ನವದೆಹಲಿ: ಪುಣೆ ಮೂಲದ ತನಯ್ ಬೊತಾರ ಅವರು ಕಳೆದ ಮಂಗಳವಾರ ಸಿಂಗಾಪುರದಲ್ಲಿ ‘ಏಷ್ಯಾ ಯಂಗ್ ಡಿಸೈನರ್ ಅವಾರ್ಡ್ 2019’ ಸ್ವೀಕರಿಸಿದ್ದಾರೆ. ಇವರು ಪುಣೆಯ ಪದ್ಮಭೂಷಣ್ ವಸಂತದಾದಾ ಪಾಟೀಲ್ ಕಾಲೇಜ್ ಆಫ್ ಆರ್ಕಿಟ್ರೆಕ್ಚರ್ನ ವಿದ್ಯಾರ್ಥಿಯಾಗಿದ್ದಾರೆ.
ಯುದ್ಧ ಪೀಡಿತ ಸಿರಿಯಾದ ಮಕ್ಕಳಿಗೆ ಪ್ಲೇ ಸ್ಪೇಸ್ಗಳನ್ನು ವಿನ್ಯಾಸಪಡಿಸಿದ್ದಕ್ಕಾಗಿ ನಿಪ್ಪಾನ್ ನೀಡುವ ಏಷ್ಯಾ ಯಂಗ್ ಡಿಸೈನರ್ ಪ್ರಶಸ್ತಿಗೆ ಅವರು ಪಾತ್ರರಾಗಿದ್ದಾರೆ.
23 ವರ್ಷದ ತನಯ್ ಅವರು, 14 ದೇಶಗಳ 18 ಸಾವಿರ ವಿದ್ಯಾರ್ಥಿಗಳನ್ನು ಸೋಲಿಸಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾವನಾತ್ಮಕ ಮೌಲ್ಯಗಳುಳ್ಳ ಸುಸ್ಥಿರ ಯೋಜನೆಗಳನ್ನು ವಿನ್ಯಾಸಪಡಿಸುವ ಸವಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ತನಯ್ ಅವರು ಯುದ್ಧಪೀಡಿತ ಸಿರಿಯಾದ ಮಕ್ಕಳ ಓದುವಿಕೆ ಮತ್ತು ಆಟವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಪೂರಕವಾದ ’ಪ್ಲೇ ಸ್ಪೇಸ್’ ಅನ್ನು ವಿನ್ಯಾಸಪಡಿಸಿದ್ದರು. ಇದು ತೀರ್ಪುಗಾರರ ಮನಸ್ಸನ್ನು ಗೆದ್ದಿದೆ.
ಪ್ರಶಸ್ತಿ ಗೆದ್ದ ತನಯ್ ಅವರಿಗೆ ಭಾರತದಿಂದ 50 ಸಾವಿರ ರೂಪಾಯಿ ಮತ್ತು ಏಷ್ಯಾ ಯಂಗ್ ಡಿಸೈನರ್ ಅವಾರ್ಡ್ನಿಂದ 10 ಸಾವಿರ ಡಾಲರ್ ಮೊತ್ತ ದೊರೆತಿದೆ. 50 ಸಾವಿರವನ್ನು ಅವರು ಸಿರಿಯಾದಲ್ಲಿನ ಎನ್ಜಿಓವೊಂದಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.