ಈ ದೇಶದ ಮಾಜಿಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಘೋಷಣೆಯಾದ “ಜೈ ಜವಾನ್ ಜೈ ಕಿಸಾನ್”ನ ಜೊತೆಗೆ ನಮ್ಮ ದೇಶದ ವಿಜ್ಞಾನಿಗಳಿಗೂ ಗೌರವ ಸೂಚಕವಾಗಿ “ಜೈ ವಿಜ್ಞಾನ್”ವನ್ನು ಸೇರಿಸಿದ್ದರು!
ಆದರೆ ನಮ್ಮ ದೇಶದಲ್ಲಿ ವರ್ಷವಿಡೀ ಮಾಧ್ಯಮಗಳು ರೈತನ ಸಾವಿನ ಬಗ್ಗೆ ಪ್ರಸಾರ ಮಾಡುತ್ತನೇ ಇರುತ್ತಾರೆ! ಅದರ ನಂತರ ನಮ್ಮ ವೀರ ಸೈನಿಕರು ಹುತಾತ್ಮರಾದಲ್ಲಿ ಸುದ್ದಿ ಪ್ರಸಾರ ಮಾಡುತ್ತದೆ! ಆದರೆ ಮಾಧ್ಯಮವಾಗಲಿ, ಜನರಾಗಲಿ, ರಾಜಕಾರಣಿಗಳಾಗಲಿ ನಮ್ಮ ದೇಶದ ವಿಜ್ಞಾನಿಗಳ ಸಾವಾದರೆ ಸುದ್ದಿಯೇ ಆಗುವುದಿಲ್ಲ!! ಅವರ ಸಾವಿಗೆ ಶೋಕ ವ್ಯಕ್ತಪಡಿಸುವವರಿಲ್ಲ!!
ಯಾಕೆ ಈ ಮಾತು ಹೇಳುತ್ತಿದ್ದೇನೆಂದರೆ, ನಮ್ಮ ದೇಶವು ನ್ಯೂಕ್ಲಿಯರ್ ಪವರ್ ರಾಷ್ಟ್ರವಾಗಬೇಕೆಂಬ ಕನಸನ್ನು ಕಂಡ ಹೋಮಿ ಜಹಂಗೀರ್ ಬಾಬಾರವರ ಸಾವು (1966) ವಿಕ್ರಮ್ ಸಾರಾಭಾಯಿರವರ ಸಾವು (1971) ರಿಂದ ಹಿಡಿದು ನಮ್ಮ ದೇಶದ nuclear, atomic research ನಲ್ಲಿ ಕೆಲಸ ಮಾಡಿದ ಸುಮಾರು 600 ಕ್ಕೂ ಹೆಚ್ಚು ವಿಜ್ಞಾನಿಗಳ ಸಾವು ಈವರೆಗೆ ಸಂಭವಿಸಿದ್ದು, ಅವುಗಳಲ್ಲಿ ಕೆಲವನ್ನು ಆತ್ಮಹತ್ಯೆ ಎಂದು ಕೇಸ್ ಬಂದ್ ಮಾಡಿದ್ದರೂ ಅವರ ಮನೆಯವರು ಕೋರ್ಟ್ನಲ್ಲಿ ಚ್ಯಾಲೆಂಜ್ ಮಾಡುತ್ತಿದ್ದರೆ, ಹಲವು “unexplained” ಕೇಸ್ಗಳಾಗಿವೆ! ಮತ್ತೆ ಕೆಲವು ಅಪಘಾತದಲ್ಲಿ ಮೃತ್ಯು ಎಂಬ ಹಣೆಪಟ್ಟಿ ಪಡೆದು ಮುಕ್ತಾಯವಾಗಿವೆಯೆಂದರೆ ಯಾರಿಗೂ ನಂಬಿಕೆಬಾರದು ಸ್ನೇಹಿತರೇ.
ಅದರಲ್ಲೂ 2008-2013 ರ ನಡುವೆ ನಮ್ಮ ದೇಶದ ಹಲವು ಬಹುದೊಡ್ಡ project ಗಳಲ್ಲಿ research ಮಾಡುತ್ತಿದ್ದ ವಿಜ್ಞಾನಿಗಳು ಅಚಾನಕವಾಗಿ ಹಲವು ರೀತಿಯಲ್ಲಿ ಸಾವನ್ನಪ್ಪಿದ್ದರೂ, ನಮ್ಮ ದೇಶದ ಮಾಧ್ಯಮಗಳು ಜನರ ಮುಂದೆ ತರದೇ ಇದ್ದುದರಿಂದ ವಿಜ್ಞಾನಿಗಳ ಸಾವು ಯಾರಿಗೂ ತಿಳಿಯದೇ ಸಾಗುತ್ತನೇ ಇದೆ..!! ಅವರ ಸಾವಿಗೆ ಒಂದು ಶ್ರದ್ಧಾಂಜಲಿ ಕೂಡ ಲಭಿಸುತ್ತಿಲ್ಲವೆಂಬುದು ನಿಜಕ್ಕೂ ಬೇಸರದ ವಿಚಾರ!!
ನಮ್ಮ ದೇಶದಲ್ಲಿ ದಲಿತ ಸತ್ತ, ಮುಸ್ಲಿಂ ಸತ್ತ, ಹಿಂದೂ ಸತ್ತ ಎಂದು ದೇಶದಾದ್ಯಂತ ಹೋರಾಟ ಆಂದೋಲನ ನಡೆಯುತ್ತದೆ!!! ಆದರೆ ಕಳೆದ 2008-2013 ರೊಳಗೆ ನಮ್ಮ ದೇಶದ ಹೈ ರಾಂಕಿಂಗ್ ಇರುವ ದೇಶದ ಅಭಿವೃದ್ಧಿಗೆ ಸಂಬಂಧಪಟ್ಟ ಮುಖ್ಯ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 18-20 ಮಂದಿ ಜೀವನ ಅಂತ್ಯಗೊಳಿಸಿದ್ದಾರೆ!! ಅದರಲ್ಲೂ ಕೆಲವರ ಹೆಣಗಳು ಅಲ್ಲಿ ಇಲ್ಲಿ ಸಿಕ್ಕಿದ್ದರೆ ಕೆಲವರದ್ದು ಅವರವರ ಮನೆಯಲ್ಲಿ ಸಿಕ್ಕಿರುತ್ತದೆ ! ಮತ್ತೆ ಕೆಲವರನ್ನು ಆತ್ಮಹತ್ಯೆ ಎಂದು ಕೇಸ್ ಬಂದ್ ಮಾಡಲಾಗಿದ್ದರೆ, ಮತ್ತೆ ಕೆಲವರು ಅಪಘಾತದಲ್ಲಿ ಸತ್ತಿದ್ದಾರೆಂದು ಹಲವು ಅನುಮಾನಗಳ ನಡುವೆಯೂ ಪೋಲಿಸರ ತನಿಖೆ ಹೇಳಿದೆ!!
2008-2013 ರ ನಡುವೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ವಿಜ್ಞಾನಿಗಳಲ್ಲಿ ಕೆಲವರ ಹೆಸರು ಈ ರೀತಿಯಾಗಿದೆ
ಜಸ್ವಂತ್ ರಾವ್ (2008) ಲೋಕನಾಥ್ ಮಹಾಲಿಂಗಮ್ (2009), ರವಿಕುಮಾರ್ ಮುಲೆ (2009), ಉಮಂಗ್ ಸಿಂಗ್ (2009), ಪಾರ್ಥಾ ಪ್ರತೀಮ್ ಬಾಗ್ (2009), ದಾಲಿಯಾ ನಾಯಕ್ (2009) ತಿರುಮಲ ಪ್ರಸಾದ್ ಟೆಂಕಾ (2009), M ಪದ್ಮನಾಭ ಅಯ್ಯರ್ (2010), ಟೀಟುಸ್ ಪಾಲ್ (2010), ಆಶುತೋಷ್ ಶರ್ಮ (2010), ಸೌಮಿಕ್ ಚೌದರಿ (2010), ಅಕ್ಷಯ್ ಪಿ. ಚೌವಾನ್ (2010) , ಸುಭಾಷ್ ಸೋನವಾನೆ (2010), ಉಮಾರಾವ್ (2011), ಮೊಹಮ್ಮದ್ ಮುಸ್ತಫಾ (2012), G K ಕುಮಾರವೇಲು (2012) K. K. ಜೋಶ್ (2013) ಅಭೀಷ್ ಶಿವಮ್ (2013)
ಇವರಲ್ಲಿ ಕೆಲವರ ಸಾವು “unexplained” ಆಗಿದೆ! ಮತ್ತೆ ಕೆಲವರದ್ದು ಪೋಲಿಸ್ ಆತ್ಮಹತ್ಯೆ ಎಂದಿದ್ದರೂ ಅವರವರ ಮನೆಯವರು ನ್ಯಾಯಾಂಗ ಹೋರಾಟ ನಡೆಸುತ್ತಿದ್ದಾರೆ!! ಮತ್ತೆ ಕೆಲವರು ರಿಸರ್ಚ್ ಲ್ಯಾಬ್ನಲ್ಲಿ ಬೆಂಕಿ, ವಾಹನ ಆಕ್ಸಿಡೆಂಟ್ನಂತಾ ಅವಘಡಕ್ಕೆ ಆಹುತಿಯಾಗಿದ್ದರೆ, ಮತ್ತೆ ಕೆಲವರನ್ನು ಕೊಂದು ರೈಲ್ವೆ ಟ್ರಾಕ್ನಲ್ಲಿ ಇಡಲಾಗಿದ್ದ ಪರಿಸ್ಥಿತಿಯಲ್ಲಿ ಸಿಕ್ಕಿವೆ !!
ಈ ಸುದ್ದಿಯನ್ನೆಲ್ಲಾ ಓದುತ್ತಿದ್ದರೆ ಇಷ್ಟೆಲ್ಲಾ ನಡೆದಿದೆಯೇ ಎಂದೆನಿಸದೇ ಇರದು!! ಕಾರಣ ವಿಜ್ಞಾನಿಗಳು ಸಾಯುತ್ತನೇ ಇದ್ದರೂ ಅವರ ಸಾವಿನಿಂದ ಯಾವುದೇ ರಾಜಕೀಯ ಲಾಭ ಪಡೆದುಕೊಳ್ಳಲಾಗದೇ ಇರುವುದರಿಂದ ನಮ್ಮ ದೇಶದ ರಾಜಕಾರಣಿಗಳಿಗಾಗಲಿ, ಮಾಧ್ಯಮಗಳಿಗಾಗಲಿ ಪ್ರಚಾರ ಕೊಡುವ ಅನಿವಾರ್ಯತೆ ಇಲ್ಲವೇ ಇಲ್ಲ!!
ಇನ್ನು ನಾವು ಭಾರತೀಯರ ಇತ್ತೀಚಿನ ಅಭಿಯಾನಗಳೆಲ್ಲಾ ಯಾರದೋ Propaganda ಭಾಗವಾಗಿರುತ್ತದೆಯೇ ಹೊರತು ನಿಜವಾದ ಅರ್ಥದಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟವಾಗಿರುವುದೇ ಇಲ್ಲವೆಂಬುದು ಕಟು ಸತ್ಯ ಸ್ನೇಹಿತರೇ.
ಇಷ್ಟೊಂದು ವಿಜ್ಞಾನಿಗಳ ಸಾವಿನ ಹಿಂದೆ ಯಾರಿದ್ದಾರೋ ಯಾಕಾಗಿ ಅವರ ಸಾವು ಸಂಭವಿಸುತ್ತಿದೆಯೋ ಕೊಲೆಯೋ, ಆತ್ಮಹತ್ಯೆಯೋ ಆ ದೇವರೇ ಬಲ್ಲ..!!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.