ಎನ್ಡಿಎ ಸರ್ಕಾರ ದೇಶದ ಭದ್ರತಾ ಸಾಮರ್ಥ್ಯವನ್ನು ವೃದ್ಧಿಸಲು ಸದಾ ಉತ್ತೇಜನವನ್ನು ನೀಡುತ್ತಾ ಬಂದಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ, ಪ್ರಸ್ತುತ ‘ನಿಮಗೆ ಶಾಂತಿಯ ಅಗತ್ಯವಿದ್ದರೆ, ಯುದ್ಧಕ್ಕೆ ಸಿದ್ಧರಾಗಿ’ ಎಂಬ ಧ್ಯೇಯವಿದೆ. ದೇಶದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ, ಯುಪಿಎ ಸರ್ಕಾರವು ಕೇವಲ 5,615 ಕೋಟಿ ರೂಪಾಯಿಗಳನ್ನು ನೀಡಿತ್ತು. ಯುಪಿಎಗೆ ಹಣಕಾಸಿನ ಕೊರತೆಯ ಭಾಸವಾಗಿತ್ತು ಮತ್ತು ಬಜೆಟ್ನಲ್ಲಿ 4 ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಇಸ್ರೋಗೆ ಮೀಸಲಿಟ್ಟಿತ್ತು. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ, ಜುಲೈನಲ್ಲಿ ನೂತನ ಬಜೆಟ್ ಅನ್ನು ಮಂಡಿಸಿತು ಮತ್ತು ಇದರಲ್ಲಿ ಅದೇ ಹಣಕಾಸು ವರ್ಷಕ್ಕೆ ಇಸ್ರೋಗೆ 6 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನೀಡಿತು.
2019-20ರ ಸಾಲಿನ ಮಧ್ಯಂತರ ಬಜೆಟ್ನಲ್ಲಿ, ಇಸ್ರೋ ಅನುದಾನ 10,520 ಕೋಟಿಗೆ ತಲುಪಿತು. ಮೋದಿ ಸರ್ಕಾರದಡಿ ತಲಾ ವರ್ಷಕ್ಕೆ ಇಸ್ರೋ ಅನುದಾನವು ಸರಾಸರಿ 1,000 ಕೋಟಿಗೂ ಅಧಿಕ ಏರಿಕೆಯನ್ನು ಕಂಡಿದೆ. ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್ನಲ್ಲಿ ಕೇಂದ್ರ ಸರ್ಕಾರದ ಒಟ್ಟು ಬಜೆಟ್ ಮೊತ್ತ ಅಂದಾಜು 18 ಲಕ್ಷ ಕೋಟಿ ರೂಪಾಯಿ. 2019-20ರ ಸಾಲಿನ ಬಜೆಟ್ನಲ್ಲಿ ಈ ಮೊತ್ತ ಶೇ.55ರಷ್ಟು ಏರಿಕೆಯನ್ನು ಕಂಡಿದ್ದು, 28 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ, ಹೀಗಾಗಿ, ಬಜೆಟ್ ಶೇ.55ರಷ್ಟು ಏರಿಕೆ ಕಂಡರೆ, ಇಸ್ರೋಗೆ ನೀಡಿದ ಅನುದಾನ ಶೇ.150ರಷ್ಟು ಅಂದರೆ, 4 ಸಾವಿರ ಕೋಟಿ ರೂಪಾಯಿಗಳಿಂದ 6 ಸಾವಿರ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
2014-15ರ ಮಧ್ಯಂತರ ಬಜೆಟ್ನಲ್ಲಿ ಡಿಆರ್ಡಿಓ (Defence Research and Development Organisation) ಗೆ ನೀಡಿದ ಅನುದಾನ 11,960 ಕೋಟಿ ರೂಪಾಯಿ. 2019-20ರ ಮಧ್ಯಂತರ ಬಜೆಟ್ನಲ್ಲಿ ಡಿಆರ್ಡಿಓಗೆ ನೀಡಿದ ಅನುದಾನ 19,021 ಕೋಟಿ ರೂಪಾಯಿ. ಒಟ್ಟು ಬಜೆಟ್ ಮೊತ್ತದಲ್ಲಿ ಶೇ. 55 ರಷ್ಟು ಏರಿಕೆಯಾಗುವುದು ಮಾತ್ರವಲ್ಲ, ಡಿಆರ್ಡಿಓಗೆ ಹಂಚಿಕೆಯಾದ ಹಣದಲ್ಲಿ ಶೇ. 58.4 ರಷ್ಟು ಹೆಚ್ಚಾಗಿದೆ. ಒಟ್ಟು ರಕ್ಷಣಾ ವೆಚ್ಚದ ಶೇಕಡಾವಾರಿನಲ್ಲಿ ಡಿಆರ್ಡಿಓಗೆ ಹಂಚಿಕೆ 2014-15ರ ಮಧ್ಯಂತರ ಬಜೆಟ್ನಲ್ಲಿನ ಶೇ. 5 ರಿಂದ ಶೇ. 6 ಕ್ಕೆ ಏರಿಕೆಯಾಗಿದೆ. ಮೋದಿ ಸರಕಾರದಡಿಯಲ್ಲಿ ಭಾರತವು ಬೃಹತ್ ರಕ್ಷಣಾ ಆಧುನೀಕರಣಕ್ಕೆ ಒಳಗಾಗುತ್ತಿದೆ. ಸಂಶೋಧನೆಗೆ ಉತ್ತೇಜನ ಮತ್ತು ಖರ್ಚುಗಳು ವರ್ವಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ವಿಶ್ವದ ಅತ್ಯಂತ ಸಮರ್ಥ ಬಾಹ್ಯಾಕಾಶ ಏಜೆನ್ಸಿಗಳಲ್ಲಿ ಇಸ್ರೋ ಕೂಡ ಒಂದಾಗಿದೆ. ಇದು ನಮ್ಮ ದೇಶವನ್ನು ಜಗತ್ತಿನ ಅತ್ಯಂತ ಪ್ರಮುಖ ಬಾಹ್ಯಾಕಾಶ ಶಕ್ತಿಯನ್ನಾಗಿ ರೂಪಿಸಿದೆ. ಇಸ್ರೋ ಇದುವರೆಗೆ 103 ಸ್ಪೇಸ್ ಕ್ರಾಫ್ಟ್ ಮಿಶನ್ ಮತ್ತು 72 ಉಡಾವಣಾ ಕಾರ್ಯಗಳನ್ನು ನಡೆಸಿದೆ. ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶಕ್ಕಾಗಿ ಸಂಸ್ಥೆಯು 10 ವಿದ್ಯಾರ್ಥಿ ಉಪಗ್ರಹಗಳನ್ನು ಕೂಡ ಉಡಾವಣೆಗೊಳಿಸಿದೆ. ನೆರೆಯ ರಾಷ್ಟ್ರಗಳ ಉಪಗ್ರಹಳನ್ನು ಉಡಾವಣೆಗೊಳಿಸುವ ಮೂಲಕ ಇಸ್ರೋ ನೆರೆ ರಾಷ್ಟ್ರಗಳಲ್ಲಿ ಮೃದು ಶಕ್ತಿಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡಿದೆ. ಯುಎಸ್ಎ, ಇಸ್ರೇಲ್, ಜಪಾನ್ ಮತ್ತು ಅನೇಕ ಐರೋಪ್ಯ ರಾಷ್ಟ್ರಗಳ ಸೇರಿದಂತೆ 269 ವಿದೇಶಿ ಉಪಗ್ರಹಗಳನ್ನು ಮತ್ತು 32 ದೇಶೀಯ ಉಪಗ್ರಹಗಳನ್ನು ಇಸ್ರೋ ಉಡಾವಣೆಗೊಳಿಸಿದೆ.
ಬುಧವಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತವು ಒಂದು ದೊಡ್ಡ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ ಮತ್ತು ಉಪಗ್ರಹ-ವಿರೋಧಿ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂಬ ಘೋಷಣೆಯನ್ನು ಮಾಡಿದ್ದಾರೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಇತ್ತೀಚಿನ ಸಾಧನೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕೆಳ ಭೂ ಕಕ್ಷೆಯಲ್ಲಿ ಭೂಮಿಯಿಂದ 300 ಕಿ.ಮೀ ದೂರದಲ್ಲಿರುವ ಲೈವ್ ಲೋವರ್ ಆರ್ಬಿಟ್ ಸ್ಯಾಟಲೈಟ್ (ಎಲ್ಒಎಸ್)ಅನ್ನು ಭಾರತವು ಎ-ಸ್ಯಾಟ್ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಹೊಡೆದು ಹಾಕಿದೆ ಎಂದು ಹೇಳಿದರು. ಹೊಸದಾಗಿ ಅಭಿವೃದ್ಧಿ ಹೊಂದಿದ ಎಸ್ಯಾಟ್ ಅನ್ನು ಮಹತ್ವದ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಭಾರತದ ಬಾಹ್ಯಾಕಾಶ ಶಕ್ತಿಗೆ ಮೆಗಾ ಬಲವನ್ನು ನೀಡಿದ ಈ ಕಾರ್ಯಕ್ರಮಕ್ಕೆ “ಮಿಷನ್ ಶಕ್ತಿ” ಎಂಬ ಹೆಸರನ್ನು ಇಡಲಾಗಿದೆ. ಈ ಮಿಷನ್ ದೊಡ್ಡ ಯಶಸ್ಸನ್ನು ಕಂಡಿದೆ. ಕೇವಲ 3 ನಿಮಿಷಗಳಲ್ಲಿ ಈ ಮಿಷನ್ ತನ್ನ ಕಾರ್ಯವನ್ನು ಮಾಡಿ ಮುಗಿಸಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಒಂದು ದೊಡ್ಡ ಶಕ್ತಿಯನ್ನು ನೀಡಿದೆ ಮತ್ತು ಯುಎಸ್, ಚೀನಾ ಮತ್ತು ರಷ್ಯಾಗಳ ಬಳಿಕ ಈ ತಂತ್ರಜ್ಞಾನವನ್ನು ಹೊಂದಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಿದೆ.
ಯುಎಸ್, ಚೀನಾ ಮತ್ತು ರಷ್ಯಾ ನಂತರ ಬಾಹ್ಯಾಕಾಶದಲ್ಲಿ ಲೈವ್ ಸ್ಯಾಟಲೈಟ್ ಅನ್ನು ಹೊಡೆದುರುಳಿಸುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದ ಸಾಧನೆಯನ್ನು ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಭಾರತ ಮಾತ್ರ ಎಂಬುದನ್ನು ಮೋಡಿ ಅತ್ಯಂತ ಹೆಮ್ಮೆಯಿಂದ ಸ್ಪಷ್ಟಪಡಿಸಿದ್ದಾರೆ. ಅಂತರರಾಷ್ಟ್ರೀಯ ಕಾನೂನಿನ ಯಾವುದೇ ನಿಯಮವನ್ನು ಭಾರತ ಉಲ್ಲಂಘಿಸುವುದಿಲ್ಲ ಮತ್ತು ದೇಶದ 130 ಕೋಟಿ ನಾಗರಿಕರ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಈ ಹೆಜ್ಜೆಯನ್ನು ಇಟ್ಟಿದ್ದೇವೆ ಎಂಬುದನ್ನು ವಿಶ್ವಕ್ಕೆ ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.
ಈ ಎಲ್ಲಾ ಸಾಧನೆಗಳು ಇಸ್ರೋ ಇಲ್ಲದೆ ಸಾಧ್ಯವೇ ಇರಲಿಲ್ಲ. ಇಸ್ರೋದ ಬಜೆಟ್ ಹೆಚ್ಚಿಸುವಲ್ಲಿ ಮೋದಿಯ ಸರಕಾರವು ತೆಗೆದುಕೊಂಡ ಮಹತ್ವದ ನಿರ್ಧಾರಗಳು ಖಂಡಿತವಾಗಿಯೂ ಇಸ್ರೋದ ದಕ್ಷತೆಯನ್ನು ವೃದ್ಧಿಸಿ ದೇಶಕ್ಕೆ ಪ್ರಯೋಜನವನ್ನು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.