ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಈ ವೀಡಿಯೋ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ್ದಾಗಿದೆ. ಅವರು ಹೊಸದಾಗಿ ಉದ್ಘಾಟನೆಗೊಂಡ ಟಿವಿ9 ಚಾನೆಲಿನ ಭಾರತ್ ವರ್ಷ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದ ವೀಡಿಯೋ ಇದಾಗಿದೆ. ಹಿಂದೆ, ರವಿ ಕಾಣದ್ದನ್ನು ಕವಿ ಕಂಡ ಎಂದು ಹೇಳಲಾಗುತ್ತಿತ್ತು. ಆಧುನಿಕ ಕಾಲದಲ್ಲಿ ಈ ಮಾತಿನ ‘ಕವಿ’ಯ ಜಾಗವನ್ನು ಕ್ಯಾಮೆರಾ ಆಕ್ರಮಿಸಿದೆ.
ಈಗ ಕ್ಯಾಮೆರಾ ಎಲ್ಲಿ ಬೇಕಾದರೂ ತಲುಪುತ್ತದೆ. ಹೋಗಬಾರದ ಕಡೆಗೂ ಅದು ಹೋಗುತ್ತದೆ. ಈ ಸಮಾರಂಭದಲ್ಲಿ, ಪ್ರಧಾನ ಮಂತ್ರಿ ಮತ್ತು ಟಿವಿ9 ಸಿಇಓ ರವಿ ಪ್ರಕಾಶ್ ನಡುವೆ ಲಘು ಮಾತುಕತೆಗಳು ನಡೆದವು. ಇವುಗಳನ್ನು ಕ್ಯಾಮೆರಾ ರೆಕಾರ್ಡ್ ಮಾಡಿದವು. ಇದರಲ್ಲಿ ಮೋದಿಯವರು ರವಿ ಪ್ರಕಾಶ್ಗೆ ‘’ನೀವು ಎಂತಹ ಜನರನ್ನು ತುಂಬಿಸಿದ್ದೀರಿ ಎಂದರೆ, ಅವರ ಬ್ಲಡ್ನಲ್ಲೇ ನನ್ನನ್ನು ಟೀಕಿಸುವ ಗುಣ ಇದೆ’’ ಎನ್ನುತ್ತಾರೆ, ಇದಕ್ಕೆ ಉತ್ತರವಾಗಿ ರವಿ ಅವರು ಬದಲಾವಣೆ ತರುವ ಮಾತನ್ನು ಆಡುತ್ತಾರೆ.
ಇದೀಗ ಈ ಸಣ್ಣ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣ್ದೀಪ್ ಸುರ್ಜೇವಾಲ ಅವರಿಗೆ ಮೋದಿಯ ಮಾತು ಧಮ್ಕಿ ಹಾಕುವಂತೆ ಕಂಡಿದೆ. ಅದಲ್ಲದೇ, ಈ ಮಾತನ್ನು ನಾಚಿಗೇಡು, ಆಘಾತಕಾರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಆದರೆ ಈ ಒಂದು ಸಾಮಾನ್ಯ ಮಾತು ಹೇಗೆ ಧಮ್ಕಿಯಾಯಿತು ಎಂಬ ಬಗ್ಗೆ ಅರ್ಥವಾಗುತ್ತಿಲ್ಲ. ದೇಶದ ಪ್ರಧಾನಮಂತ್ರಿಗಳು ಒಂದು ಟಿವಿ ಮಾಧ್ಯಮದ ಮೂಲಕ ತಮ್ಮ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮೋದಿಯೂ ಕೂಡ ಒರ್ವ ಸಾಮಾನ್ಯ ವ್ಯಕ್ತಿ, ಅವರ ಹುದ್ದೆ ಮಾತ್ರ ನಿಜಕ್ಕೂ ಉನ್ನತಮಟ್ಟದ್ದು.
ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೋದಿಯವರನ್ನು ವಿವಿಧ ಮಾಧ್ಯಮಗಳ ಪತ್ರಕರ್ತರು ಹೇಗೆ ಅಸಂಬದ್ಧವಾದ ಮಾತುಗಳಿಂದ ಟೀಕಿಸುತ್ತಿದ್ದರು ಎಂಬುದನ್ನು ಯಾರೂ ಮರೆಯಲಾರರು. ಅತ್ಯಂತ ಕೆಟ್ಟ ಪದಗಳನ್ನು ಅವರ ವಿರುದ್ಧ ಬಳಸಲಾಗುತ್ತಿತ್ತು. ಆದರೀಗ ಕಾಲಚಕ್ರ ಬದಲಾಗಿದೆ, ಮುಖ್ಯಮಂತ್ರಿ ಮೋದಿ ಪ್ರಧಾನಮಂತ್ರಿಯಾಗಿದ್ದಾರೆ. ಆದರೆ ಆ ಕಾಲದಲ್ಲಿ ಪತ್ರಕರ್ತರು ತಮ್ಮೊಂದಿಗೆ ವರ್ತಿಸುತ್ತಿದ್ದ ಅನುಭವವನ್ನು ಮೋದಿ ಇಂದಿಗೂ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಟಿವಿ9 ಕಾರ್ಯಕ್ರಮದಲ್ಲೂ ಮೋದಿಯವರು ಆ ನೆನಪು ಮಾಡಿಕೊಂಡು ‘ಇತಿ-ಮಿತಿ’ ಯಲ್ಲೇ ಮಾತನ್ನು ಆಡಿದ್ದಾರೆ. ಇದರಲ್ಲಿ ಧಮ್ಕಿಯ ಯಾವ ಮಾತೂ ಇಲ್ಲ.
ಇನ್ನೊಂದೆಡೆ, ಅದೇ ಪತ್ರಕರ್ತರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಲೇ ಬಾರದು ಎಂದು ಟ್ವಿಟರ್ ನಲ್ಲಿ ಜನರಿಗೆ ಮನವಿ ಮಾಡುತ್ತಲೇ ಇದ್ದಾರೆ. ಅವರು ಅಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಯೋಗಿಸುತ್ತಿದ್ದಾರೆ. ಮೋದಿಯವರು ತಮ್ಮ ಅಧಿಕಾರದ ಪ್ರಯೋಗ ಮಾಡುತ್ತಲೇ ಮಾತನ್ನಾಡಿದ್ದಾರೆ. ಚುನಾವಣೆ ಸಂದರ್ಭವಾದ ಕಾರಣ ಮಾತನ್ನು ದೊಡ್ಡ ಮಟ್ಟದಲ್ಲಿ ವಿವಾದವನ್ನಾಗಿಸಲಾಗುತ್ತದೆ. ಈ ಸನ್ನಿವೇಶದಲ್ಲಿ, ಬೆಂಕಿಯಿಲ್ಲದೆಯೇ ಹೊಗೆಯಾಡುವ ಪ್ರಯಾಸ ಕಂಡರೂ ನಾವು ಆಶ್ಚರ್ಯಪಡಬೇಕಾಗಿಲ್ಲ. ಮೇ.23ರವರೆಗೆ ಈ ರೀತಿಯ ಸ್ಥಿತಿ ಹೀಗೇ ಮುಂದುವರೆಯಬಹುದು. ನಾವೀಗ ನೋಡಬೇಕಾಗಿರುವುದು, ದೇಶದಲ್ಲಿ ಯಾವ ರೀತಿಯಲ್ಲಿ ಹವಾ ಬದಲಾಯಿಸುವ ಪ್ರಯತ್ನ ನಡೆಯುತ್ತದೆ ಎಂಬುದನ್ನು, ಹಿಂದಿನ ಪ್ರಯತ್ನವಂತು ಠುಸ್ ಎಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.