ನವದೆಹಲಿ: ಭಾರತ ರಷ್ಯಾದ ಜಾಯಿಂಟ್ ವೆಂಚರ್ನೊಂದಿಗೆ ನಿರ್ಮಾಣ ಮಾಡುತ್ತಿರುವ ಬ್ರಹ್ಮೋಸ್ ಮಿಸೈಲ್ಗೆ ಹೊರ ದೇಶದಿಂದ ಭಾರೀ ಬೇಡಿಕೆಗಳು ಬರುತ್ತಿವೆ. ಈಗಾಗಲೇ ಅಸಿಯಾನ್ ರಾಷ್ಟ್ರಗಳು, ಚಿಲಿ ಮತ್ತು ಬ್ರಿಕ್ಸ್ ಪಾಲುದಾರ ದಕ್ಷಿಣ ಆಫ್ರಿಕಾ ಬ್ರಹ್ಮೋಸ್ಗಾಗಿ ಭಾರತಕ್ಕೆ ಪ್ರಸ್ತಾಪ ಸಲ್ಲಿಸಿವೆ.
ಬ್ರಹ್ಮೋಸ್ 300 ಮಿಲಿಯನ್ ಡಾಲರ್ನ ಕಡಿಮೆ ಬಜೆಟ್ನ ಕ್ಷಿಪಣಿಯಾಗಿದೆ. ಬ್ರಹ್ಮೋಸ್ ಮತ್ತು ಆಕಾಶ್ ಎಂಬ ಎರಡು ಪ್ರಮುಖ ರಕ್ಷಣಾ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿ ಮಾಡಲು ಈಗಾಗಲೇ ಅಸಿಯಾನ್ ರಾಷ್ಟ್ರಗಳು ಭಾರತವನ್ನು ಸಂಪರ್ಕ ಮಾಡಿವೆ.
ವರದಿಯ ಪ್ರಕಾರ, 2018ರ ಗಣರಾಜ್ಯೋತ್ಸವದ ಸಂದರ್ಭ ನವದೆಹಲಿಯಲ್ಲಿ ನಡೆದ ಅಸಿಯಾನ್-ಇಂಡಿಯಾ ಸ್ಮರಣಾರ್ಥ ಶೃಂಗಸಭೆಯಲ್ಲಿ, ಆಕಾಶ್ ಮತ್ತು ಬ್ರಹ್ಮೋಸ್ ಮಿಸೈಲ್ ಖರೀದಿಯ ಬಗ್ಗೆ 10 ಅಸಿಯಾನ್ ನಾಯಕರು ಚರ್ಚೆ ನಡೆಸಿದ್ದಾರೆ.
ಮಾತ್ರವಲ್ಲದೇ, ಬ್ರಹ್ಮೋಸ್ ಖರೀದಿಯ ಬಗ್ಗೆ ಫಿಲಿಪೈನ್ಸ್, ದಕ್ಷಿಣ ಕೊರಿಯಾ, ಅಲ್ಜೇರಿಯಾ, ಗ್ರೀಸ್, ಮಲೇಷಿಯಾ, ಥಾಯ್ಲೆಂಡ್, ಈಜಿಪ್ಟ್, ಸಿಂಗಾಪುರ, ಬಲ್ಗೇರಿಯಾಗಳು ಭಾರತದೊಂದಿಗೆ ಮಾತುಕತೆಯಲ್ಲಿ ತೊಡಗಿಕೊಂಡಿವೆ ಎನ್ನಲಾಗಿದೆ.
ಇನ್ನೊಂದೆಡೆ ಡಿಆರ್ಡಿಓ ಅಬಿವೃದ್ಧಿಪಡಿಸಿದ, ಡಿಫೆನ್ಸ್ ಪಿಎಸ್ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವಿನ್ಯಾಸಪಡಿಸಿದ ಆಕಾಶ್ ಮಿಸೈಲ್ನ್ನು ಖರೀದಿ ಮಾಡಲು ಗಲ್ಫ್ ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ.
ಯುಎಇಯಂತಹ ದೇಶಗಳು ’ಮೇಡ್ ಇನ್ ಇಂಡಿಯಾ’ ಮಿಸೈಲ್ ಬಗ್ಗೆ ಒಲವನ್ನು ವ್ಯಕ್ತಪಡಿಸುತ್ತಿವೆ.
ಈಗಾಗಲೇ ಡಿಆರ್ಡಿಓ ಯುಎಇ ಸಚಿವ ಮೊಹಮ್ಮದ್ ಅಹ್ಮದ್ ಅಲ್ ಬೋವರ್ಡಿ ಅಲ್ ಫಲಾಸಿ ಅವರಿಗೆ ‘ಆಕಾಶ್’ ಸರ್ಫೇಸ್ ಟು ಏರ್ ಮಿಸೈಲ್ ಸಿಸ್ಟಮ್ನ ಪ್ರದರ್ಶನವನ್ನು ತೋರಿಸಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.