ಈ ಬಾರಿಯ ಲೋಕಸಭಾ ಚುನಾವಣೆ ಬದಲಾದ ವಾತಾವರಣದೊಂದಿಗೆ ನಡೆಯುತ್ತಿದೆ, ರಾಷ್ಟ್ರೀಯತಾವಾದಿ ಭಾವನೆಗಳು ಗರಿಗೆದರಿವೆ, ಈ ವಾತಾವರಣ 1971 ರ ಆರಂಭದಲ್ಲಿ 1971 ರ ಬಾಂಗ್ಲಾದೇಶ ಯುದ್ಧದ ನಂತರ ರಾಷ್ಟ್ರದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಯನ್ನು ನೆನಪಿಸಿದೆ.
ಪಶ್ಚಿಮ ಉತ್ತರ ಪ್ರದೇಶದ ಒಳನಾಡಿನ ರಸ್ತೆ ಮೂಲಕ ಪ್ರಯಾಣಿಸುವುದರಿಂದ ಮುಂಬರುವ ಚುನಾವಣೆಯ ದೃಷ್ಟಿ ಕಾಣುತ್ತದೆ. ಈ ಪ್ರದೇಶವು ಭಾರತೀಯ ಸೈನ್ಯ ಮತ್ತು ಅರೆಸೈನಿಕ ಪಡೆಗಳಿಗೆ ನೇಮಕಗೊಳ್ಳುವವರನ್ನು ಸೃಷ್ಟಿಸುವ ಶ್ರೇಷ್ಠ ಭೂಮಿಯಾಗಿದೆ. ಇಲ್ಲಿಂದ ಹಲವಾರು ಮಂದಿ ಸೇನೆಗೆ ಹೋಗಿ, ದೇಶ ಸೇವೆಯನ್ನು ಮಾಡುತ್ತಿದ್ದಾರೆ ಮತ್ತು ದೇಶಕ್ಕಾಗಿ ಇಲ್ಲಿನ ಹಲವಾರು ಮಂದಿ ಪ್ರಾಣತ್ಯಾಗವನ್ನೂ ಮಾಡಿದ್ದಾರೆ. ಯುದ್ಧ ಅಥವಾ ಯುದ್ಧ-ರೀತಿಯ ಪರಿಸ್ಥಿತಿಯು ಉದ್ಭವಿಸಿದಾಗ ಇಲ್ಲಿನ ಜನರು ಯಾವಾಗಲೂ ದೇಶಕ್ಕಾಗಿ ಸೇವೆ ಸಲ್ಲಿಸಲು ಅತ್ಯುತ್ಸಾಹವನ್ನು ಪ್ರದರ್ಶಿಸುತ್ತಾರೆ. ಮುಜಫರ್ನಗರ ಜಿಲ್ಲೆಯ ಸೊರಮ್ ಗ್ರಾಮದ ಜನರ ಗುಂಪಿನೊಡನೆ ಮಾತನಾಡಲು ನನಗೆ ಅವಕಾಶ ಸಿಕ್ಕಿತ್ತು. ಈ ಸಮಯದಲ್ಲಿ ಅವರು ಯಾರಿಗೆ ಮತ ಚಲಾಯಿಸುತ್ತೀರಿ ಎಂದು ಕೇಳಿದೆ, ಎಲ್ಲರೂ ಒಂದೇ ಧ್ವನಿಯಲ್ಲಿ ಮೋದಿಗೆ ಎಂದು ಉತ್ತರಿಸಿದರು. ಯಾಕೆ ಎಂದು ಕೇಳಿದೆ. ಅದಕ್ಕವರು, “ಅವರು ಬಲಿಷ್ಠ ವ್ಯಕ್ತಿಯಾಗಿದ್ದಾರೆ, ಭಾರತದ ಶತ್ರುಗಳನ್ನು ಹೇಗೆ ನಾಶಮಾಡಬೇಕು ಎಂಬುದು ಅವರಿಗೆ ತಿಳಿದಿದೆ. ಅವರು ಚೀನಾವನ್ನು ಕೂಡ ಅದು ಇರಬೇಕಾದ ಸ್ಥಳದಲ್ಲಿ ಇರಿಸಿದ್ದಾರೆ. ‘ಇದು ಚುನಾಣೆಯಲ್ಲ, ದೇಶದ ಪರವಾಗಿನ ಯುದ್ಧ’ ಎಂದು ಹಿರಿಯ ವ್ಯಕ್ತಿ ಸುರೇಶ್ ಚೌಧರಿ ಎಂಬುವವರು ಉತ್ತರಿಸಿದರು. ಎಲ್ಲರೂ ಇದಕ್ಕೆ ಸಹಮತ ವ್ಯಕ್ತಪಡಿಸಿ ತಲೆಯಾಡಿಸಿದರು. ಕೆಲವೇ ತಿಂಗಳುಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಅವರು ಯಾರ ಪರವಾಗಿ ಮತ ಚಲಾಯಿಸಿದರು ಎಂದು ಕೇಳಿದಾಗ, ಸಮಾಜವಾದಿ ಪಾರ್ಟಿ ಟಿಕೆಟ್ನಿಂದ ಸ್ಪರ್ಧಿಸಿದ ರಾಷ್ಟ್ರೀಯ ಲೋಕ ದಳ ಅಭ್ಯರ್ಥಿಯಾದ ತಬಾಸ್ಸಮ್ ಅವರಿಗೆ ಮತಚಲಾಯಿಸಿದ್ದಾಗಿ ಅವರು ಒಪ್ಪಿಕೊಂಡರು. ಪಾಕಿಸ್ಥಾನದ ಪ್ರದೇಶದೊಳಗೆ ನುಗ್ಗಿ ಭಯೋತ್ಪಾದಕರ ವಿರುದ್ಧ ವೈಮಾನಿಕ ದಾಳಿಯನ್ನು ನಡೆಸಿದ ಬಳಿಕ ಈ ಜನರು ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.
ಸೊರಾಮ್ 12,000 ಮತದಾರರ ಇರುವ ದೊಡ್ಡ ಗ್ರಾಮ ಮತ್ತು ಐತಿಹಾಸಿಕವಾಗಿ ಜಾಟ್ ಸಮುದಾಯದ ಪ್ರಮುಖ ಬುಡಕಟ್ಟು ಜನಾಂಗ ಬಾಲಿಯಾನ್ ಖಾಪ್ ಪ್ರಾಬಲ್ಯ ಇರುವ ಪ್ರದೇಶ, ಇಲ್ಲಿನ ಜನರು ಯಾರಿಗೆ ಮತ ಹಾಕಬೇಕು ಎಂಬುದನ್ನು ಈಗಾಗಲೇ ದೃಢಪಡಿಸಿಕೊಂಡಿದ್ದಾರೆ. ಮೋದಿಗೇ ಇವರು ಮತ ಹಾಕುವ ಉತ್ಸಾಹದಲ್ಲಿದ್ದಾರೆ. ಈ ಸಕ್ಕರೆಯ ನಾಡಿನಲ್ಲಿ ಮತದಾರರ ಮನಸ್ಸನ್ನು ಕಬ್ಬಿನ ವಿಷಯಗಳೇ ಪ್ರಭಾವಿಸಿರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಆ ರೀತಿ ಏನೂ ಇಲ್ಲ. ಭಾರತೀಯ ಕಿಶನ್ ಒಕ್ಕೂಟದ ಅಧ್ಯಕ್ಷರಾದ ನರೇಶ್ ಟಿಕಾಯೇಟ್ ಅವರು, ಕಬ್ಬಿನ ಸಮಸ್ಯೆಗಳನ್ನು ಚುನಾವಣಾ ವಿಷಯಗಳನ್ನಾಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ವಾಸ್ತವವಾಗಿ, ಮಾರ್ಚ್ 23ರ ವರೆಗೆ ರಾಜ್ಯದ 121 ಸಕ್ಕರೆ ಗಿರಣಿಗಳಲ್ಲಿ ಕಬ್ಬಿನ ಬಾಕಿ ಮೊತ್ತ 10,000 ಕೋಟಿ ರೂ. ದಾಟಿದೆ. ಅದರಲ್ಲಿ ಅರ್ಧದಷ್ಟು ಪಶ್ಚಿಮ ಯುಪಿಯ ಸುಮಾರು ಅರ್ಧ ಡಜನ್ ಮಿಲ್ಗಳು ಸೇರಿವೆ. ಕಬ್ಬಿನ ಮರುಪಾವತಿಯ ವಿಷಯದಲ್ಲಿ ಯೋಗಿ ಸರ್ಕಾರದ ದಾಖಲೆಯು ದುರ್ಬಲವಾಗಿಲ್ಲ. ವಾಸ್ತವವಾಗಿ, ಹಿಂದಿನ ಅಖಿಲೇಶ್ ಸರಕಾರಕ್ಕಿಂತಲೂ ಇದು ಉತ್ತಮವಾಗಿದೆ, ಯೋಗಿ ಅಧಿಕಾರಕ್ಕೆ ಬಂದಾಗ ಐದು ವರ್ಷಗಳ ಬಾಕಿಯನ್ನು ಪಾವತಿಸಲಾಗಿರಲಿಲ್ಲ. ದೀರ್ಘಾವಧಿಯ ಈ ಎಲ್ಲಾ ಬಾಕಿ ಮೊತ್ತವನ್ನು ಬಿಜೆಪಿ ಸರಕಾರ ಮರುಪಾವತಿ ಮಾಡಿದೆ ಮತ್ತು ಈಗ 2017-18ರ ಋತುವಿನ 260 ಕೋಟಿ ಮತ್ತು ಪ್ರಸಕ್ತ ಕೆಟ್ಟ ಋತುವಿನ ಸುಮಾರು 9800 ಕೋಟಿ ರೂ. ಬಾಕಿ ಉಳಿದುಕೊಂಡಿದೆ. ಯೋಗಿ ಕಾರ್ಯಕ್ಕೆ ರೈತರು ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಎರಡು ಸ್ಪಷ್ಟ ಕಾರಣಗಳಿಗಾಗಿ ಉತ್ತರ ಪ್ರದೇಶ ಬಿಜೆಪಿಗೆ ಪ್ರತಿಷ್ಠಿತ ರಾಜ್ಯವಾಗಿದೆ. ಪ್ರಧಾನ ಮಂತ್ರಿ ಮತ್ತು ಕೇಂದ್ರ ಗೃಹಮಂತ್ರಿಗಳು ಇಲ್ಲಿನ ವಾರಣಾಸಿ ಮತ್ತು ಲಕ್ನೋದಿಂದ ಸ್ಪರ್ಧಿಸುತ್ತಿದ್ದಾರೆ. 2014 ರ ಚುನಾವಣೆಯಲ್ಲಿ ಬಿಜೆಪಿ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು ಮತ್ತು ಅದರ ಮೈತ್ರಿ ಅಪ್ನಾ ದಳ್ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದ್ದರಿಂದ ಆ ಗೆಲುವನ್ನು ಪುನರಾವರ್ತಿಸುವ ಅಥವಾ ಸಾಧ್ಯವಾದರೆ, ಗೆಲುವಿನ ಸಂಖ್ಯೆಯನ್ನು ಇನ್ನೂ ಸುಧಾರಿಸುವ ಸವಾಲು ಬಿಜೆಪಿಯ ಮುಂದಿದೆ. ಆದರೆ, ಕೇಂದ್ರ ಮತ್ತು ರಾಜ್ಯಗಳ ಎರಡೂ ಸರ್ಕಾರಗಳು ಉತ್ತಮ ಅಭಿವೃದ್ಧಿ ಕಾರ್ಯವನ್ನು ಮಾಡಿರುವುದು ಮತ್ತು ಪಾಕಿಸ್ಥಾನದ ಭಯೋತ್ಪಾದನೆಯ ಮೇಲೆ ಆಕ್ರಮಣವನ್ನು ಮಾಡಿದ್ದು ಕೂಡ ಅಸಾಧ್ಯವನ್ನೂ ಸಾಧ್ಯವನ್ನಾಗಿಸಲಿದೆ.
ಈಗಾಗಲೇ, ವಿರೋಧ ಪಕ್ಷಗಳ ನಡುವೆ ಆತಂಕದ ಛಾಯೆಗಳು ಮೂಡಿವೆ, ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಕೇರಳ ಕ್ಷೇತ್ರಕ್ಕೆ ಓಡಿಹೋಗಿದ್ದಾರೆ. ಸ್ಮೃತಿ ಇರಾನಿಯವರಿಗೆ ಸಿಗುತ್ತಿರುವ ಸಕಾರಾತ್ಮಕ ಬೆಂಬಲದಿಂದಾಗಿ ರಾಹುಲ್ ಮತ್ತು ಅವರ ನಿರ್ವಾಹಕರು ಅಮೇಥಿಯಲ್ಲಿ ಬೆದರಿದ್ದಾರೆ. ಕಳೆದ ವರ್ಷ ಅತೀ ಕಡಿಮೆ ಅಂತರದಲ್ಲಿ ರಾಹುಲ್ ಅವರು ಸ್ಮೃತಿ ವಿರುದ್ಧ ಸೋತಿರುವುದರಿಂದ ಅವರಿಗೆ ಈ ಬಾರಿ ಬೆದರಿಕೆ ಹೆಚ್ಚಿದೆ ಎಂದು ಅಮೇಥಿ ನಿವಾಸಿಗಳು ಅಭಿಪ್ರಾಯಿಸುತ್ತಾರೆ. ಅಮೇಥಿ ಮತ್ತು ರಾಯ್ ಬರೇಲಿಯ 10 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪ್ರಸ್ತುತ ಹೊಂದಿರುವುದು ಎರಡು ಕ್ಷೇತ್ರಗಳನ್ನು ಮಾತ್ರ. 7 ಕ್ಷೇತ್ರ ಬಿಜೆಪಿ ಕೈಯಲ್ಲಿದೆ. ರಾಹುಲ್ ಈ ಬಾರಿ ಅಮೇಥಿಯಲ್ಲಿ ಸೋಲುವುದು ಬಹುತೇಕ ಖಚಿತ, ಸೋನಿಯಾ ಅವರು ರಾಯ್ ಬರೇಲಿಯಿಂದ ಮರು ಆಯ್ಕೆಯಾಗುವುದು ಕೂಡಾ ಕಷ್ಟವಿದೆ ಎಂಬುದು ಅಮೇಥಿ ನಿವಾಸಿಗಳ ಅಭಿಮತ.
ವೈಮಾನಿಕ ದಾಳಿ ನಿಜಕ್ಕೂ ಗೇಮ್ ಚೇಂಜರ್ ಆಗಲಿದೆ. ಆದರೆ ಉತ್ತರ ಪ್ರದೇಶದ 2.75 ಕೋಟಿ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಿದ ಉಜ್ವಲ ಯೋಜನೆ ಅಥವಾ 3 ಕೋಟಿ ಶೌಚಾಲಯ ನಿರ್ಮಿಸಿದ ಸ್ವಚ್ ಭಾರತ್ ಮಿಷನ್ ಅಥವಾ ತಲೆ ಮೇಲೊಂದು ಛಾವಣಿಯನ್ನು ಒದಗಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ವಿದ್ಯುಚ್ಛಕ್ತಿ ಇಲ್ಲದ ಪ್ರತಿ ಮನೆಗೂ ಉಚಿತ ವಿದ್ಯುತ್ ಸಂಪರ್ಕ ಒದಗಿಸಿದ ಬಿಜೆಪಿ ಸರ್ಕಾರದ ಕಾರ್ಯಗಳು ಬಿಜೆಪಿಯನ್ನು ಈ ಚುನಾವಣೆಯಲ್ಲಿ ಉತ್ತಮ ಸ್ಥಿತಿಯಲ್ಲಿರಿಸಿದೆ.
20 ಕೋಟಿ ಜನಸಂಖ್ಯೆ ಇರುವ ಯುಪಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ 4.5 ಕೋಟಿ, ಇವರನ್ನು ಬಿಎಸ್ಪಿ ಬೆಂಬಲಿಗರೆಂದು ಪರಿಗಣಿಸಲಾಗಿದೆ, ಆದರೆ ಈ ಪರಿಗಣನೆ ಒಂದು ದೊಡ್ಡ ಪ್ರಮಾದವಾಗಿದೆ ಎಂಬುದನ್ನು ಕಾಲ ತಿಳಿಸಿಕೊಟ್ಟಿದೆ. 1.5 ದಶಲಕ್ಷ ವಾಲ್ಮೀಕಿಗಳು, ಕೋರಿಸ್ಗಳು (2.5 ಮಿಲಿಯನ್) ಮತ್ತು ಪಾಸಿಸ್ಗಳು (ಸುಮಾರು 0.75 ಮಿಲಿಯನ್) ಮತ್ತು ಖತೀಕ್ಗಳು (0.5 ಮಿಲಿಯನ್) ತಮ್ಮನ್ನು ಬಿಜೆಪಿ ಅಥವಾ ಅದರ ಮೈತ್ರಿ ಪಕ್ಷದ ಬೆಂಬಲಿಗರು ಎಂದು ಹಿಂದಿನ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಕೇಂದ್ರ ಮತ್ತು ಯೋಗಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಇವರನ್ನು ಈ ಬಾರಿಯೂ ಬಿಜೆಪಿ ಬೆಂಬಲಿಸುವಂತೆ ಮಾಡಲಿದೆ. ರವಿದಾಸ್ ಅವರ ವಾರಣಾಸಿಯಲ್ಲಿರುವ ಜನ್ಮಸ್ಥಳದಲ್ಲಿ ಯೋಗಿಯವರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಮಾಘ ಪೂರ್ಣಿಮದ ಅವರ ಜನ್ಮದಿನೋತ್ಸವದಂದು ರಜೆಯನ್ನೂ ಘೋಷಿಸಲಾಗಿದೆ. ಇದರಿಂದ ರವಿದಾಸಿ ಸಮುದಾಯ ಬಿಜೆಪಿಯ ಕೈಹಿಡಿಯುವುದು ನಿಶ್ಚಿತ.
ರಾಜಕೀಯವಾಗಿ ಅತ್ಯಂತ ಮಹತ್ವದ ರಾಜ್ಯದಲ್ಲಿ ಚುನಾವಣೆಗೆ ಭರ್ಜರಿ ಜಯಸಿಗುವುದು ನಿಶ್ಚಿತ ಎಂಬುದನ್ನು ಸನ್ನಿವೇಶಗಳು ಹೇಳುತ್ತಿವೆ. ಆದರೆ 2014ರ ಅಭೂತಪೂರ್ವ ಜಯವನ್ನು ಅದು ಮೀರಬಹುದೇ ಅಥವಾ ಅಷ್ಟರಲ್ಲೇ ಇರಬಹುದೇ ಎಂಬುದನ್ನು ನೋಡುವುದಷ್ಟೇ ಬಾಕಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.