ವಾಷಿಂಗ್ಟನ್: ವಿದೇಶದಲ್ಲಿರುವ ಭಾರತೀಯರು 2018 ರಲ್ಲಿ 79 ಬಿಲಿಯನ್ ಡಾಲರ್ ಹಣವನ್ನು ಮರಳಿ ತಾಯ್ನಾಡಿಗೆ ಕಳುಹಿಸಿದ್ದಾರೆ. ಈ ಮೂಲಕ ಭಾರತ ಅನಿವಾಸಿಗಳಿಂದ ಹಣ ಸ್ವೀಕರಿಸುವ ವಿಶ್ವದ ಟಾಪ್ ದೇಶ ಎಂಬ ಸ್ಥಾನಮಾನವನ್ನು ಉಳಿಸಿಕೊಂಡಿದೆ ಎಂದು ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದ ಬಳಿಕದ ಸ್ಥಾನವನ್ನು ಚೀನಾ ಹೊಂದಿದ್ದು, ಅದರ ಅನಿವಾಸಿ ಪ್ರಜೆಗಳು 2018ರಲ್ಲಿ 67 ಬಿಲಿಯನ್ ಡಾಲರ್ ಅನ್ನು ತಾಯ್ನಾಡಿಗೆ ಕಳುಹಿಸಿದ್ದಾರೆ. 3ನೇ ಸ್ಥಾನದಲ್ಲಿ ಮೆಕ್ಸಿಕೊ ಇದ್ದು, ಅದರ ಅನಿವಾಸಿ ಪ್ರಜೆಗಳು 36 ಶತಕೋಟಿ ಡಾಲರ್ ಅನ್ನು ತಾಯ್ನಾಡಿಗೆ ನೀಡಿದ್ದಾರೆ. ಫಿಲಿಪೈನ್ಸ್ ಅನಿವಾಸಿ ಪ್ರಜೆಗಳು 34 ಬಿಲಿಯನ್ ಡಾಲರ್ ಮತ್ತು ಈಜಿಪ್ಟ್ ಅನಿವಾಸಿ ಪ್ರಜೆಗಳು 29 ಬಿಲಿಯನ್ ಡಾಲರ್ ನೀಡಿದ್ದಾರೆ.
ಇದರಿಂದಾಗಿ, ವಿಶ್ವ ಬ್ಯಾಂಕಿನ ವಲಸೆ ಮತ್ತು ಅಭಿವೃದ್ಧಿ ಸಂಕ್ಷಿಪ್ತತೆಯ ಇತ್ತೀಚಿನ ಆವೃತ್ತಿಯ ಪ್ರಕಾರ, ಅನಿವಾಸಿ ಪ್ರಜೆಗಳಿಂದ ಹಣ ಸ್ವೀಕರಿಸುವ ವಿಶ್ವದ ಟಾಪ್ ದೇಶವಾಗಿ ಭಾರತವು ತನ್ನ ಅಗ್ರ ಸ್ಥಾನ ಉಳಿಸಿಕೊಂಡಿದೆ.
ಕಳೆದ ಮೂರು ವರ್ಷಗಳಿಂದ ಅನಿವಾಸಿ ಭಾರತೀಯರಿಂದ ಹರಿದು ಬರುತ್ತಿರುವ ಹಣದ ಪ್ರಮಾಣದಲ್ಲಿ ಮಹತ್ವದ ಬೆಳವಣಿ ಕಂಡಿದೆ. 62.7 ಬಿಲಿಯನ್ ಡಾಲರ್ನಿಂದ 65.3 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
‘ಹಣ ಸ್ವೀಕಾರ ಭಾರತದಲ್ಲಿ ಶೇ.14ರಷ್ಟು ಏರಿಕೆಯಾಗಿದೆ. ಕೇರಳದಲ್ಲಿ ನೆರೆ ಸಂಭವಿಸಿದ ಕಾರಣ ಭಾರೀ ಪ್ರಮಾಣದ ಅನಿವಾಸಿಗಳು ಆ ರಾಜ್ಯಕ್ಕೆ ಹಣವನ್ನು ರವಾನಿಸಿದ್ದು ಕೂಡ ಈ ಏರಿಕೆಗೆ ಒಂದು ಕಾರಣವಾಗಿದೆ’ ಎಂದು ವಿಶ್ವಬ್ಯಾಂಕ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.