ಎಪ್ರಿಲ್ 11ರಂದು ದೇಶ ಚುನಾವಣೆಯನ್ನು ಎದುರಿಸಲಿದೆ, ಆದರೂ ದೇಶದ ಶಸ್ತ್ರಾಸ್ತ್ರ ಪಡೆಗಳನ್ನು ಕಡೆಗಣಿಸುವ ಕಾಂಗ್ರೆಸ್ ವರ್ತನೆ ನಿಲ್ಲುವ ಸೂಚನೆಯೇ ಇಲ್ಲ. ಭಾರತೀಯ ಸೇನೆ ಲೈಂಗಿಕ ದೌರ್ಜನ್ಯ ಎಸಗುತ್ತದೆ ಎಂಬುದನ್ನು ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತಕ್ಕೆ ನೀಡಿರುವ ಶಸ್ತ್ರಾಸ್ತ್ರ ಪಡೆಗಳ ವಿಶೇಷ ಪರಮಾಧಿಕಾರವನ್ನು ವಾಪಾಸ್ ಪಡೆದುಕೊಳ್ಳುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ಈಗ ಕಾಂಗ್ರೆಸ್ ಮುಖಂಡ ಮತ್ತು ವಕ್ತಾರ ರಣ್ದೀಪ್ ಸಿಂಗ್ ಸುರ್ಜೆವಾಲಾ ಅವರು AFSPA ಬಗೆಗಿನ ತಮ್ಮ ಪಕ್ಷದ ನಿಲುವನ್ನು ಪುನರುಚ್ಚರಿಸಿದ್ದಾರೆ ಮತ್ತು ದೇಶದ ಸಶಸ್ತ್ರ ಪಡೆಗಳು ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡುತ್ತಿದೆ ಎಂಬ ಆಧಾರ ರಹಿತ ಆರೋಪ ಮಾಡಿದ್ದಾರೆ. ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನವೊಂದರಲ್ಲಿ, ಸುರ್ಜೆವಾಲಾ ಅವರು, ಸಶಸ್ತ್ರ ಸೇನಾಪಡೆಗಳು ತಾವು ನಿಯೋಜನೆಗೊಂಡಿರುವಂತಹ ಪ್ರದೇಶಗಳಲ್ಲಿ ಅತ್ಯಾಚಾರ ಮತ್ತು ಕೊಲೆಯಂತಹ ಅಪರಾಧಗಳನ್ನು ಮಾಡುತ್ತವೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಭಾರತೀಯ ಸೇನಾಪಡೆಯ ಬಗ್ಗೆ ಅಂತಹ ಕೀಳುಮಟ್ಟದ ಟೀಕೆಗಳನ್ನು ಪಕ್ಷವೊಂದು ಮಾಡುತ್ತಿರುವುದು ದೇಶಕ್ಕೆ ಮಾಡಿದ ಅವಮಾನವಾಗಿದೆ.
“ರಕ್ಷಣಾ ಪಡೆಗಳ ಅಧಿಕಾರ ಮತ್ತು ನಾಗರಿಕರ ಮಾನವ ಹಕ್ಕುಗಳ ನಡುವಿನ ಸಮತೋಲನವನ್ನು ಕಾಪಾಡಲು ಮತ್ತು ಬಲವಂತದ ಕಣ್ಮರೆ, ಲೈಂಗಿಕ ದೌರ್ಜನ್ಯ ಮತ್ತು ಚಿತ್ರಹಿಂಸೆ ಉತ್ತೇಜನ ತೆಗೆದು ಹಾಕಲು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರಗಳ) ಕಾಯಿದೆ, 1958 ರ ತಿದ್ದುಪಡಿಯನ್ನು ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಈ ಪ್ರಣಾಳಿಕೆ ಕೇವಲ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಮಾತ್ರವಲ್ಲ, ಭಾರತದ ಭದ್ರತೆಯನ್ನೂ ದೊಡ್ಡ ಮಟ್ಟದಲ್ಲಿ ಅಪಾಯಕ್ಕೆ ಸಿಲುಕಿಸಿದೆ. ಎಲ್ಲಾ ಗಡಿಗಳಿಂದಲೂ ಭಾರತಕ್ಕೆ ಬೆದರಿಕೆ ಇದೆ ಮತ್ತು ಸಶಸ್ತ್ರ ಪಡೆಗಳು ಅದನ್ನು ಸ್ವಲ್ಪ ಮಟ್ಟಿಗೆ ತೆಗೆದುಹಾಕುವಲ್ಲಿ ಯಶಸ್ವಿಯಾಗಿವೆ. ಆದರೆ ಕಾಂಗ್ರೆಸ್ ಪ್ರಣಾಳಿಕೆ ದೇಶವನ್ನು ಅಪಾಯಕ್ಕೆ ದೂಡುವ ಸೂಚನೆಯನ್ನು ನೀಡಿದೆ.
ಕಾಂಗ್ರೆಸ್ ನಾಯಕತ್ವಕ್ಕೆ ಭಯೋತ್ಪಾದನೆಯ ಸವಾಲುಗಳ ಬಗ್ಗೆ ತಿಳಿದಿಲ್ಲ ಎಂದೆನಿಸುತ್ತದೆ ಅಥವಾ ಈ ವರ್ತನೆ ಉಗ್ರವಾದದ ಬಗೆಗಿನ ನಿರ್ಲಕ್ಷ್ಯದ ದ್ಯೋತಕವೂ ಆಗಿರಬಹುದು, ಅಜ್ಞಾನವೂ ಆಗಿರಬಹುದು. ಸಮಸ್ಯೆ ಪೀಡಿತ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಸಶಸ್ತ್ರ ಪಡೆಗಳ ಯೋಧರು ತಮ್ಮ ಚಟುವಟಿಕೆಗಳನ್ನು ಸರಾಗವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿ ಎಂಬ ಕಾರಣಕ್ಕೆ AFSPA ಅನ್ನು ಜಾರಿಗೆ ತರಲಾಯಿತು.
ಇಂತಹ ಅನೈತಿಕ, ನಿರಾಶಾದಾಯಕ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ಹಿಂದೆ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಸಶಸ್ತ್ರ ಪಡೆಗಳ ಶಕ್ತಿಯನ್ನು ಕುಂದಿಸುವಂತಹ ಹೇಳಿಕೆಗಳನ್ನು ನೀಡಿದೆ, ಚಟುವಟಿಕೆಗಳನ್ನು ನಡೆಸಿದೆ. ಸೇನಾಪಡೆಗಳಿಲ್ಲದ ಕಾಂಗ್ರೆಸ್ ಪಕ್ಷ ಹೇಗೆ ನುಸುಳುಕೋರರನ್ನು ಮತ್ತು ಬಂಡಾಯವನ್ನು ತಡೆಯುತ್ತದೆ?
ಸಶಸ್ತ್ರ ಪಡೆಗಳನ್ನು ದುರ್ಬಲಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯನಿರತವಾಗಿದ್ದರೆ, ಅತ್ತ ದೇಶದ ಪ್ರಧಾನಮಂತ್ರಿ ಸೇನಾಪಡೆಗಳೊಂದಿಗೆ ದೃಢವಾಗಿ ನಿಂತಿದ್ದಾರೆ. ನೆಟ್ವರ್ಕ್ 18ನ ಮುಖ್ಯ ಸಂಪಾದಕರಾದ ರಾಹುಲ್ ಜೋಷಿಯವರಿಗೆ ನೀಡಿದ ಸಂದರ್ಶನವೊಂದರಲ್ಲಿ ಮೋದಿ ಅವರು, ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿ, ಅವರು ದೇಶದ ಸಶಸ್ತ್ರ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ ಮತ್ತು ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ನಾವು ಭಯೋತ್ಪಾದನೆಯನ್ನು ತೆಗೆದುಹಾಕುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಭಯೋತ್ಪಾದಕರು ಹತಾಶರಾಗಿದ್ದಾರೆ. ನಾವು ಅವರ ವಿರುದ್ಧ ಮಾನಸಿಕ ಯುದ್ಧವನ್ನು ಗೆಲ್ಲುತ್ತಿದ್ದೇವೆ. ಆದರೆ ಇಂತಹ ಪ್ರಯತ್ನಗಳನ್ನು ಬೆಂಬಲಿಸುವ ಬದಲು, ಕಾಂಗ್ರೆಸ್ ಪ್ರಣಾಳಿಕೆ ಭಯೋತ್ಪಾದನೆಯ ಬಗ್ಗೆ ಮೃದು ಧೋರಣೆಯನ್ನು ಅನುಸರಿಸಿದೆ. ಸೈನ್ಯದ ಮೇಲಿನ ಅವರ ಅಭಿಪ್ರಾಯಗಳು ಪಾಕಿಸ್ಥಾನದ ಅಭಿಪ್ರಾಯದಂತೆಯೇ ಇದೆ. ಯಾವುದೇ ದೇಶಭಕ್ತ ಈ ರೀತಿಯ ಭಾಷೆಯನ್ನು ಸಹಿಸಿಕೊಳ್ಳುವುದಿಲ್ಲ. AFSPA ತೆಗೆದುಹಾಕುವುದರ ಬಗ್ಗೆ ಅವರ ಪ್ರಣಾಳಿಕೆ ಮಾತನಾಡುತ್ತದೆ. ಇದು ಸೈನಿಕನ ಕೈಯಿಂದ ಶಸ್ತ್ರಾಸ್ತ್ರಗಳನ್ನು ತೆಗೆದುಹಾಕುವುದಕ್ಕೆ ಸಮಾನವಾಗಿದೆ. ಇದು ಸರಿಯೇ?” ಎಂದು ಮೋದಿ ಹೇಳಿದ್ದರು.
ಮಾನವ ಹಕ್ಕುಗಳ ಉಲ್ಲಂಘನೆಯ ರಕ್ಷಕರಾಗಿ ಸೇನೆಯು ಸೇವೆ ಸಲ್ಲಿಸುತ್ತಿದೆಯೆಂದು ಪ್ರಧಾನಿ ಮೋದಿ ಗಮನಾರ್ಹ ಉಲ್ಲೇಖವನ್ನು ಮಾಡಿದ್ದಾರೆ. ಕಾಂಗ್ರೆಸ್ ಈ ಅಂಶಗಳ ಮೇಲೆ ಬೆಳಕು ಚೆಲ್ಲಲಿಲ್ಲ ಎಂಬುದು ದುರಾದೃಷ್ಟಕರ ಸಂಗತಿಯೇ ಸರಿ. ಭಾರತೀಯ ಸೇನೆಯು ವಿಶ್ವಸಂಸ್ಥೆಯ ಶಾಂತಿರಕ್ಷಣೆ ಪಡೆಯ ಭಾಗವಾಗಿದೆ ಎಂದು ಮೋದಿ ಉಲ್ಲೇಖ ಮಾಡಿದ್ದಾರೆ. 50-60 ವರ್ಷ ಆಳ್ವಿಕೆ ನಡೆಸಿದ ಪಕ್ಷವೊಂದು ಸೇನೆಯ ಬಗ್ಗೆ ಅಂತಹ ಭಾಷೆಯನ್ನು ಬಳಸಬಾರದಿತ್ತು ಎಂದಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯು “ಆಶ್ರಯ ಕಾನೂನು” ನಂತಹ ಇತರ ವಿಷಯಗಳ ಬಗ್ಗೆ ಮಾತನಾಡುತ್ತದೆ, ದೇಶದೊಳಗೆ ಇರುವ ಅನೇಕ ಅಕ್ರಮ ವಲಸೆಗಾರರನ್ನು ಕಾನೂನುಬದ್ಧಗೊಳಿಸುವುದು ಇದರ ಹಿಂದಿನ ಕಾರಣವಾಗಿರಬಹುದು. ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದು ಮತ್ತು ಸಶಸ್ತ್ರ ಪಡೆಗಳು ಭಾರಿ ಅಪರಾಧಗಳನ್ನು ಮಾಡುತ್ತಿರುವುದು ಬಿಜೆಪಿ ಸರಕಾರಕ್ಕೆ ಸರಿಯಾಗಿ ಕಾಣುತ್ತದೆಯೇ ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ.
ರಾಷ್ಟ್ರದ ಉಳಿವಿಗಾಗಿ ಪ್ರತಿದಿನವೂ ತಮ್ಮ ಜೀವವನ್ನು ಅಪಾಯಕ್ಕೆ ದೂಡುವ ದೇಶದ ಕೆಚ್ಚೆದೆಯ ಮತ್ತು ಪರಾಕ್ರಮಿ ಸೈನಿಕರ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕುವ ಮೂಲಕ ಭಾರತೀಯ ಸೇನಾಪಡೆಗಳ ನೈತಿಕತೆಯನ್ನು ಒಡೆಯುವ ಸುರ್ಜೆವಾಲರಂತಹ ವ್ಯಕ್ತಿಗಳ ನಿಯತ್ತಿನ ಮೇಲೆಯೇ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಕಾಂಗ್ರೆಸ್ ಪಕ್ಷವು ನಮ್ಮ ಸಶಸ್ತ್ರ ಪಡೆಗಳ ಗೌರವವನ್ನು ಮಣ್ಣು ಪಾಲು ಮಾಡುವ ಯಾವುದೇ ಹಂತಕ್ಕಾದರೂ ಹೋಗಬಹುದು ಎಂದೆನಿಸುತ್ತದೆ. ಆದರೆ ಮೋದಿಯವರು ಸಂದರ್ಶನದಲ್ಲಿ ನೀಡಿರುವ ಹೇಳಿಕೆಗಳು ಎರಡು ಪ್ರಮುಖ ಪಕ್ಷಗಳ ಮನಸ್ಥಿತಿಯಲ್ಲಿನ ವಿಭಿನ್ನತೆಯನ್ನು ತೋರಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.