ಇಡೀ ದೇಶವೇ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರಿಗಾಗಿ ಕಂಬಿನಿ ಮಿಡಿಯುತ್ತಿದೆ, ಆದರೆ ಕೆಲವು ಲಿಬರಲ್ ಮೀಡಿಯಾಗಳು ಮಾತ್ರ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್ನ ಮೇಲೆ ಮಾನವೀಯತೆ ಹರಿಸುವ ಕಾರ್ಯದಲ್ಲಿ ಬ್ಯುಸಿಯಾಗಿವೆ. ದಾರ್ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ಸಾಮಾನ್ಯ ಹುಡುಗ ಎಂದೂ ಬಿಂಬಿಸಲು ಕೆಲವು ಮಾಧ್ಯಮಗಳು ಪ್ರಯತ್ನಿಸಿವೆ. ಆತನ ಕಥೆಯನ್ನು ಜನರು ಮಾನವೀಯ ನೆಲೆಯಲ್ಲಿ ನೋಡುವಂತೆ ಮಾಡಲು ಇವುಗಳು ಪ್ರಯತ್ನಿಸಿವೆ. ಆದರೆ ದಾರ್ ಭಯೋತ್ಪಾದಕ ಎಂಬ ಸತ್ಯ ಎಂದಿಗೂ ಬದಲಾಗದು. ಈತ 2016ರಲ್ಲಿ ವಾನಿ ಹತ್ಯೆ ಬಳಿಕ ನಡೆದ ದೊಂಬಿಯಲ್ಲಿ ಪಾಲ್ಗೊಂಡಿದ್ದ, ಒಂದು ಬಾರಿ ಯೋಧರ ಕೈಯಿಂದ ಪೆಟ್ಟನ್ನೂ ತಿಂದಿದ್ದ, ಮಾತ್ರವಲ್ಲ ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುವುದರಲ್ಲೂ ಸಕ್ರಿಯನಾಗಿದ್ದ.
ಕೆಲ ಭಾರತೀಯ ಮಾಧ್ಯಮಗಳು ಕಲ್ಲು ತೂರಾಟಗಾರರ ಬಗ್ಗೆಯೂ ಅನುಕಂಪ ಹೊಂದಿವೆ. ಲುಟಿಯಾನ್ ಮಾಧ್ಯಮಗಳು ಇವರನ್ನು ಅಮಾಯಕರು, ಶಾಂತಿಪ್ರಿಯರು, ತಪ್ಪು ತಿಳುವಳಿಕೆಗೊಳಗಾದ ಯುವಕರು ಎಂದೇ ಬಣ್ಣಿಸುತ್ತದೆ. ಈ ಕಲ್ಲು ತೂರಾಟಗಾರರ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ಅಪಾರವಾದ ಕಾಳಜಿಯಿದೆ. ಬಹುಶಃ ಕಲ್ಲು ತೂರಾಟಗಾರರಿಗೆ ಇಷ್ಟೊಂದು ಪ್ರಮಾಣದ ಅನುಕಂಪ, ಕಾಳಜಿಯನ್ನು ವ್ಯಕ್ತಪಡಿಸುವ ದೇಶ ಭಾರತವೊಂದೇ ಇರಬಹುದು. ರಷ್ಯಾ, ಇಸ್ರೇಲ್ನಂತಹ ದೇಶಗಳಲ್ಲಿ ಅವರದ್ದೇ ವಿಭಿನ್ನ ಶೈಲಿಯಲ್ಲಿ ಇಂತಹವರಿಗೆ ಪಾಠ ಕಲಿಸಲಾಗುತ್ತದೆ. ಆದರೆ ಭಾರತದಲ್ಲಿ, ಕಲ್ಲು ತೂರಾಟಗಾರರ ವಿರುದ್ಧ ಕ್ರಮಕೈಗೊಳ್ಳುವ ಮೇಜರ್ ಆದಿತ್ಯಾ ಮತ್ತು ಮೇಜರ್ ಗೋಗಯ್ ಅಂತವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಯೋಧರು ಕಲ್ಲುತೂರಾಟಗಾರರ ಮೇಲೆ ಕ್ರಮಕೈಗೊಂಡಾಗ ಲಿಬರಲ್ ಮೀಡಿಯಾ, ಪ್ಲಾಕಾರ್ಡ್ ಗ್ಯಾಂಗ್, ಕ್ಯಾಂಡಲ್ ಮಾರ್ಚ್ ಗ್ಯಾಂಗ್, ಮಾನವ ಹಕ್ಕುಗಳ ಆಯೋಗ ದೊಡ್ಡ ಮಟ್ಟದಲ್ಲೇ ಬೊಬ್ಬಿಡುತ್ತವೆ.
ಕಲ್ಲು ತೂರಾಟಗಾರರು ದಾರಿ ತಪ್ಪಿದ ಯುವಕರಲ್ಲ, ಅವರು ಭಯೋತ್ಪಾದಕರಿಗೆ ರಕ್ಷಾ ಕವಚವಾಗಿ ನಿಲ್ಲುವ ನಿಷ್ಕ್ರಿಯ ಉಗ್ರಗಾಮಿಗಳು. ಇವರಿಗೆ ಪಾಕಿಸ್ಥಾನ ಮತ್ತು ಹುರಿಯತ್ ನಾಯಕರುಗಳ ಬೆಂಬಲವಿದೆ. ಕಲ್ಲು ಹೊಡೆದರೆ ಇವರಿಗೆ ಹಣ ಸಿಗುತ್ತದೆ. ಕಲ್ಲು ಹೊಡೆಯುವ ಮೂಲಕ ಇವರು ದೇಶದ ಏಕತೆ ಮತ್ತು ಸಮಗ್ರತೆಗೆ ನೇರ ದಾಳಿಯನ್ನು ಮಾಡುತ್ತಿದ್ದಾರೆ. ಇವರು ಕ್ರಿಮಿನಲ್ಸ್ಗಳಾಗಿದ್ದು, ಇವರನ್ನು ಕ್ರಿಮಿನಲ್ಸ್ಗಳ ರೀತಿಯಲ್ಲೇ ಶಿಕ್ಷಿಸಬೇಕಿದೆ.
ಇವರು ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ಬೊಬ್ಬಿಡುತ್ತವೆ, ಆದರೆ ಈ ಶಿಕ್ಷಿತ ಕಾಶ್ಮೀರಿ ಯುವಕರು ಉಗ್ರ ಸಿದ್ಧಾಂತದಿಂದ ಪ್ರೇರಿತಗೊಂಡು ಕಲ್ಲುತೂರಾಟದಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆಯೇ ಹೊರತು ಆರ್ಥಿಕ ಸಂಕಷ್ಟದಿಂದಾಗಿ ಅಲ್ಲ. ನಿರುದ್ಯೋಗದ ನೆಪ ಎಂದಿಗೂ ಇವರಿಗೆ ಅನ್ವಯವಾಗುವುದಿಲ್ಲ. ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸುವ ಬದಲು ಕೆಲವರು ಟಿವಿ ಸ್ಟುಡಿಯೋದಲ್ಲಿ ಕುಳಿತು ಇವರ ಪರ ವಕಾಲತ್ತು ಮಾಡುತ್ತಾರೆ. ಈ ರೀತಿ ಮಾಡುವ ದೇಶ ನಮ್ಮದೊಂದೇ. ರಷ್ಯಾ, ಚೀನಾ, ಅಮೆರಿಕಾಗಳಲ್ಲಿ ಇಂತಹವರ ವಿರುದ್ಧ ಮರು ಚಿಂತನೆ ಮಾಡದೆಯೇ ಕ್ರಮ ಜರುಗಿಸಲಾಗುತ್ತದೆ.
ಎಡಪಂಥೀಯರು ಇವರ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿದ್ದು, ಆಗಾಗ ಇವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎನ್ನುತ್ತಿರುತ್ತಾರೆ. ಇದರ ಭಾಗವಾಗಿಯೇ, 2018ರ ಫೆಬ್ರವರಿಯಲ್ಲಿ ಮುಫ್ತಿ ಸರ್ಕಾರ 9,730 ಕಲ್ಲು ತೂರಾಟಗಾರರ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿತ್ತು. ಇದರ ಫಲಿತಾಂಶವಾಗಿ ಕಲ್ಲುತೂರಾಟಗಾರರು ಮತ್ತೆ ಚಿಗುರಿಕೊಂಡರು. ಶೋಪಿಯಾನದ ರೈಂಬೋ ಸ್ಕೂಲ್ನ ಬಸ್ನ್ನೂ ಇವರು ಟಾರ್ಗೆಟ್ ಮಾಡಿಕೊಂಡರು. ಪ್ರವಾಸಿಗರನ್ನು, ನಾಗರಿಕರನ್ನು, ಶಾಲಾ ಮಕ್ಕಳನ್ನೂ ಟಾರ್ಗೆಟ್ ಮಾಡಿಕೊಂಡು ಅವರಲ್ಲಿ ಭಯ ಹುಟ್ಟಿಸಿದರು.
ಇಂತಹ ದುಷ್ಕರ್ಮಿಗಳ ವಿರುದ್ಧ ಕ್ರಮ ಜರುಗಿಸಲು ಸೇನೆ ಪೆಲ್ಲೆಟ್ ಗನ್ಗಳನ್ನು ಬಳಸಿದರೆ ಈ ಲಿಬರಲ್ಗಳು, ಮಾನವ ಹಕ್ಕುಗಳ ಪ್ರತಿಪಾದಕರು ದೊಡ್ಡದಾಗಿ ಕೂಗು ಹಾಕುತ್ತಾರೆ. ಪೆಲ್ಲೆಟ್ ಗನ್ಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಜ.ಕಾಶ್ಮೀರ ಬಾರ್ ಕೌನ್ಸಿಲ್ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದೆ. ಈ ಅರ್ಜಿಯನ್ನು ಅಲ್ಲಿನ ಹೈಕೋರ್ಟ್ ತಿರಸ್ಕರಿಸಿದ್ದರಿಂದ ಇವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ, ಪೆಲ್ಲೆಟ್ ಬದಲು ಬೇರೆ ವಿಧಾನ ಅನುಸರಿಸುವಂತೆ ಸಲಹೆಯನ್ನು ನೀಡಿದೆ. ಕಲ್ಲು ತೂರಾಟಗಾರರನ್ನು ಎದುರಿಸಲು ಬೇರೆ ಮಾರ್ಗವನ್ನು ಬಳಸುವತ್ತ ಸೇನೆ ಅನಿವಾರ್ಯವಾಗಿ ಚಿಂತನೆ ನಡೆಸುವಂತಾಗಿದೆ. ಕಲ್ಲುತೂರಾಟಗಾರರು ಮಿತಿ ಮೀರಿದರೆ ರೈಫಲ್ ಎತ್ತಿಕೊಳ್ಳುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಸಿಆರ್ಪಿಎಫ್ ಮಾರ್ಮಿಕವಾಗಿಯೇ ನುಡಿದಿದೆ. ಕಲ್ಲು ತೂರಾಟದ ಸನ್ನಿವೇಶಗಳಲ್ಲಿ ಅಪರಾಧಿಗಳನ್ನು ಸಂತ್ರಸ್ಥರಂತೆ ಮತ್ತು ರಕ್ಷಕರನ್ನು ಅಪರಾಧಿಗಳಂತೆ ನೋಡುವ ಪ್ರವೃತ್ತಿಯನ್ನು ಲಿಬರಲ್ಸ್ ಬೆಳೆಸಿಕೊಂಡಿದ್ದಾರೆ. ಈ ಮೂಲಕ ಸೇನೆ ಮತ್ತು ಭಾರತದ ವಿರುದ್ಧ ಹೋರಾಡಲು ದುಷ್ಕರ್ಮಿಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಸೇನೆ ಭಯೋತ್ಪಾದಕರಿಗಿಂತ ಹೆಚ್ಚು ನಾಗರಿಕರನ್ನೇ ಕೊಲೆ ಮಾಡುತ್ತಿದೆ ಎಂದಿದ್ದರು. ಮಾತ್ರವಲ್ಲ, ಸೇನೆಯ ಆಲ್ ಔಟ್ ಆಪರೇಶನ್ನನ್ನು ನರಮೇಧ ಎಂದು ವಿಶ್ಲೇಷಿಸಿದ್ದರು, ನಾಲ್ಕು ಭಯೋತ್ಪಾದಕರನ್ನು ಕೊಂದರೆ, 14 ನಾಗರಿಕರನ್ನು ಸೈನಿಕರು ಕೊಲ್ಲುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ಲಷ್ಕರ್ ಇ ತೋಯ್ಬಾದ ಮುಖಂಡ ಮಹಮೂದ್ ಶಾ ಶ್ಲಾಘನೆ ವ್ಯಕ್ತಪಡಿಸಿದ್ದ. ಗುಲಾಂ ನಬಿ ಅವರ ಅಭಿಪ್ರಾಯವನ್ನೇ ನಾವು ಕೂಡ ಹೊಂದಿದ್ದೇವೆ ಎಂದ. ಇಂತಹ ನಾಯಕರುಗಳು, ಲಿಬರಲ್ಗಳು, ಮಾಧ್ಯಮಗಳು ಕಲ್ಲು ತೂರಾಟಗಾರರ ಬಗ್ಗೆ ಮೃದು ಭಾವನೆಯನ್ನು ಹೊಂದಿರುವುದರಿಂದಲೇ ಕಾಶ್ಮೀರದ ಸ್ಥಿತಿ ಬಿಗಡಾಯಿಸಿರುವುದು. ಕಲ್ಲುತೂರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಸಾಧ್ಯವಾಗಿದ್ದರೆ ಇಂದು ಭಯೋತ್ಪಾದನೆಯ ಬೇರು ಅಲ್ಲಿ ನೆಲೆಯೂರಲು ಸಾಧ್ಯವೇ ಆಗುತ್ತಿರಲಿಲ್ಲ.
ಸೇನೆ ಮತ್ತು ಸೇನೆ ಜರುಗಿಸುವ ಕ್ರಮವನ್ನು ನಿರಂತರವಾಗಿ ಖಂಡಿಸುವ ಮೂಲಕ ಲಿಬರಲ್ಗಳು ಲಿಬರಲ್ ಮಾಧ್ಯಮಗಳು ಮತ್ತಷ್ಟು ಕಲ್ಲು ತೂರಾಟಗಾರರ ಉದಯಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತಿದೆ ಮತ್ತು ಪುಲ್ವಾಮದಂತಹ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಅವರಿಗೆ ಅವಕಾಶ ಮಾಡಿಕೊಡುತ್ತಿದೆ. ವಾನಿ ಹತ್ಯೆ ಬಳಿಕದ ದೊಂಬಿಯಲ್ಲಿ ದಾರ್ನನ್ನು 2016ರಲ್ಲೇ ನೆಲಕ್ಕುರುಳಿಸಿದ್ದರೆ ಇಂದು ಪುಲ್ವಾಮ ದಾಳಿಯನ್ನು ನೋಡುವ ದೌರ್ಭಾಗ್ಯ ನಮ್ಮದಾಗುತ್ತಿರಲಿಲ್ಲ. ಈ ಘಟನೆಯ ಹೊಣೆಯನ್ನು ಲಿಬರಲ್ಗಳು, ಲಿಬರಲ್ ಮಾಧ್ಯಮಗಳು ಹೊತ್ತುಕೊಳ್ಳಬೇಕು.
ಪ್ರಸ್ತುತ ಸನ್ನಿವೇಶದಲ್ಲೂ, ಏಕೀಕೃತ ಭಾರತದೆಡೆಗೆ, ಯೋಧರ ಕಡೆಗೆ ಗಮನ ಹರಿಸಬೇಕಾದ ಮಾಧ್ಯಮಗಳು, ದಾರ್ನನ್ನು ಹೀರೋ ಮಾಡುವ ಕಾರ್ಯ ಮಾಡುತ್ತಿವೆ. ಕಾಶ್ಮೀರಿ ಯುವಕರು ಭಯೋತ್ಪಾದಕರಾಗುತ್ತಿರುವುದಕ್ಕೆ ಭಾರತ ಸರ್ಕಾರ ಮತ್ತು ಸೈನಿಕರು ಕಾರಣ ಎಂಬಂತೆ ಬಿಂಬಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.