ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾದ ನಂತರ ಅದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಪಾಕ್ ನೆಲಕ್ಕೆ ನುಗ್ಗಿ ಅಲ್ಲಿನ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿತ್ತು. ಆದರೆ ಹಾಗೆ ಭಾರತೀಯ ಸೇನೆ ಅಂತಹದ್ದೊಂದು ದಾಳಿ ನಡೆಸಿಯೇ ಇಲ್ಲ ಎಂದು ಈ ದೇಶದ ಹಲವಾರು ರಾಜಕೀಯ ನಾಯಕರು,ಬುದ್ಧಿಜೀವಿಗಳು,ಪತ್ರಕರ್ತರು,ಲೇಖಕರು ಮುಂತಾದವರು ತಕರಾರು ತೆಗೆದು ಹಾಗೆ ದಾಳಿ ನಡೆಸಿರುವುದಕ್ಕೆ ಸಾಕ್ಷಿ ಕೇಳಿದ್ದರು. ಸ್ವತಃ ಸೇನಾ ಮುಖ್ಯಸ್ಥರೇ “ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ – ಹೆಣಗಳನ್ನು ಎಣಿಸುವುದು ನಮ್ಮ ಕೆಲಸವಲ್ಲ” ಎಂದು ಹೇಳಿದ ಮೇಲೂ ‘ದಿ ರಾಯಿಟರ್ಸ್’ ಎನ್ನುವ ವಿದೇಶೀ ಮಾಧ್ಯಮವೊಂದರ ಅಸೀಫ ಶಹಜಾದ್ ಎನ್ನುವ ಮುಸಲ್ಮಾನ ವರದಿಗಾರನೊಬ್ಬನ ವರದಿಯನ್ನೇ ಮುಂದಿಟ್ಟುಕೊಂಡು ಅಲ್ಲಿ ದಾಳಿಯೇ ನಡೆದಿಲ್ಲ ಎಂದು ವಾದಿಸತೊಡಗಿದ್ದರು. ಘಟನೆ ನಡೆದಿದ್ದ ಸ್ಥಳದಲ್ಲಿ ಆತ ತೆಗೆದಿದ್ದನೆನ್ನಲಾದ ಫೋಟೋ ತೋರಿಸಿ ಭಾರತೀಯ ಸೇನೆಯೇ ಸುಳ್ಳು ಹೇಳುತ್ತಿದೆ ಎನ್ನುವಂತೆ ಬಿಂಬಿಸತೊಡಗಿದ್ದರು.
ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಮೌಲಾನಾ ಉಮರ್ ಎನ್ನುವವನೇ ಸ್ವತಃ ಬಾಲಾಕೋಟ್ ಉಗ್ರ ಶಿಬಿರಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿರುವ ಆಡಿಯೋ ಬಿಡುಗಡೆಯಾದ ನಂತರವೂ ಸಾಕ್ಷಿ ಪ್ರೇಮಿಗಳ ಬಳಗ ಅಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು ಸುಳ್ಳು ಎಂದೇ ವಾದಿಸುತ್ತಿತ್ತು. ಆ ಸಮಯದಲ್ಲಿ ಅಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಗಳ ಆಧಾರದ ಮೇಲೆ ಸಾವಿನ ಸಂಖ್ಯೆ ಅಂದಾಜಿಸಿದರೂ ಅದಕ್ಕೂ ಪಾಕೀಸ್ತಾನದ ಅನಧಿಕೃತ ರಾಯಭಾರಿಗಳ ಬಳಗ ಸೊಪ್ಪು ಹಾಕಿರಲಿಲ್ಲ.
ಆದರೆ ಸತ್ಯ ಒಂದೊಂದಾಗಿ ಹೊರಬರುತ್ತಿದ್ದಂತೆಯೇ ಸಾಕ್ಷಿ ಕೇಳುತ್ತಿದ್ದವರ ಸುಳಿವೇ ಸಿಗದಂತಾಗಿದೆ. ವಾಸ್ತವವಾಗಿ ದಾಳಿ ನಡೆದ ಪ್ರದೇಶದೊಳಕ್ಕೆ ಹೊರಗಿನ ಯಾರೊಬ್ಬರಿಗೂ ಪ್ರವೇಶವನ್ನೇ ನೀಡಲಾಗಿಲ್ಲ ಎನ್ನುವ ಸತ್ಯ ಯಾವಾಗ ಜಗತ್ತಿಗೆ ತಿಳಿದುಹೋಯಿತೋ, ಆಗ ಅಸೀಫ ಶಹಜಾದ್ ಎನ್ನುವ ಮುಸಲ್ಮಾನ ವರದಿಗಾರನೊಬ್ಬ ತೋರಿಸಿದ್ದ ಫೋಟೋ ಒಂದನ್ನೇ ಆಧಾರವಾಗಿಟ್ಟುಕೊಂಡು ಭಾರತೀಯ ಸೇನೆಯ ಬಳಿ ಸಾಕ್ಷಿ ಕೇಳುತ್ತಿದ್ದ ಪರದೇಶೀ ಪ್ರೇಮಿಗಳ ಬಾಯಿ ಕೊಂಚ ಮಟ್ಟಿಗೆ ಬಂದ್ ಆಯಿತು.
ಬಾಂಬ್ ದಾಳಿಯ ನಂತರ ಸುಮಾರು ಮೂವತ್ತೈದು ಭಯೋತ್ಪಾದಕರ ಹೆಣಗಳನ್ನು ಆ ಸ್ಥಳದಿಂದ ಒಯ್ಯಲಾದ ಬಗ್ಗೆ ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನೇ ಆಧರಿಸಿ ಮಾಧ್ಯಮಗಳು ವರದಿ ಮಾಡಿದ ನಂತರ ಸಾಕ್ಷಿ ಕೇಳುತ್ತಿದ್ದವರ ಧ್ವನಿ ಮತ್ತೊಂದಷ್ಟು ಕುಗ್ಗಿದ್ದು ಸುಳ್ಳಲ್ಲ. ಅದರ ಜೊತೆ ಜೊತೆಗೇ ಸತ್ತ ಭಯೋತ್ಪಾದಕರ ಹೆಣಗಳನ್ನು ಪೆಟ್ರೋಲ್ ಸುರಿದು ಸುಟ್ಟು ಹಾಕಿದ ಬಗ್ಗೆಯೂ, ಇನ್ನೊಂದಷ್ಟು ಹೆಣಗಳನ್ನು ಹತ್ತಿರದ ನದಿಯೊಂದರಲ್ಲಿ ಬಿಸಾಡಿದ ಬಗ್ಗೆಯೂ ಸ್ಥಳೀಯ ಸಾಕ್ಷಿಗಳು ಮಾತನಾಡಿದ ನಂತರ ಸಾಕ್ಷಿ ಕೇಳುತ್ತಿದ್ದ ಭಾರತೀಯ ಪಾಕ್ ಪ್ರೇಮಿಗಳ ಧ್ವನಿ ಮತ್ತಷ್ಟು ಕ್ಷೀಣವಾಯಿತು.
ಆದರೆ ಯಾವಾಗ ಪಾಕೀಸ್ತಾನದ ಬಾಲಾಕೋಟ್ ನ ಜೈಷೆ ಮೊಹಮದ್ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಮೊದಲು ಮತ್ತು ನಂತರದಲ್ಲಿ ವಿದೇಶೀ ಉಪಗ್ರಹಗಳು ಸೆರೆಹಿಡಿದಿದ್ದ ಚಿತ್ರಗಳು ಬಹಿರಂಗವಾದವೋ, ಆ ಚಿತ್ರದಲ್ಲಿ ವಾಯು ದಾಳಿಯಿಂದ ಪಾಕ್ ತರಬೇತಿ ನಿರತ ಉಗ್ರರು ಮತ್ತು ಹಿರಿಯ ಉಗ್ರರ ಹಾಸ್ಟೆಲ್ ಗಳು, ಅತಿಥಿ ಗೃಹ ಮತ್ತು ಇತರ ಎರಡು ಕಟ್ಟಡಗಳು ನೆಲಸಮವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿತೋ, ಆಗ ಸಾಕ್ಷಿ ಕೇಳುತ್ತಿದ್ದ ಮುಖಗಳೆಲ್ಲಾ ಎಕಾಏಕಿ ಕಾಣೆಯಾಗಿಬಿಟ್ಟವು!
ಬಾಲಾಕೋಟ್ ಉಗ್ರ ನೆಲೆಯ ಉತ್ತರಕ್ಕೆ ಮರಗಳಿಂದ ಆವೃತ್ತವಾಗಿದ್ದ ಕಟ್ಟಡಗಳು ದಾಳಿಯ ನಂತರ ಮಾರ್ಚ್ 4ನೇ ತಾರೀಖಿನಂದು ತೆಗೆದ ಚಿತ್ರಗಳಲ್ಲಿ ಕಾಣಿಸುತ್ತಿಲ್ಲ. ಆ ಜಾಗದಲ್ಲಿ ಮಣ್ಣಿನ ಅವಶೇಷಗಳು ಪತ್ತೆಯಾಗಿವೆ. ಇವೆಲ್ಲವೂ ಬಾಲಾಕೋಟ್ ಉಗ್ರ ನೆಲೆಯ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ ಸ್ಪಷ್ಟ ಸಾಕ್ಷಿಯಾಗಿವೆ. ಇದಲ್ಲದೆ ಉಗ್ರರ ನೆಲೆಗಳು ಭಾರತೀಯ ವಾಯುಪಡೆಯ ದಾಳಿಯಿಂದ ನಾಶವಾದ ಬಳಿಕ ಸುಮಾರು 200 ಉಗ್ರರ ಶವಗಳನ್ನು ಖೈಬರ್ ಫಖ್ತುಂಕ್ವಾದ ಬುಡಕಟ್ಟು ಪ್ರದೇಶಗಳಿಗೆ ರವಾನಿಸಿದ ವಿಚಾರ ಗಿಲ್ಗಿಟ್ ಮೂಲದ ಸಾಮಾಜಿಕ ಕಾರ್ಯಕರ್ತನೊಬ್ಬನ ಮೂಲಕ ಬಹಿರಂಗಗೊಂಡಿದೆ.
ಇಷ್ಟೆಲ್ಲಾ ಆದರೂ ವಾಯುಪಡೆಯ ದಾಳಿಯ ಸಾಕ್ಷಿ ಕೇಳಿದವರ್ಯಾರೂ ಪತ್ತೆಯಿಲ್ಲ. ಸಾಕ್ಷಿ ಸಿಕ್ಕಿರುವ ಈ ಸಂದರ್ಭದಲ್ಲಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಾದರೂ ಅವರು ಕಾಣಿಸಿಕೊಳ್ಳಬೇಕಿತ್ತು. ಆದರೆ ಕಾಣಿಸುತ್ತಿಲ್ಲ!
ಹಾಗಾದರೆ ಸಾಕ್ಷಿ ಕೇಳಿದವರೆಲ್ಲಾ ಎಲ್ಲಿ ಹೋದರು? ದಯವಿಟ್ಟು ಹುಡುಕಿಕೊಡಿ ಪ್ಲೀಸ್..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.