ರಮೀಳ ಮಾದಕ ವ್ಯಸನಿಯಾಗಿದ್ದು, ಸಿಕ್ಕಾಬಟ್ಟೆ ಕುಡಿಯುತ್ತಲೂ ಇದ್ದಳು ಎನ್ನಲಾಗಿದೆ. 5ತಿಂಗಳ ಹಿಂದೆ ಮತ್ತೊಬ್ಬಳ ಮಗಳನ್ನು ಬೆಂಕಿಗೆ ಹಾಕಲು ಪ್ರಯತ್ನಿಸಿದ್ದಳು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆಯಿಂದ ಆಕೆ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.