ನವದೆಹಲಿ: ಜಮ್ಮು ಕಾಶ್ಮೀರದ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಕಲಂ 370ಗೆ ತಿದ್ದುಪಡಿಯನ್ನು ತರಲು ಕೇಂದ್ರ ಸಂಪುಟ ಗುರುವಾರ ಅನುಮೋದನೆಯನ್ನು ನೀಡಿದೆ.
ಕಲಂ 370ಗೆ ತಿದ್ದುಪಡಿಯನ್ನು ತಂದು, ಜಮ್ಮು ಕಾಶ್ಮೀರದಲ್ಲಿ ವಾಸಿಸುವ ಎಸ್ಟಿ, ಎಸ್ಸಿ ಜನಾಂಗದವರಿಗೆ ಮೀಸಲಾತಿಯ ಪ್ರಯೋಜನವನ್ನು ನೀಡಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಂಪುಟ ಸಮಿತಿ ಸಭೆಯಲ್ಲಿ ಕಲಂ 370ಗೆ ತಿದ್ದುಪಡಿಯನ್ನು ತರುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
’ಸಂವಿಧಾನದ (77ನೇ ತಿದ್ದುಪಡಿ) ಕಾಯ್ದೆ, 1995 ಮತ್ತು ಜಮ್ಮು ಕಾಶ್ಮೀರಕ್ಕಾಗಿನ ಸಂವಿಧಾನದ (103ನೇ ತಿದ್ದುಪಡಿ) ಕಾಯ್ದೆ, 2019 ಮೂಲಕ ತಿದ್ದುಪಡಿ ಮಾಡಲಾದ ನಿಬಂಧನೆಗಳ ಉದ್ದೇಶಕ್ಕೆ ಪೂರಕವಾಗಿ ಇಂದು ತೆಗೆದುಕೊಂಡ ನಿರ್ಧಾರ ಕಾರ್ಯನಿರ್ವಹಿಸುತ್ತದೆ. ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾದ) 370ನೇ ವಿಧಿಯ ಪರಿಚ್ಛೇದ (1) ರಡಿಯಲ್ಲಿ ಅಧ್ಯಕ್ಷರಿಂದ 2019ರ ತಿದ್ದುಪಡಿ ಆದೇಶ ಜಾರಿಯಾಗಿದೆ’ ಎಂದಿದ್ದಾರೆ.
ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿಯನ್ನು ನೀಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.