ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಮ್ಮಿಕೊಂಡ ಮೊದಲ ಸಾಧನಾ ಸೂಚ್ಯಾಂಕದಲ್ಲಿ ಗುಜರಾತ್, ಕೇರಳ ಮತ್ತು ಚಂಡೀಗಢ ಟಾಪ್ ಸ್ಥಾನವನ್ನು ಪಡೆದುಕೊಂಡಿವೆ.
ಶಿಕ್ಷಣದ ಗುಣಮಟ್ಟದಿಂದ ಹಿಡಿದು ಮೂಲಸೌಕರ್ಯ ಅಭಿವೃದ್ಧಿವರೆಗಿನ 70 ನಿಯತಾಂಕಗಳನ್ನು ಆಧರಿಸಿ ಸೂಚ್ಯಾಂಕವನ್ನು ಅಂತಿಮಗೊಳಿಸಲಾಗಿದೆ.
1,000 ಅಂಕಗಳ ಪೈಕಿ 801ರಿಂದ 850ರ ನಡುವೆ ಅಂಕಗಳನ್ನು ಪಡೆದುಕೊಂಡಿರುವ ಗುಜರಾತ್, ಕೇರಳ, ಚಂಡೀಗಢ ಸೂಚ್ಯಾಂಕದಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿವೆ. ದಾದ್ರಾ, ಗನರ್ ಹವೇಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ತಮಿಳುನಾಡು ಬಳಿಕದ ಸ್ಥಾನವನ್ನು ಪಡೆದುಕೊಂಡಿವೆ. ಇವುಗಳು 751 ಮತ್ತು 800ರ ನಡುವೆ ಅಂಕಗಳನ್ನು ಪಡೆದುಕೊಂಡಿವೆ.
ಆಂಧ್ರ, ಅಸ್ಸಾಂ, ಚಂಡೀಗಢ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ, ಮರ್ಧಯಪ್ರದೇಶ, ಒರಿಸ್ಸಾ, ಉತ್ತರಾಖಂಡಗಳು 700ರಿಂದ 750ರ ನಡುವೆ ಅಂಕ ಪಡೆದುಕೊಂಡಿವೆ, ದಾಮನ್ ಮತ್ತು ದಿಯೂ, ಮಹಾರಾಷ್ಟ್ರ, ಮಿಜೋರಾಂ, ಪುದುಚೇರಿ, ಸಿಕ್ಕಿಂ, ತೆಲಂಗಾಣ ಬಳಿಕದ ಸ್ಥಾನ ಪಡೆದಿದೆ. ಬಿಹಾರ, ಜಾರ್ಖಾಂಡ್, ಜಮ್ಮು ಕಾಶ್ಮೀರ, ಮಣಿಪುರ, ತ್ರಿಪುರಾ, ಯುಪಿ, ಪಶ್ಚಿಮಬಂಗಾಳ, ಲಕ್ಷದ್ವೀಪ, ಅಂಡಮಾನ್, ನಿಕೋಬರ್ 601-650ರ ನಡುವೆ ಅಂಕ ಪಡೆದಿವೆ.
ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್ ಸೂಚ್ಯಾಂಕದಲ್ಲಿ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದ್ದು, 551-600ರ ನಡುವೆ ಅಂಕ ಪಡೆದುಕೊಂಡಿವೆ.
ಅತೀ ಮಹತ್ವದ ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸೂಚ್ಯಾಂಕವನ್ನು ಸಿದ್ಧಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.