ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ಬಳಸಲಾಗಿದ್ದ ಅಮೆರಿಕಾದ ವಾಯುಸೇನೆಯ ಏರ್ಕ್ರಾಫ್ಟ್ವೊಂದರ ಭಗ್ನಾವಶೇಷಗಳನ್ನು 12 ಯೋಧರ ಗಸ್ತು ತಂಡ ಪತ್ತೆ ಮಾಡಿರುವುದಾಗಿ ಗುರುವಾರ ಭಾರತೀಯ ಸೇನೆ ಮಾಹಿತಿ ನೀಡಿದೆ.
ಅರುಣಾಚಲ ಪ್ರದೇಶದ ರೋಯಿಂಗ್ ಜಿಲ್ಲೆಯಲ್ಲಿ ಎರಡನೇ ಮಹಾಯುದ್ಧ ವಿಟೇಂಜ್ ಯುಎಸ್ ಏರ್ಫೋರ್ಸ್ ಏರ್ಕ್ರಾಫ್ಟ್ ಅನ್ನು ಭಾರತೀಯ ಸೇನೆಯ ತಂಡ ಮಾರ್ಚ್ 30ರಂದು ಪತ್ತೆ ಮಾಡಿದೆ ಎಂದು ಸೇನೆ ಟ್ವಿಟ್ ಮೂಲಕ ತಿಳಿಸಿದೆ.
ಹಿಮದ 5 ಅಡಿ ಕಳಗೆ ಈ ಭಗ್ನಾವಶೇಷಗಳು ಹೂತು ಹೋಗಿದ್ದವು ಎಂದು ಹೇಳಲಾಗಿದೆ. ಸ್ಥಳಿಯ ಚಾರಣಿಗರು ಈ ಬಗ್ಗೆ ಮಾಹಿತಿ ನೀಡಿದ ತರುವಾಯ ಸೇನೆಯ ವಿಶೇಷ ಗಸ್ತು ತಂಡ ಅಲ್ಲಿಗೆ ತೆರಳಿ ಭಗ್ನಾವಶೇಷಗಳನ್ನು ಹೊರತೆಗೆಯಿತು.
1939 ರಿಂದ 1945ರವರೆಗೆ ಎರಡನೇ ವಿಶ್ವಯುದ್ಧ ನಡೆದಿತ್ತು. ಅಮೆರಿಕಾ ತನ್ನೆರಡು ನಗರಗಳ ಮೇಲೆ ಪರಮಾಣು ದಾಳಿಗಳನ್ನು ನಡೆಸಿದ ಬಳಿಕ ಜಪಾನ್ ಶರಣಾಯಿತು. ಇದರಿಂದ ಯುದ್ಧ ಕೊನೆಗೊಂಡಿತ್ತು.
Troops from #IndianArmy discovered the wreckage of a World War II vintage US Air Force aircraft in Roing district #ArunachalPradesh. 12 member patrol successfully carried out arduous task on 30 Mar 2019. The patrol located aircraft debris covered under deep snow.@easterncomd pic.twitter.com/w1jTKmIFCC
— ADG PI – INDIAN ARMY (@adgpi) April 4, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.