ಮಹಿಳೆಯರ ಆರ್ಥಿಕ ಸೇರ್ಪಡೆಗೊಳಿಸುವಿಕೆ ಮೋದಿ ಸರಕಾರ ತಂದ ನೀತಿಗಳಿಂದಾಗಿ ಮಹತ್ವದ ಬದಲಾವಣೆಗಳುಂಟಾಯಿತು ಎಂದು ಹೇಳುವುದು ಅತಿಶಯೋಕ್ತಿಯಾಗಲಾರದು. ಎಲ್ಲದಕ್ಕೂ ಮಿಗಿಲಾಗಿ, ಜಾತಿ, ಧರ್ಮ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಈ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿನ ದೊಡ್ಡ ಕಾರಣಗಳಲ್ಲಿ ಇದು ಕೂಡ ಒಂದಾಗಿದೆ.
ಚುನಾವಣೆಗಿಂತ ಮುಂಚೆಯೇ ಈಗಿನ ಸರಕಾರದ ಸಾಧನೆಗಳನ್ನು ಇಡೀ ಭಾರತ ಚರ್ಚಿಸುತ್ತಾ ಬಂದಿದೆ, ಮೋದಿಗೆ ಮತ ಚಲಾಯಿಸಲು ಹಲವಾರು ಮಂದಿ ಈಗಾಗಲೇ ಮನಸ್ಸನ್ನು ದೃಢಪಡಿಸಿಕೊಂಡಿದ್ದಾರೆ. ಸುದ್ದಿ ಸಮಾಚಾರಗಳ ಹೊರತಾಗಿಯೂ ಬಿಜೆಪಿಗೆ ಮತ ನೀಡದಿರುವವರೂ ಅನೇಕರು ಇದ್ದಾರೆ. ಈ ಚರ್ಚೆಗಳ ಸಂದರ್ಭದಲ್ಲಿ, ಮಹಿಳೆಯರು ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ಈಗಾಗಲೇ ದೃಢಪಡಿಸಿಕೊಂಡಿದ್ದಾರೆ, ತಮ್ಮ ಪುರುಷರು ಏನು ಹೇಳುತ್ತಾರೆ ಎಂಬುದರ ಮೇಲೆ ಇವರುಗಳ ನಿರ್ಧಾರ ನಿಂತಿಲ್ಲ. ಭಾರತದ ಮಹಿಳಾ ಮತದಾರಳಾಗಿ, ನನ್ನ ಮತವು ಮೋದಿಗೆ ಹೋಗುತ್ತದೆ, ಏಕೆಂದರೆ ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ನಾವು, ಆರ್ಥಿಕ ವಿಷಯಗಳಲ್ಲಿ ಧ್ವನಿಯನ್ನು ಹೊಂದಲು ನೇರ ಮತ್ತು ಪರೋಕ್ಷವಾಗಿ ಮಹಿಳೆಯರಿಗೆ ಸಹಾಯ ಮಾಡಿದ ಸರಕಾರವನ್ನು ಹೊಂದಿದ್ದೇವೆ. ಹೇಗೆ ಎಂದು ಇಲ್ಲಿ ಚರ್ಚಿಸೋಣ.
ಜನ್ಧನ್ ಖಾತೆ
ಭಾರತದಲ್ಲಿ ಮನೆಯ ಮಹಿಳೆ ಮನೆಯ ಹಣಕಾಸನ್ನು ನಿರ್ವಹಿಸುತ್ತಿದ್ದ ಒಂದು ಕಾಲವಿತ್ತು. ವಾಸ್ತವವಾಗಿ, ಬೀರುವಿನ ಕೀಗಳನ್ನು ಹೊಂದಿರುವ ಮಹಿಳೆ ಅವಿಭಕ್ತ ಕುಟುಂಬಗಳಲ್ಲಿ ಅತ್ಯಂತ ಶಕ್ತಿಯುತ ಮಹಿಳೆಯಾಗಿದ್ದಳು. ಅವಿಭಕ್ತ ಕುಟುಂಬ ವ್ಯವಸ್ಥೆಯು ಮುರಿದು ಬಿದ್ದು, ನಾವು ವಿಭಕ್ತ ಕುಟುಂಬಗಳನ್ನು ಹೊಂದಲು ಪ್ರಾರಂಭಿಸಿದಾಗಲೂ ಹಣಕಾಸು ನಿರ್ವಹಿಸುವವಳು ಮಹಿಳೆಯೇ ಆಗಿದ್ದಳು. ಮನೆಗೆ ಬೇಕಾ ಖರೀದಿಗಳು, ರಜಾದಿನಗಳು, ಆಭರಣ ಖರೀದಿಗಳು ಇತ್ಯಾದಿಗಳನ್ನು ಆಕೆಯೇ ನಿರ್ಧರಿಸುತ್ತಿದ್ದಳು. ಆದರೆ, ಉದ್ಯೋಗದ ವೇತನಗಳು ನೇರವಾಗಿ ಪುರುಷರ ಬ್ಯಾಂಕ್ ಖಾತೆಗಳಿಗೆ ಬೀಳಲು ಆರಂಭವಾದ ಬಳಿಕ ಎಲ್ಲವೂ ಬದಲಾಯಿತು. ಬ್ಯಾಂಕ್ ಖಾತೆಗಳು, ವಿಮಾ ಪಾಲಿಸಿಗಳು ಮತ್ತು ಉಳಿತಾಯಗಳನ್ನು ಪುರುಷರು ತಮ್ಮ ಹೆಸರಿನಲ್ಲೇ ಹೊಂದಲು ಆರಂಭಿಸಿದರು. ಪತ್ನಿ ಕೇವಲ ನಾಮಿನಿಯಾದಳು ಮತ್ತು ಮನೆಯ ವೆಚ್ಚಗಳಿಗೆ ಮಾತ್ರ ಆತನ ಆದಾಯದ ಭಾಗಗಳನ್ನು ಆಕೆ ಪಡೆಯಲಾರಂಭಿಸಿದಳು.
ಯಾವಾಗ ಮೋದಿ ಸರ್ಕಾರ ಜನ ಧನ್ ಯೋಜನೆಯನ್ನು ಆರಂಭಿಸಿತೋ, ಮೊದಲ ಬಾರಿಗೆ ಅನೇಕ ಮಹಿಳೆಯರು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದರು. ಕೇವಲ ಪ್ರತಿಷ್ಠಿತ ಅಥವಾ ನಗರ ನಿವಾಸಿ ಮಹಿಳೆಯರಿಗೆ ಮಾತ್ರವಲ್ಲ, ಗ್ರಾಮೀಣ ಭಾಗದ ಮಹಿಳೆಯರಿಗೂ ಈ ಒಂದು ಯೋಜನೆ ಸ್ವಾತಂತ್ರ್ಯವನ್ನು ತಂದುಕೊಟ್ಟಿತು. ಮೊದಲ ಬಾರಿಗೆ, ಮಹಿಳೆಯರು ತಮ್ಮದೇ ಆದ ಬ್ಯಾಂಕ್ ಖಾತೆಗಳನ್ನು ಹೊಂದುವ, ಮೊದಲ ಬಾರಿಗೆ ತಮ್ಮ ಹತ್ತಿರದವರಿಗೆ ಹಣವನ್ನು ಪಾವತಿಸುವ, ವರ್ಗಾಯಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗೆ ದೊರೆಯಿತು ಮತ್ತು ಸಾಮಾನ್ಯವಾಗಿ ಚಿಟ್-ಫಂಡ್ಗಳನ್ನು ಬಳಸದೆ ಅದರಿಂದ ದೂರ ಉಳಿಯಲು ಇದು ನೆರವಾಯಿತು. ಇದು ವಿವಿಧ ಕಾರಣಗಳಿಗಾಗಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಈ ಯೋಜನೆ ಕಾರಣವಾಗಿದೆ.
ಮೋದಿ ಸರ್ಕಾರ ಜನಧನ್ ಖಾತೆಯನ್ನು ಆಧಾರ್ಗೆ ಮತ್ತು ಸಬ್ಸಿಡಿಗೆ ಲಿಂಕ್ ಮಾಡಿದ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರು ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆರೆದರು. ನಗರದ ಮಹಿಳೆಯರು ಮಾತ್ರವಲ್ಲ ಗ್ರಾಮೀಣ ಮಹಿಳೆಯರಿಗೂ ಇದು ಸಾಕಷ್ಟು ಪ್ರಯೋಜನವನ್ನು ತಂದುಕೊಟ್ಟಿದೆ. ಹಣಕಾಸು ಸ್ವಾತಂತ್ರ್ಯ ಒದಗಿಸಿದೆ.
ಮಹಿಳೆಯರಿಗೆ ಪ್ರತ್ಯೇಕವಾಗಿ 5 ಕೋಟಿ ಉದ್ಯೋಗ ಅವಕಾಶಗಳನ್ನು ನೀಡುವ ಮೂಲಕ ಸೌದಿ ಚರಕ ಮಿಷನ್ ಖಾದಿ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಪ್ರತಿ ಲೋಕಸಭಾ ಕ್ಷೇತ್ರಕ್ಕೆ 40 ಸಾವಿರ ಕೋಟಿ ರೂ. ಬಂಡವಾಳವನ್ನು ಪ್ರಸ್ತಾಪಿಸಲಾಗಿದೆ ಮತ್ತು ಪ್ರತಿ ಸಂಸತ್ ಕ್ಷೇತ್ರದಲ್ಲೂ 1 ಲಕ್ಷ ಮಹಿಳೆಯರನ್ನು ಸಮಾಜ ಭದ್ರತಾ ಯೋಜನೆಯಡಿ ಉದ್ಯೋಗಕ್ಕೆ ಒಳಪಡಿಸಲಾಗುತ್ತದೆ.
ಆದಾಯದ ಹೆಚ್ಚಳ, ವಿವಿಧ ಮೂಲಗಳಿಂದ ಗಳಿಸುವ ಅವಕಾಶಗಳು, ಇಂತಹ ಆದಾಯ ಮತ್ತು ಉಳಿತಾಯವನ್ನು ನಿರ್ವಹಿಸುವ ಸಾಮರ್ಥ್ಯ ಎಲ್ಲವೂ ಉತ್ತಮ ಜೀವನಶೈಲಿಯ ಬದಲಾವಣೆಗಳನ್ನು ತರುತ್ತವೆ. ಮಕ್ಕಳ ಶಿಕ್ಷಣ, ಅವರ ಆರೋಗ್ಯಕ್ಕಾಗಿ ಆರೈಕೆ, ಪ್ರಪಂಚವನ್ನು ಎಕ್ಸ್ಪ್ಲೋರ್ ಮಾಡಲು ಪ್ರೋತ್ಸಾಹಿಸುವುದು ಎಲ್ಲವೂ ಉತ್ತಮ ಆರ್ಥಿಕ ಯೋಜನೆಯನ್ನು ಸ್ವಯಂಚಾಲಿತವಾಗಿ ಅನುಸರಿಸುವಂತೆ ಮಾಡುತ್ತವೆ.
ಮುದ್ರಣ ಯೋಜನೆ ಮತ್ತು ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್ (GeM)
ನೀವು ಗ್ರಾಮದ ಅಥವಾ ಪಟ್ಟಣದ ನಿವಾಸಿಯಾಗಿದ್ದು, ಸೃಜನಾತ್ಮಕ ಮತ್ತು ಉದ್ಯಮಶೀಲತೆಯ ಉತ್ಸಾಹವನ್ನು ಹೊಂದಿದ್ದೀರಿ ಆದರೆ ನಿಮ್ಮ ಸೃಜನಶೀಲತೆಯನ್ನು ಉನ್ನತಿಪಡಿಸಲು ಯಾವುದೇ ಅವಕಾಶವಿಲ್ಲ ಎಂದು ಊಹಿಸಿಕೊಳ್ಳಿ! ಇದಕ್ಕೆ ಕಾರಣ ಸಾಲ ಪಡೆಯಲು ಅವಶ್ಯಕತೆಗಳು ಇಲ್ಲದೇ ಇರುವುದು, ಮತ್ತು ಹೇಗೆ ಸಾಲ ಪಡೆಯಬೇಕು ಎಂಬ ಬಗೆಗಿನ ಜ್ಞಾನದ ಕೊರತೆ. ಮೋದಿ ಸರಕಾರವು ಸಣ್ಣ ಪಟ್ಟಣಗಳು, ಗ್ರಾಮಗಳು ಮತ್ತು ನಗರಗಳಲ್ಲಿರುವ ಲಕ್ಷಾಂತರ ಜನರಿಗೆ ಸೃಜನಾತ್ಮಕ ಉದ್ಯಮವನ್ನು ಆರಂಭಿಸುವ ನಿಟ್ಟಿನಲ್ಲಿ ಸಹಾಯ ಹಸ್ತವನ್ನು ಚಾಚಿತು. MUDRA (ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್.) ಯೋಜನೆಯು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಹಣಕಾಸಿನ ನೆರವನ್ನು ಒದಗಿಸುತ್ತದೆ. ಕೃಷಿ ಮತ್ತು ಕಾರ್ಪೋರೇತರ ವಲಯದಲ್ಲಿನ ಚಟುವಟಿಕೆಗಳಿಗೆ ಅರ್ಹರು ರೂ. 10 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಈ ಯೋಜನೆಯಡಿಯಲ್ಲಿ, ಹಣಕಾಸಿನ ಅವಶ್ಯಕತೆಗಳನ್ನು ಮತ್ತು ಫಲಾನುಭವಿಯ ಸಂಸ್ಥೆಯ ಬೆಳವಣಿಗೆಯನ್ನು ಅಥವಾ ವ್ಯಕ್ತಿಗಳನ್ನು ಗುರುತಿಸುವ ಮೂರು ಹಂತಗಳಿವೆ. ಇವು:
ಶಿಶು: ಇದು 50,000 ಕ್ಕಿಂತ ಕಡಿಮೆ ಸಾಲ ದೊರೆಯುತ್ತದೆ.
ಕಿಶೋರ್: ಇದು 50,000-5,00,000ದವರೆಗೆ ಸಾಲಗಳನ್ನು ಒಳಗೊಂಡಿದೆ.
ತರುಣ್: ಇದು “5,00,000- 10,00,000ದವರೆಗೆ ಸಾಲಗಳನ್ನು ಒಳಗೊಂಡಿದೆ
ಆಹಾರ ಸೇವಾ ಘಟಕಗಳು, ಹಣ್ಣುಗಳು / ತರಕಾರಿ ಮಾರಾಟಗಾರರು, ಸೇವಾ ವಲಯದ ಘಟಕಗಳು, ಟ್ರಕ್ ನಿರ್ವಾಹಕರು, ಯಂತ್ರ ನಿರ್ವಾಹಕರು, ಆಹಾರ ಸಂಸ್ಕರಣ ಘಟಕಗಳು, ದುರಸ್ತಿ ಅಂಗಡಿಗಳು, ಸಣ್ಣ ಕೈಗಾರಿಕೆಗಳು ಸೇರಿದಂತೆ ಹೆಚ್ಚಿನವುಗಳಿಗೆ ಈ ಯೋಜನೆಯಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಸೋಲಾರ್ ಚಕ್ರ ಮಿಶನ್
2018ರ ಜೂನ್ 27 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಸೋಲಾರ್ ಚಕ್ರ ಮಿಶನ್ ಅನ್ನು ಆರಂಭಿಸಿದರು, ಈ ಯೋಜನೆ ಮಹಿಳೆಯರಿಗೆ 5 ಕೋಟಿ ಉದ್ಯೋಗಾವಕಾಶಗಳನ್ನು ನೀಡುತ್ತದೆ ಮತ್ತು ಖಾದಿ ಉತ್ಪನ್ನವನ್ನು ಪ್ರೋತ್ಸಾಹಿಸುತ್ತದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಒಂದು ಲಕ್ಷ ಮಹಿಳೆಯರಿಗೆ ಸಾಮಾಜಿಕ ಭದ್ರತಾ ಯೋಜನೆಯ ಮೂಲಕ ಇದು ಉದ್ಯೋಗವನ್ನು ನೀಡಲಿದೆ. ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯವು ದೇಶದಾದ್ಯಂತ 50 ಸಮೂಹವನ್ನು ಕವರ್ ಮಾಡಲಿದೆ. ಸೋಲಾರ್ ಚಾಲಿತ ಕ್ಲೋತ್ ಉತ್ಪನ್ನ ಯುನಿಟ್ ಆರಂಬಿಸುವವರು ಖಾದಿ ಸಮಿತಿಯ ಮೂಲಕ ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ. ಅಲ್ಲದೇ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು, ಅವರಿಗೆ ಉತ್ಪನ್ನ ಪೂರೈಸುವ ಹೆಚ್ಚುವರಿ ಅವಕಾಶವನ್ನೂ ಉದ್ಯಮಿಗಳಿಗೆ ನೀಡಲಾಗಿದೆ. ಖಾದಿ ಉದ್ಯಮವನ್ನು ಪ್ರಸ್ತುತ ಇರುವ ರೂ. 26,000 ಕೋಟಿಯಿಂದ ರೂ.1 ಲಕ್ಷ ಕೋಟಿಗೆ ಏರಿಸುವುದು ಇದರ ಉದ್ದೇಶವಾಗಿದೆ.
ಸುಕನ್ಯಾ ಸಮೃದ್ಧಿ ಯೋಜನಾ
ಹೆಣ್ಣು ಮಕ್ಕಳ ಹೆತ್ತವರಿಗಾಗಿಯೇ ಇರುವ “ಬೇಟಿ ಬಚಾವೊ, ಬೇಟಿ ಪಡಾವೊ” ಆಂದೋಲನದ ಭಾಗವಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜನವರಿ 22, 2015 ರಂದು ಆರಂಭಿಸಿತು. ಈ ಯೋಜನೆ ಹೆಣ್ಣು ಮಕ್ಕಳ ಹೆತ್ತವರಿಗೆ, ತಮ್ಮ ಮನೆಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಹಣ ಕಟ್ಟಿಡಲು ಪ್ರೇರೇಪಿಸುತ್ತದೆ. ಇದಕ್ಕಾಗಿ ದೇಶದ ಯಾವುದೇ ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕ್ನ ಶಾಖೆಯಲ್ಲಿ ಖಾತೆ ತೆರೆಯಬಹುದು. ಒಂದಿಷ್ಟು ಹಣವನ್ನು ಸುಕನ್ಯಾ ಖಾತೆಯಲ್ಲಿ ಉಳಿತಾಯ ಮಾಡುತ್ತಾ ಬಂದರೆ ಮಗಳಿಗೆ 18 ವರ್ಷ ಅಥವಾ 22 ವರ್ಷವಾದಾಗ ಆಕೆಯ ಶಿಕ್ಷಣ ಅಥವಾ ಇನ್ನಿತರ ಖರ್ಚಿಗಾಗಿ ಈ ಹಣವನ್ನು ವ್ಯಯ ಮಾಡಬಹುದಾಗಿದೆ. ಮಹಿಳಾ ಸಬಲೀಕರಣದಲ್ಲಿ ಅತ್ಯಂತ ದೂರದೃಷ್ಟಿಯ ಯೋಜನೆ ಇದಾಗಿದೆ.
ಆದಾಯದ ಹೆಚ್ಚಳ, ವಿವಿಧ ಮೂಲಗಳಿಂದ ಆದಾಯ ಗಳಿಸಲು ಅವಕಾಶಗಳು, ಆದಾಯ ಮತ್ತು ಉಳಿತಾಯವನ್ನು ನಿರ್ವಹಿಸುವ ಸಾಮರ್ಥ್ಯ ಇದೆಲ್ಲವೂ ಉತ್ತಮ ಜೀವನಶೈಲಿಯ ಬದಲಾವಣೆಗಳನ್ನು ತರುತ್ತವೆ. ಮಕ್ಕಳ ಶಿಕ್ಷಣ, ಅವರ ಆರೋಗ್ಯಕ್ಕಾಗಿ ಕಾಳಜಿ ವಹಿಸುವುದು, ಪ್ರಪಂಚವನ್ನು ಎಕ್ಸ್ಪ್ಲೋರ್ ಮಾಡಲು ಅವರನ್ನು ಉತ್ತೇಜಿಸುವುದು, ಎಲ್ಲವೂ ಉತ್ತಮ ಆರ್ಥಿಕ ಯೋಜನೆಯನ್ನು ಅನುಸರಿಸುವಂತೆ ಮಾಡುತ್ತದೆ. ಹಲವು ವರ್ಷಗಳಿಂದ, ಬಡತನ ರೇಖೆಗಿಂತ ಮೇಲಿರುವ ಜೀವನವನ್ನು ಮಾಡಲು, ಅದಕ್ಕಾಗಿ ಸಾಕಷ್ಟು ಆದಾಯ ಗಳಿಸಲು ಗ್ರಾಮೀಣ ಜನರಿಗೆ ಸಾಕಷ್ಟು ಅವಕಾಶವಿರಲಿಲ್ಲ. ಇದಕ್ಕೆ ನಿರುದ್ಯೋಗವು ಕಾಣವಾಗಿತ್ತು. ಮೋದಿ ಸರ್ಕಾರದ ಯೋಜನೆಗಳ ಕಾರಣದಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ಆದಾಯಕ್ಕೆ ತಮ್ಮ ಪಾಲನ್ನೂ ಸೇರಿಸಲು ಸಮರ್ಥರಾಗಿದ್ದಾರೆ. ಮಹಿಳೆಯರು ಗಳಿಸಿದಾಗ, ಭವಿಷ್ಯದ ಪೀಳಿಗೆಗಳು ಹೆಚ್ಚು ಪ್ರಯೋಜನವನ್ನು ಪಡೆಯುತ್ತವೆ ಎಂಬುದನ್ನು ನಾವು ಮರೆಯಬಾರದು.
ಜಾತಿ, ಧರ್ಮ, ಸ್ಥಾನಮಾನವನ್ನು ಮೀರಿ ಮೋದಿ ಸರ್ಕಾರಕ್ಕೆ ಮಹಿಳೆಯರು ಯಾಕೆ ಮತ ಹಾಕಬೇಕು ಎಂಬುದಕ್ಕೆ ಈ ಯೋಜನೆಗಳು ದೊಡ್ಡ ಕಾರಣಗಳಾಗಿವೆ. ಜನರನ್ನು ತಮ್ಮ ಸ್ವಾಭಿಮಾನ, ಪ್ರಯತ್ನಗಳಿಂದಲೇ ಮೇಲೆತ್ತುವಂತಾದಾಗ ಮಾತ್ರ ಜನ ಕಲ್ಯಾಣ ಸಾಧ್ಯವಾಗುತ್ತದೆ. ಇಂತಹ ಸುಧಾರಣೆಗಳು, ಪರಿವರ್ತನೆಗಳು ನಿರಂತರವಾಗಿ ಸಾಗುತ್ತಿರಬೇಕು. ಆಗ ಮಾತ್ರ ‘ಗರೀಬಿ ಹಠಾವೋ’ ಕೇವಲ ಘೋಷಣೆಯಲ್ಲ, ವಾಸ್ತವವಾಗಲೂ ಸಾಧ್ಯವಿದೆ. ನಮ್ಮ ಮಹಿಳೆಯರು, ಭವಿಷ್ಯದ ನಾಗರಿಕರು ಇದಕ್ಕೆ ಅರ್ಹರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.